ಕಾಪು : ಎಲ್ಲಾ ಕ್ಷೇತ್ರದಲ್ಲಿ ಛಾಪನ್ನು ಒತ್ತಿದ ಮಹನೀಯ ವ್ಯಕ್ತಿ ಲೀಲಾಧರ ಶೆಟ್ಟಿ. ಯಾವುದೇ ಅಹಂ ಭಾವವಿರದೆ ಎಲ್ಲರಲ್ಲೂ ಒಂದಾಗುವ ವ್ಯಕ್ತಿ. ಸಮಾಜಸೇವೆ ಎಲ್ಲರೂ ಮಾಡುತ್ತಾರೆ ನನ್ನ ಬಗ್ಗೆ ಯೋಚಿಸದೆ ಗಂಧದ ಕೊರಡಿನಂತೆ ತನ್ನನ್ನು ತಾನು ತೀಡಿ ಸರ್ವರಿಗೂ ಒಳಿತಾಗಲಿ ಎಂಬ ಮನಸ್ಥಿತಿಯ ವ್ಯಕ್ತಿ. ಲೀಲಾಧರ ಶೆಟ್ಟಿ ಮತ್ತು ವಸುಂಧರ ದಂಪತಿಗಳಿಗೆ ಚಿರಶಾಂತಿ ಸಿಗಲಿ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಹೇಳಿದರು.
ಅವರು ಕಾಪು ತಾಲೂಕಿನ ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ಲೀಲಾಧರ ಶೆಟ್ಟಿ ದಂಪತಿಯ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಧಾರ್ಮಿಕ ಚಿಂತಕ ಜನಾರ್ಧನ ಕೊಡವೂರು ಮಾತನಾಡಿ ಸ್ವಂತದ ಬಗ್ಗೆ ಯೋಚನೆ ಮಾಡದ ಲೀಲಾಧರ ಶೆಟ್ಟಿ ಮಾಡಿದ ಕಾರ್ಯಗಳು ಅಜರಾಮರ ಅಂತಹ ಸೇವಕರು ಹುಟ್ಟಬೇಕು. ಧಾರ್ಮಿಕತೆ, ಸಂಸ್ಕೃತಿಯ ಬಗ್ಗೆ ಯೋಚಿಸುವ ವ್ಯಕ್ತಿ ಅವರಾಗಿದ್ದರು ಎಂದರು.
ಈ ಸಂದರ್ಭ ರಾಧಾಕೃಷ್ಣ ಮೆಂಡನ್, ವಿಜಯ್ ಕುಮಾರ್ ಕೊಡವೂರು, ರಂಜಿತ್ ಶೆಟ್ಟಿ, ಅರುಣ್ ಕಮಾರ್ ಬಿ.ಕೆ., ನಡಿಕೆರೆ ರತ್ನಾಕರ ಶೆಟ್ಟಿ, ರವಿರಾಜ ಶೆಟ್ಟಿ ಪಂಜಿತ್ತೂರುಗುತ್ತು, ನಿರ್ಮಲ್ ಕುಮಾರ್ ಹೆಗ್ಡೆ , ಮೋಹನ್ ಬಂಗೇರ ಕಾಪು, ರಘುರಾಮ ಶೆಟ್ಟಿ ಕೊಪ್ಪಲಂಗಡಿ, ದಿವಾಕರ ಶೆಟ್ಟಿ ಮಲ್ಲಾರು ಮತ್ತಿತರರು ಉಪಸ್ಥಿತರಿದ್ದರು.