ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ದಂಡತೀರ್ಥ ಮಠದಲ್ಲಿ ಹೊಸತನದೆಡೆಗೆ ಮೊದಲ ಹೆಜ್ಜೆ - ಚಿಂತನ-ಮಂಥನ

Posted On: 07-01-2024 05:30PM

ಕಾಪು : ಉಡುಪಿ ತಾಲೂಕು ಬ್ರಾಹ್ಮಣ ಮಹಾ ಸಭಾ ಇದರ ರಜತ ಮಹೋತ್ಸವದ ಸಂಭ್ರಮದಲ್ಲಿ ಕಾಪು ವಲಯ ಬ್ರಾಹ್ಮಣ ಸಂಘ ಕಾಪು ಇದರ ವತಿಯಿಂದ ರವಿವಾರ ಕಾಪು ದಂಡತೀರ್ಥ ಮಠದಲ್ಲಿ ಹೊಸತನದೆಡೆಗೆ ಮೊದಲ ಹೆಜ್ಜೆ -ಚಿಂತನ-ಮಂಥನ ಕಾರ್ಯಕ್ರಮ ಸಂಪನ್ನಗೊಂಡಿತು. ಶ್ರೀ ಮಠದ ದೇವರ ಸಾನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಚಿಂತನ ಮಂಥನ ಕಾರ್ಯಕ್ರಮದ ಸಮನ್ವಯಕಾರರಾಗಿ ಹಿರಿಯ ಪತ್ರಕರ್ತರು, ಜಾನಪದ ವಿದ್ವಾಂಸರಾದ ಕೆ.ಎಲ್.ಕುಂಡಂತಾಯ ವಹಿಸಿದ್ದರು. ಸಮಾಜದ ಹಿರಿಯ ವಿದ್ವಾಂಸರು, ಧಾರ್ಮಿಕ,ಸಾಮಾಜಿಕ ಮುಖಂಡರ ಉಪಸ್ಥಿತಿಯಲ್ಲಿ ವಿಷಯಗಳ ಮಂಡನೆ, ಚರ್ಚೆ, ಸಂವಾದಗಳು ನಡೆದವು. ಅಶೌಚ ವಿಷಯದಲ್ಲಿ ಸುದರ್ಶನ ಆಚಾರ್ಯ ಕಲ್ಯಾ, ಸಂಪ್ರದಾಯ-ಪೂಜೆ, -ಪುನಸ್ಕಾರಗಳಲ್ಲಿ ಕಾಲಕ್ಕೆ ತಕ್ಕ ಬದಲಾವಣೆಗಳು ವಿಷಯದಲ್ಲಿ ಪ್ರೊ.ಹೆರ್ಗ ಹರಿಪ್ರಸಾದ ಭಟ್, ಬ್ರಾಹ್ಮಣರಲ್ಲಿ ವಿವಾಹ ಸಮಸ್ಯೆಗಳು -ಪರಿಹಾರ ಈ ಬಗ್ಗೆ ಸುಬ್ರಹ್ಮಣ್ಯ ತಂತ್ರಿ ಪಾದೂರು, ಮಹಿಳೆಯರಿಗೆ ಪೂಜಾ ಅರ್ಹತೆ ಬಗ್ಗೆ ವಸುಧಾ ಮುರಳೀಧರ ತಂತ್ರಿ ಕಲ್ಯಾ, ಬ್ರಾಹ್ಮಣ ಸಂಘಟನೆ, ಸವಾಲುಗಳು ಮತ್ತು ಪರಿಹಾರ ವಿಷಯದಲ್ಲಿ ರಜತೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಬಲ್ಲಾಳ್, ಕರ್ಮದಿಂದ ಬ್ರಾಹ್ಮಣತ್ವ ಈ ಬಗ್ಗೆ ವಿದ್ಯಾಧರ ಪುರಾಣಿಕ್ ವಿಷಯ ಮಂಡಿಸಿದರು.

ಕಾಪು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಮಕೃಷ್ಣ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. ಚಿಂತನ ಮಂಥನದಲ್ಲಿ ವಿದ್ವಾಂಸರಾದ ಕಲ್ಯ ಅಶೋಕ ಆಚಾರ್ಯ, ಖ್ಯಾತ ಜ್ಯೋತಿಷ್ಯ ವಿದ್ವಾಂಸರಾದ ಪ್ರಕಾಶ್ ಅಮ್ಮಣ್ಣಾಯ, ವೇದವ್ಯಾಸ ಐತಾಳ್ ಉಡುಪಿ, ಡಾ.ಸೀತಾರಾಮ ಭಟ್ ದಂಡತೀರ್ಥ, ಎಂ.ಬಿ.ಪುರಾಣಿಕ್ ಮಂಗಳೂರು, ಮಂಜುನಾಥ ಉಪಾಧ್ಯಾಯ ಪರ್ಕಳ, ಶ್ರೀರಾಮ್ ಭಟ್ ಸಾಣೂರು, ವಿದ್ಯಾ ಅಮ್ಮಣ್ಣಾಯ, ಗಣೇಶ್ ಐತಾಳ್ ಉಡುಪಿ, ಲಕ್ಷ್ಮೀನಾರಾಯಣ ತಂತ್ರಿ, ಲಕ್ಷೀಶ ತಂತ್ರಿ, ರವಿಪ್ರಕಾಶ್, ಹರಿಕೃಷ್ಣ ಭಟ್, ಸದಾಶಿವ ಭಟ್ ಕೆ, ಪುರಂದರ ಭಟ್, ಗಣೇಶ್ ರಾವ್, ಕಾಪು ವಲಯ ಮತ್ತು ಉಡುಪಿ ತಾಲೂಕು ವ್ಯಾಪ್ತಿಯ ವಿಪ್ರರು ಉಪಸ್ಥಿತರಿದ್ದರು.

ಕಾಪು ವಲಯ ಬ್ರಾಹ್ಮಣ ಸಂಘದ ಕಾರ್ಯದರ್ಶಿ ವಿದ್ಯಾಧರ ಪುರಾಣಿಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ವಿದ್ವಾಂಸರುಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕೋಶಾಧಿಕಾರಿ ಮನೋಹರ ರಾವ್ ವಂದಿಸಿದರು.