ನಂದಿಕೂರು : ಉದ್ಯಮಿ ರಾಲ್ಫಿ ಡಿʼಕೋಸ್ತರವರ ಆಪ್ತ ಬಳಗದ ಹೆಜಮಾಡಿ, ನಡ್ಸಾಲು ಗ್ರಾಮ ಕೇಂದ್ರಿತವಾಗಿ ಕಾರ್ಯ ನಿರ್ವಹಿಸಲಿರುವ ಜೀವರಕ್ಷಕ ನೂತನ ಆ್ಯಂಬುಲೆನ್ಸ್ ಲೋಕಾರ್ಪಣೆ ಹಾಗೂ ಕೀ ಹಸ್ತಾಂತರದ ಕಾರ್ಯಕ್ರಮ ನಂದಿಕೂರಿನ ಕೈಗಾರಿಕಾ ವಲಯದಲ್ಲಿ ಭಾನುವಾರ ಜರಗಿತು.
ಮೂಲ್ಕಿ ಚರ್ಚ್ ನ ಧರ್ಮಗುರುಗಳಾದ ರೆ| ಫಾ| ಸಿಲ್ವೆಸ್ಟರ್ ಡಿ`ಕೋಸ್ತ ಪ್ರಾರ್ಥನೆ ಸಲ್ಲಿಸಿ ಶುಭಾಶೀರ್ವಾದದ ನುಡಿಗಳನ್ನಿತ್ತರು.
ಮಂಗಳೂರು ಕೆನರಾ ಬ್ಯಾಂಕಿನ ವಲಯ ಎಜಿಎಂ ಆ್ಯಂಟೊನಿ ಅವರು ಆ್ಯಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿದರು.
ಪಡುಬಿದ್ರಿಯ ಅಪರಾದ ವಿಭಾಗದ ಎಸ್‌ಐ ಸುದರ್ಶನ್ ದೊಡ್ಡಮನಿ ಅವರು ವಾಹನಕ್ಕೆ ಚಾಲನೆ ನೀಡಿ, ರಾಲ್ಫಿ ಡಿʼಕೋಸ್ತರವರ ಆಪ್ತರ ಬಳಗಕ್ಕೆ ವಾಹನದ ಕೀಲಿಗೈ ಹಸ್ತಾಂತರಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುಂಶಿಕ ಅರ್ಚಕರಾದ ವೇ| ಮೂ| ಅನಂತಪದ್ಮನಾಭ ಅಸ್ರಣ್ಣ, ವೇ| ಮೂ| ಹರಿನಾರಾಯಣದಾಸ ಆಸ್ರಣ್ಣ, ಹೆಜಮಾಡಿಯ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಹಾಜಿ ಅಶ್ರಫ್ ಸಖಾಫಿ, ಸೈಂಟ್ ಫಿಲೊಮಿನಾ ಕಾಲೇಜು ಪುತ್ತೂರಿನ ನಿವೃತ್ತ ಪ್ರಾಂಶುಪಾಲ ರೆ| ಫಾ| ಫ್ರಾನ್ಸಿಸ್ ಝ್ಸೇವಿಯರ್ ಗೋಮ್ಸ್, ಕಳವಾರು ಚರ್ಚ್ ಧರ್ಮಗುರುಗಳಾದ ರೆ| ಫಾ| ಮಾರ್ಸೆಲ್ ಸಲ್ದಾನ, ವಾಲ್ಟರ್ ಡಿ`ಸೋಜ, ಕೆನರಾ ಬ್ಯಾಂಕ್ ಮೂಲ್ಕಿಯ ವ್ಯವಸ್ಥಾಪಕ ಅತುಲ್, ಹಾಜಿ ಶೇಖಬ್ಬ ಕೋಟೆ, ನಾರಾಯಣ ಮೆಂಡನ್, ಪಡುಬಿದ್ರಿ ಗ್ರಾ ಪಂ. ಅಧ್ಯಕ್ಷೆ ಶಶಿಕಲಾ, ಹೆಜಮಾಡಿ ಗ್ರಾ ಪಂ. ಅಧ್ಯಕ್ಷೆ ರೇಶ್ಮಾ ಮೆಂಡನ್, ಸದಾಶಿವ ಕೋಟ್ಯಾನ್ ಮತ್ತು ಹೆಜಮಾಡಿಯ ರಾಲ್ಫಿ ಡಿʼಕೋಸ್ತ ದಂಪತಿ ಮತ್ತು ಆಪ್ತರ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದಿವಾಕರ್ ಹೆಜ್ಮಾಡಿ, ನಿತಿನ್ ಕಾರ್ಯಕ್ರಮ ನಿರೂಪಿಸಿದರು.