ಉಡುಪಿ : ಕೊಳಲಗಿರಿ ಯುವ ವಿಚಾರ ವೇದಿಕೆಯ 23ನೇ ವಾರ್ಷಿಕೋತ್ಸವ ಸಂಪನ್ನ
Posted On:
13-02-2024 05:10PM
ಉಡುಪಿ : ಕೊಳಲಗಿರಿ ಯುವ ವಿಚಾರ ವೇದಿಕೆಯ 23ನೇ ವಾರ್ಷಿಕೋತ್ಸವವನ್ನು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಸಮಾಜ ಸುಧಾರಣೆಯಲ್ಲಿ ಯುವಕರ ಪಾತ್ರ ಮಹತ್ವದ್ದು, ಗ್ರಾಮದ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇದೆ ಎಂದು ವೇದಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಯುವ ವಿಚಾರ ವೇದಿಕೆಯ ಹಡಿಲು ಭೂಮಿ ಕೃಷಿಯ ಫಸಲನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಸನ್ಮಾನ/ ಅಭಿನಂದನೆ : ಸ್ಪಂದನ ವಿಶೇಷ ಚೇತನ ಶಾಲೆ ಮುಖ್ಯಸ್ಥರಾದ ಉಮೇಶ್ ಹಾಗೂ ಜನಾರ್ಧನ ಇವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ತೋರಿದ ಸ್ಥಳೀಯ ವಿದ್ಯಾರ್ಥಿಗಳಾದ ಹರ್ಷಿತಾ, ಪ್ರಜ್ಞಾ, ರಿಯಾ, ಪ್ರೀತಮ್, ದಾನಿಗಳಾದ ಪ್ರಶಾಂತ್ ಶೆಟ್ಟಿ ಅಮ್ಮುಂಜೆ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಉಪ್ಪೂರು ವ್ಯ.ಸೇ.ಸ. ಸಂಘದ ಅಧ್ಯಕ್ಷರಾದ ರಮೇಶ್ ಎನ್ ಶೆಟ್ಟಿ, ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರುಗಳು ರೆ|ಫಾ| ಜೋಸೆಫ್ ಮಚಾದೋ, ಉದ್ಯಮಿ ರೋಯಲ್ ರತ್ನಾಕರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಅಶ್ವಿನ್ ರೋಚ್, ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕ ಪ್ರಾಂಕಿ ಡಿಸೋಜ, ಮಾಹೆ ಮಣಿಪಾಲದ ಪ್ರಾಧ್ಯಾಪಕ ಡಾ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ರಾಜಶ್ರೀ ಮಸ್ಕರೇನಸ್, ಸಮಾಜ ಸೇವಕರಾದ ರಮೇಶ್ ಕರ್ಕೇರ, ಉದ್ಯಮಿ ಸಂದೀಪ ನಾಯಕ್ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಸಭಾ ಕಾರ್ಯಕ್ರಮದ ಮುಂಚಿತವಾಗಿ ಸ್ಥಳೀಯ ಅಂಗನವಾಡಿ ಮಕ್ಕಳು ಹಾಗೂ ವೇದಿಕೆಯ ಸದಸ್ಯರಾದ, ನೃತ್ಯ ಗುರು ವಿದ್ವಾನ್ ಕೆ ಭವಾನಿ ಶಂಕರ್ ಅವರ ನಿರ್ದೇಶನದಲ್ಲಿ ಸ್ಪಂದನ ವಿಶೇಷ ಚೇತನ ಶಾಲೆ ವಿದ್ಯಾರ್ಥಿಗಳು ಮನೋಜ್ಞವಾಗಿ ಅಭಿನಯಿಸಿದ ನೃತ್ಯ ರೂಪಕ "ಶ್ರೀ ರಾಮಾಯಣ ಕಥಾ ಸಾರಾಂಶ" ಪ್ರದರ್ಶಿಸಿದರು. ಸಭಾ ಕಾರ್ಯಕ್ರಮದ ಬಳಿಕ ವೇದಿಕೆಯ ಮಹಿಳಾ ಸದಸ್ಯರ, ಮಕ್ಕಳ ನೃತ್ಯ ಪ್ರದರ್ಶನವಾಯಿತು. ಬಳಿಕ ವೇದಿಕೆಯ ಸದಸ್ಯರು ಅಭಿನಯಿಸಿದ ತುಳು ಸಾಮಾಜಿಕ ಹಾಸ್ಯಮಯ ನಾಟಕ ಅಜ್ಜಿಗ್ ಏರ್ಲಾ ಇಜ್ಜಿ ಪ್ರದರ್ಶನವಾಯಿತು.
ಸಭಾ ಕಾರ್ಯಕ್ರಮದ ಅತಿಥಿ ಗಣ್ಯರಿಗೆ ವೇದಿಕೆಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಬೆಳಗ್ಗಿನ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ವೇದಿಕೆಯ ಅಶೋಕ್ ಹಾಗೂ ಸುರೇಶ್ ವಂದಿಸಿದರು. ವೇದಿಕೆಯ ಸದಸ್ಯರಾದ ಯೋಗೀಶ್ ಗಾಣಿಗ, ಸದಾಶಿವ ಕುಮಾರ್, ಸುಬ್ರಹ್ಮಣ್ಯ ಆಚಾರ್ಯ. ಕಾರ್ಯಕ್ರಮ ನಿರೂಪಿಸಿದರು.