ಪಡುಬಿದ್ರಿ : ಇಲ್ಲಿನ ರೋಟರಿ ಕ್ಲಬ್ ಮತ್ತು ಓಂಕಾರ ಕಾಸ್ಟ್ಯೂಮ್ ಮತ್ತು ಕಲಾಸಂಗಮದ ವತಿಯಿಂದ ಕಲಾ ಪ್ರತಿಭೆಗಳಿಗೆ ವೇದಿಕೆ ರೂಪಿಸುವ ಸಲುವಾಗಿ ಡಾನ್ಸ್ ಪಡುಬಿದ್ರಿ ಡಾನ್ಸ್-2024 ರಾಜ್ಯ ಮಟ್ಟದ ಸಮೂಹ ಫಿಲ್ಮಿ ನೃತ್ಯ ಸ್ಪರ್ಧೆಯನ್ನು ಫೆಬ್ರವರಿ 3 ಶನಿವಾರದಂದು ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಅಯೋಜಿಸಲಾಗಿದೆ ಎಂದು
ರೋಟರಿ ಕ್ಲಬ್ ಪಡುಬಿದ್ರಿ ಸ್ಥಾಪಕ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಹೇಳಿದರು.
ಅವರು ಕಾಪು ಪತ್ರಕರ್ತರ ಸಂಘದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಬೆಂಗಳೂರು, ಹಾಸನ, ಬಾಗಲಕೋಟೆ , ಚಿಕ್ಕಮಗಳೂರು , ಶಿವಮೊಗ್ಗ, ಉಡುಪಿ , ಮಂಗಳೂರು ಭಾಗ ಗಳಿಂದ ಸುಮಾರು 30 ಪ್ರಸಿದ್ಧ ನೃತ್ಯ ತಂಡಗಳು ಹಾಗೂ ಸ್ಥಳೀಯ ನೃತ್ಯ ತಂಡಗಳು ಕೂಡಾ ಭಾಗವಹಿಸಲಿದೆ. ಅಲ್ಲದೆ ಓಂಕಾರ ಕಲಾ ಸಂಗಮದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಕೂಡಾ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಬಡ ಕುಟುಂಬದ ಅಂಗವಿಕಲ ಮಹಿಳೆಗೆ ವೀಲ್ ಚಯರ್ ವಿತರಣೆ ಮಾಡಲಿದ್ದು, ವಿವಿಧ ವಿಭಾಗದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಈ ಅದ್ದೂರಿ ಕಾರ್ಯಕ್ರಮವನ್ನು ಉಡುಪಿಯ ಉಜ್ವಲ ಗ್ರೂಪ್ ನ ಆಡಳಿತ ನಿರ್ದೇಶಕ ಅಜಯ್ ಪಿ.ಶೆಟ್ಟಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ| ಅಂಶುಮಾನ್ ಗೌಡ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಉಡುಪಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ, ಕುದ್ರೋಳಿ ಗೋಕರ್ಣಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ರೋಟರಿ ಜಿಲ್ಲಾ ಕಾರ್ಯದರ್ಶಿ ಡಾ| ಪ್ರೀತಿ ಮೋಹನ್, ವಲಯ ಸಹಾಯಕ ಗವರ್ನರ್ ಶೃೆಲೇಂದ್ರ ರಾವ್, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿ ಅಧ್ಯಕ್ಷ ವೃೆ.ಸುದೀರ್ ಕುಮಾರ್, ಕಲ್ಲಟ್ಟೆ ಶ್ರೀ ಧರ್ಮ ಜಾರಂದಾಯ ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ವೃೆ. ಸುಕುಮಾರ್, ಉದ್ಯಮಿ ಗುಲಾಂ ಮೊಹಮ್ಮದ್, ಉಡುಪಿಯ ಹಿರಿಯ ವಕೀಲರಾದ ಸಂಕಪ್ಪ ಎ., ಪೂರ್ವ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಉಚ್ಚಿಲ, ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಕೃಷ್ಣ ಬಂಗೇರ, ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಗೌರವ ಅಧ್ಯಕ್ಷ ಶರತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿಯ ಜಿಲ್ಲಾ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಪಡುಬಿದ್ರಿ ಪೋಲಿಸ್ ಠಾಣಾಧಿಕಾರಿ ಪ್ರಸನ್ನ ಎಮ್.ಎಸ್, ಕಾಪು ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ರಮೇಶ್ ಯು ಭಾಗವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಕಿರುತೆರೆ ಹಾಗು ಚಲನಚಿತ್ರ ನಟ ನಟಿಯರಾದ ಸಾಯಿ ಕೃಷ್ಣ ಕುಡ್ಲ, ವಿನೀತ್ ಕುಮಾರ್, ನೀರಿಕ್ಷಾ ಶೆಟ್ಟಿ, ಗುರುಪ್ರಸಾದ್ ಹೆಗ್ಡೆ, ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕಿ ಶಿವಾನಿ ನವೀನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಂದನಾ ರೈ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಓಂಕಾರ ಕಾಸ್ಟ್ಯೂಮ್ ಮತ್ತು ಕಲಾ ಸಂಗಮ ಪಡುಬಿದ್ರಿ ಪಾಲುದಾರೆ ಗೀತಾ ಅರುಣ್, ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಪಿ ಕೃಷ್ಣ ಬಂಗೇರ, ಕಾರ್ಯದರ್ಶಿ ಪವನ್ ಸಾಲ್ಯಾನ್,
ರೋಟರಿ ಸಮುದಾಯದಳ ಅಧ್ಯಕ್ಷ ರಚನ್ ಸಾಲ್ಯಾನ್ ಉಪಸ್ಥಿತರಿದ್ದರು.