ಶಿರ್ವ : ಇಲ್ಲಿನ ಹಿಂದು ಪ್ರೌಢಶಾಲೆ ಹಾಗೂ ಸ.ಹಿ.ಪ್ರಾ.ಶಾಲೆ ಕೈರಬೆಟ್ಟುವಿನ ಹಳೆ ವಿದ್ಯಾರ್ಥಿ ದಿವಂಗತ ಕುಮಾರ್ ಟಿ. ಸುವರ್ಣ ಮತ್ತು ಅವರ ಪತ್ನಿ ದಿವಂಗತ ಹೇಮಾವತಿ ಕೆ. ಸುವರ್ಣ ಸ್ಮರಣಾರ್ಥ ಅವರ ಮಕ್ಕಳು ವಿದ್ಯಾರ್ಥಿಗಳ ಉಪಯೋಗಕ್ಕಾಗಿ 45 ಸಾವಿರ ರೂ. ಮೌಲ್ಯದ ವಾಟರ್ ಕೂಲರನ್ನು ಸೋಮವಾರ ಹಸ್ತಾಂತರಿಸಿದರು.
ಈ ಸಂಧರ್ಭ ಅವರ ಮಕ್ಕಳಾದ ಸುನಿಲ್ ಕೆ.ಸುವರ್ಣ, ಸುಧೀರ್ ಕೆ. ಸುವರ್ಣ, ಸುಜಿತ್ ಸುವರ್ಣ, ಮಗಳು ಸುನಿತಾ ಕೆ. ಕೋಟ್ಯಾನ್, ಮತ್ತು ಅಳಿಯ ಶೇಖರ್ ಕೋಟ್ಯಾನ್, ಕುಟುಂಬಿಕರಾದ ಲಕ್ಷ್ಮಣ ಸುವರ್ಣ, ಶೇಖರ್ ಕೋಟ್ಯಾನ್, ಸುಜನ್.ಎಲ್.ಸುವರ್ಣ, ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಹರೀಶ್ ಕೋಟ್ಯಾನ್, ಉಪಾಧ್ಯಕ್ಷೆಯಾದ ಸರಿತಾ ನಾಯ್ಕ್, ಸದಸ್ಯರಾದ ನಾಗೇಶ್ ಆಚಾರ್ಯ, ಶಕುಂತಳಾ, ಮಮತಾ ನಾಯ್ಕ್, ಹಿರಿಯ ಸಹಶಿಕ್ಷಕಿಯಾದ ಶಶಿಕಲಾ.ಹೆಚ್, ಅತಿಥಿ ಶಿಕ್ಷಕರಾದ ಸ್ವಾತಿ ಆಚಾರ್ಯ, ಅಡುಗೆ ಸಿಬ್ಬಂದಿಗಳಾದ ಪ್ರೇಮ ಮತ್ತು ಲಲಿತಾ, ಕಾಲೇಜಿನ ಪ್ರಿನ್ಸಿಪಾಲ್ ಭಾಸ್ಕರ ಎ. ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಸಂತಿ ಬಾಯಿ ಹಾಗೂ ಶಿಕ್ಷಕ ವೃಂದ
ಉಪಸ್ಥಿತರಿದ್ದರು.
ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಶಾಲೆಯ ಮುಖ್ಯ ಶಿಕ್ಷಕಿಯಾದ ಶಶಿಕಲಾ ಶೆಟ್ಟಿ ಸ್ವಾಗತಿಸಿದರು. ಸಹ ಶಿಕ್ಷಕಿಯಾದ ಕುಮುದಾ ವಂದಿಸಿದರು. ಗೌರವ ಶಿಕ್ಷಕಿಯಾದ ಸವಿತಾ ಕಾರ್ಯಕ್ರಮ ನಿರೂಪಿಸಿದರು.