ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜನವರಿ 11-21: ಪಾಂಬೂರಿನ ಪರಿಚಯ ಪ್ರತಿಷ್ಠಾನದಿಂದ ಚಿತ್ರ ಪರಿಚಯ - ನಿಸರ್ಗ ಚಿತ್ರಣ ಶೈಕ್ಷಣಿಕ ವಸತಿ ಶಿಬಿರ

Posted On: 08-01-2024 11:59AM

ಕಾಪು : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನವು 'ಚಿತ್ರ ಪರಿಚಯ - ನಿಸರ್ಗ ಚಿತ್ರಣ ಶೈಕ್ಷಣಿಕ ವಸತಿ ಶಿಬಿರವನ್ನು ಜನವರಿ11 ರಿಂದ ಜನವರಿ 21ರವರೆಗೆ ಪಾಂಬೂರು ರಂಗಪರಿಚಯದಲ್ಲಿ ಆಯೋಜಿಸಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ಅವರು ಕಾಪು ಪತ್ರಕರ್ತರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜನವರಿ 11ರಂದು ಸಾಯಂಕಾಲ 6 ಗಂಟೆಗೆ ಚಿತ್ರಕಲಾವಿದ ಹಾಗೂ ಶಿಕ್ಷಕ ಮಾನ್ಯ ರಮೇಶ್ ಬಂಟಕಲ್ಲು ಇವರಿಂದ ಉದ್ಘಾಟನೆಗೊಳ್ಳುವ ಈ ಶಿಬಿರದಲ್ಲಿ ಮಂಗಳೂರು ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ ಸುಮಾರು 30 ವಿದ್ಯಾರ್ಥಿಗಳು ರಂಗಪರಿಚಯದಲ್ಲಿ ಇದ್ದು ಹಗಲುಹೊತ್ತು ವಿವಿಧ ಸ್ಥಳಗಳಲ್ಲಿ ಪ್ರಕೃತಿ ಚಿತ್ರಣ ನಿರತರಾಗಿದ್ದು ಸಾಯಂಕಾಲ 6:30ರಿಂದ ರಂಗಪರಿಚಯದಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

ಶಿಬಿರದ ಎಲ್ಲಾ ದಿನಗಳಲ್ಲಿ ರಂಗಪರಿಚಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು, ಉಪನ್ಯಾಸಗಳು ಹಾಗೂ ಸಿನೆಮಾ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಜನವರಿ 12, ಶುಕ್ರವಾರದಂದು 'ಕತ್ತಲೆ ಹಾಡು ನಾದ ಮಣಿನಾಲ್ಕೂರು ಇವರಿಂದ; ಜನವರಿ 13, ಶನಿವಾರದಂದು 'ಕಲಾಸಕ್ತಿಯ ಜೀವನಶೈಲಿ ಆರೋಗ್ಯಕ್ಕೆ ಪೂರಕ ನಾಡಿನ ಖ್ಯಾತ ವೈದ್ಯ ಹಾಗೂ ಸಂಗೀತ ಕಲಾವಿದ ಡಾ| ಆರ್. ಎನ್. ಭಟ್‌ರವರಿಂದ ಉಪನ್ಯಾಸ, ಸಂವಾದ ಹಾಗೂ ಸಂಗೀತ ಪ್ರಸ್ತುತಿ; ಜನವರಿ 14, ಭಾನುವಾರದಂದು 'ಹಾಸ್ಯದೊಂದಿಗೆ ಜೀವನಮೌಲ್ಯಗಳು ಖ್ಯಾತ ವಿನೋದ ಭಾಷಣಗಾರ್ತಿ ಸಂಧ್ಯಾ ಶೆಣೈ, ಉಡುಪಿ ಇವರಿಂದ; ಜನವರಿ 15, ಸೋಮವಾರದಂದು 'ಹಕ್ಕಿ ಪರಿಚಯ ಹವ್ಯಾಸಿ ಪಕ್ಷಿ ವೀಕ್ಷಕ ಮತ್ತು ವನ್ಯಜೀವಿ ಅಧ್ಯಯನಕಾರ ಅರವಿಂದ ಕುಡ್ಲ ಇವರಿಂದ ಪಕ್ಷಿಲೋಕದ ಸಾಕ್ಷ್ಯಚಿತ್ರ ಮತ್ತು ಸಂವಾದ; ಜನವರಿ 16, ಮಂಗಳವಾರದಂದು ಖ್ಯಾತ ಕಲಾವಿದರಿಂದ ತಾಳಮದ್ದಲೆ, ಪ್ರಸಂಗ : ಪಾದುಕಾ ಪ್ರದಾನ; ಜನವರಿ 17, ಬುಧವಾರದಂದು ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ವಿದ್ಯಾರ್ಥಿಗಳಿಂದ ಕನ್ನಡ ನಾಟಕ 'ಹ್ಯಾಂಗ್ ಆನ್; ರಾಷ್ಟೀಯ ಹಾಗೂ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪುರಸ್ಕೃತ ಕನ್ನಡ ಸಿನೆಮಾಗಳ ಪ್ರದರ್ಶನ, ಜನವರಿ 18, ಗುರುವಾರದಂದು ಚಂಪಾ ಪಿ. ಶೆಟ್ಟಿ ನಿರ್ದೇಶನ 'ಕೋಳಿ ಎಸ್ರು; ಜನವರಿ 19, ಶುಕ್ರವಾರದಂದು ಉತ್ಸವ್ ಗೋನವಾರ ನಿರ್ದೇಶನದ 'ಫೋಟೋ; ಜನವರಿ 20, ಶನಿವಾರದಂದು ಉಮೇಶ್ ಬಡಿಗೇರ್ ನಿರ್ದೇಶನದ 'ದಿ ಗಾರ್ಡ್ ಪ್ರದರ್ಶನಗೊಳ್ಳಲಿದೆ. ಜನವರಿ 21, ಭಾನುವಾರದಂದು ಅಪರಾಹ್ನ 3ರಿಂದ ಚಿತ್ರಕಲಾ ಪ್ರದರ್ಶನ ಆಯೋಜಿಸಲಾದ್ದು, ಸಾಯಂಕಾಲ 6:30ರಿಂದ ಶಿಬಿರ ಸಮಾರೋಪಗೊಳ್ಳಲಿದ್ದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮಾನ್ಯ ಪ್ರಸನ್ನ ಹೆಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಸಮಾರಂಭದಲ್ಲಿ ಖ್ಯಾತ ಚಿತ್ರ ಹಾಗೂ ಶಿಲ್ಪ ಕಲಾವಿದ ಬೆಂಗಳೂರಿನ ಮಾನ್ಯ ಸುದೇಶ್ ಮಹಾನ್ ಸಮಾರೋಪ ಸಂದೇಶ ನೀಡಲಿದ್ದಾರೆ.

ನಂತರ ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ಪ್ರಸ್ತುತಿಗೊಳ್ಳಲಿವೆ. ಎಲ್ಲಾ ಕಾರ‍್ಯಕ್ರಮಗಳಿಗೆ ಕಲಾಸಕ್ತರಿಗೆ ಉಚಿತ ಪ್ರವೇಶವಿರುತ್ತದೆ ಎಂದು ತಿಳಿಸಿದರು. ಈ ಸಂದರ್ಭ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪುಂಡಲೀಕ ಮರಾಠೆ, ಟ್ರಸ್ಟಿಗಳಾದ ವಿಲ್ಸನ್ ಡಿಸೋಜ, ಅರುಳ್ ಡಿಸೋಜ, ಪೀಠರ್ ಓಸ್ತಾ ಉಪಸ್ಥಿತರಿದ್ದರು.