ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ತಂತ್ರಿಗಳಾದ ವೇ| ಮೂ| ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಮುಷ್ಟಿ ಕಾಣಿಕೆ ಸಮರ್ಪಣಾ ವಿಧಿ ವಿಧಾನಗಳು ನೆರವೇರಿತು.
ಬೆಳಿಗ್ಗೆ ರುದ್ರ ಪಾರಾಯಣ ಸಹಿತ ಏಕಾದಶ ರುದ್ರಾಭಿಷೇಕ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ ನವಕ ಕಲಶಾಭಿಷೇಕಗಳು, ವಿಶೇಷ ನೈವೇದ್ಯ ಸಮರ್ಪಣೆಯೂ ನಡೆಯಿತು.
ದೇವಳದ ಸನ್ನಿಧಿಯಲ್ಲಿ ಕರ್ಮಾಂಗ ಸಾಂಗತಾ ಸಿದ್ಧಿಗಾಗಿ ವೇ| ಮೂ| ಶಿವರಾಜ ಉಪಾಧ್ಯಾಯ ಅವರ ಪ್ರಾರ್ಥನೆಯ ಬಳಿಕ ನೆರೆದಿದ್ದ ಗ್ರಾಮ ಸೀಮೆಯವರಿಂದ ಮುಷ್ಟಿ ಕಾಣಿಕೆಗಳು ಅರ್ಪಣೆಯಾದವು.
ಈ ಸಂದರ್ಭ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಪೇಟೆಮನೆ ಭವಾನಿಶಂಕರ ಹೆಗ್ಡೆ, ವೇ| ಮೂ| ಶ್ರೀನಿವಾಸ ಉಪಾಧ್ಯಾ̧ಯ ವೇ| ಮೂ| ಸುರೇಂದ್ರ ಉಪಾಧ್ಯಾಯ, ಅರ್ಚಕರಾದ ವೈ. ಗುರುರಾಜ ಭಟ್, ಪದ್ಮನಾಭ ಭಟ್ ಎಚ್., ಗಣಪತಿ ಭಟ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ಹಾಗೂ ಸದಸ್ಯರು, ವಿವಿಧ ಗುತ್ತು ಬರ್ಕೆಗಳ ಪ್ರಮುಖರು, ಶ್ರೀ ದೇವಸ್ಥಾನದ ಸಿಬಂದಿ ವರ್ಗ, ವೈ. ಎನ್. ರಾಮಚಂದ್ರ ರಾವ್, ವೈ. ಸುರೇಶ್ ರಾವ್, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಅಡ್ವೆ ಅರಂತಡೆ ಲಕ್ಷ್ಮಣ ಶೆಟ್ಟಿಬಾಲ್, ಎರ್ಮಾಳು ಉದಯ ಕೆ. ಶೆಟ್ಟಿ, ನವೀನ್‌ಚಂದ್ರ ಜೆ. ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ಅಶೋಕ್ ಸಾಲ್ಯಾನ್, ಸುಕುಮಾರ ಶ್ರೀಯಾನ್, ಸದಾಶಿವ ಪಡುಬಿದ್ರಿ, ಪ್ರಕಾಶ್ ದೇವಾಡಿಗ, ರಾಜ ದೇವಾಡಿಗ, ವೈ. ಸುಕುಮಾರ್, ಶೀನ ಪೂಜಾರಿ ಕನ್ನಂಗಾರ್ ಸಹಿತ ಭಕ್ತಾದಿಗಳು ಉಪಸ್ಥಿತರಿದ್ದರು.