ಪಡುಬಿದ್ರಿ : 40 ವರ್ಷಗಳಿಂದ ಹಕ್ಕುಪತ್ರ ಸಿಗದ ನಡಿಪಟ್ನ ಕಾಡಿಪಟ್ನದ 24 ಕುಟುಂಬಗಳು
Posted On:
19-01-2024 05:21PM
ಪಡುಬಿದ್ರಿ : ಇಲ್ಲಿನ ಕಾಡಿಪಟ್ನ ನಡಿಪಟ್ನದ ಒಟ್ಟು 24 ಬಡಕುಟುಂಬಗಳು ಸುಮಾರು 40 ವರ್ಷಗಳಿಂದ ಸರಕಾರಿ ಜಾಗದಲ್ಲಿ ನೆಲೆಸಿದ್ದು ಸರಕಾರದ 94cಯ ಅಕ್ರಮ ಸಕ್ರಮ ಕಾಯಿದೆಯಡಿ 40 ವರ್ಷಗಳಿಂದ ಹಕ್ಕು ಪತ್ರಕ್ಕೆ ಅರ್ಜಿ ಹಾಕುತ್ತಲೇ ಬಂದಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳ ಮೌನ ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಮ್ಮನ್ನು ಮೂರ್ಖರನ್ನಾಗಿಸಿದ್ದು ಕಳೆದ ಎರಡು ವರ್ಷಗಳಿಂದ 24 ಕುಟುಂಬದವರು ನಿರಂತರವಾಗಿ ಹಕ್ಕು ಪತ್ರಕ್ಕಾಗಿ ಜನಪ್ರತಿನಿಧಿಗಳು ಅಧಿಕಾರಿಗಳ ಹಿಂದೆ ಅಲೆಯುತ್ತಿದ್ದು, ಮಾಜಿ ಶಾಸಕರಾದ ಲಾಲಾಜಿ ಮೆಂಡನ್ ರವರು ಬಹುತೇಕ ಪ್ರಯತ್ನ ಪಟ್ಟರಾದರು ಅವರ ಅಧಿಕಾರದ ನಂತರ ಹಕ್ಕು ಪತ್ರದ ಬಗ್ಗೆ ನಮಗೆ ಯಾವುದೇ ಸರಿಯಾದ ಮಾಹಿತಿ ಸಿಗದೆ ಬಿಜೆಪಿ ಪಕ್ಷದ ಜನ ನಾಯಕರ ಬಳಿ ಕೇಳಿದಾಗ ಈಗ ನಮ್ಮ ಸರಕಾರ ಇಲ್ಲ, ಕಾಂಗ್ರೆಸ್ ಸರಕಾರ ಇರುವುದು ಎಂದು ಅವರ ಕಡೆ ಬೆರಳು ಮಾಡಿದರೆ, ಕಾಂಗ್ರೆಸ್ ಪಕ್ಷದವರು ನಮಗಿಂತ ಮುಂಚೆ ಕೇಂದ್ರ ಸರಕಾರದಿಂದ ಪಡುಬಿದ್ರಿ ಪಂಚಾಯತ್ ವರೆಗೆ ಬಿಜೆಪಿ ಸರಕಾರ ಇದ್ದರೂ ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ. ಇದಕ್ಕೆ ಬಲಿಪಶುವಾದ ನಾವು ಪಂಚಾಯತ್ ಮುಂದೆ ಜಿಲ್ಲಾಧಿಕಾರಿಯವರ ಕಛೇರಿಯ ಮುಂದೆ ಧರಣಿ ಕೂರುತ್ತೇವೆ ಎಂದಾಗ ಸ್ಥಳಿಯ ಜನಪ್ರತಿನಿಧಿಗಳು ನಾವಿದ್ದೇವೆ ನಾವು ಹಕ್ಕು ಪತ್ರ ತೆಗೆಸಿಕೊಡುತ್ತೇವೆ ಎಂದು ನಮ್ಮನ್ನು ನಂಬಿಸಿ ವಿಧಾನಸಭಾ ಚುನಾವಣೆಯ ನಂತರ ಸುಮ್ಮನಾದರು. ಈಗ ಲೋಕಸಭಾ ಚುನಾವಣೆ ಎದುರಾಗುತ್ತಿದ್ದು ಇಗಲೂ ಅದೇ ರಾಗ ಅದೇ ತಾಳ ಹಾಕಿ ನಮ್ಮನ್ನು 2024ರಲ್ಲು ಮೂರ್ಖರನ್ನಾಗಿಸುವ ಹುನ್ನಾರ ಮಾಡುತ್ತಿದ್ದಾರೆ. ಸ್ಥಳೀಯ ಬಲಿಷ್ಠ ಪ್ರಬಲ ನಾಯಕರು ನಮ್ಮಲ್ಲಿದ್ದರು 24 ಕುಟುಂಬಕ್ಕೆ ಹಕ್ಕು ಪತ್ರ ಒದಗಿಸಲು ಸಾಧ್ಯ ವಾಗದಿದ್ದರೆ ಅಂತಹ ಜನಪ್ರತಿನಿದಿಗಳಿಂದ ಇನ್ನು ಮುಂದೆ ಏನು ಅಪೇಕ್ಷಿಸಲು ನಾವು ಸಾಧ್ಯವಿಲ್ಲ. ಈಗ ತಾನೆ ತಲೆಯೆತ್ತುತ್ತಿರುವ ಹೋಂ ಸ್ಟೇಗಳಿಗೆ ಸಿಗುವ ಪರವಾನಿಗೆ ಅದೆಷ್ಟೋ ವರ್ಷಗಳಿಂದ ವಾಸಿಸುತ್ತಿರುವ ಕರಾವಳಿಯ ಬಡ ಕುಟುಂಬಗಳಿಗೆ ಸಿಗದೇ ಇರುವುದು ವಿಪರ್ಯಾಸ ಎಂದು ಇಲ್ಲಿನ ಕುಟುಂಬದವರು ಬೇಸರ ವ್ಯಕ್ತಪಡಿಸಿದ್ದಾರೆ.
ಜನವರಿ 23 ರಂದು ಕಾಪು ತಾಲೂಕಿನ ಶಿಫಾರಸ್ಸಿಗೆ ಬರುವ ಗ್ರಾಮಗಳಿಗೆ ಹಕ್ಕು ಪತ್ರ ನೀಡಲಾಗುವುದು ಎಂಬ ವಿಷಯ ಹರಿದಾಡುತ್ತಿದ್ದು ಒಂದು ವೇಳೆ ಆ ಪಟ್ಟಿಯಲ್ಲಿ ಪಡುಬಿದ್ರಿ ಕರಾವಳಿಯ 24 ಮನೆಯ ಹಕ್ಕುಪತ್ರ ಇಲ್ಲದೆ ಹೋದಲ್ಲಿ ಮುಂದೆ ನಡೆಯುವ ಉಗ್ರ ಹೋರಾಟಕ್ಕೆ ಸ್ಥಳೀಯ ಜನಪ್ರತಿನಿಧಿಗಳೇ ನೇರ ಕಾರಣವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.