ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗದ ಎನ್‌ಎಚ್ 66, ಅಂಡರ್‌ಪಾಸ್ನಲ್ಲಿ ಅಳವಡಿಸಲಾಗಿರುವ ದೀಪವು ಕಳೆದ 18 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿಲ್ಲ, ಇದು ಕಾಪು ನಗರ ಪ್ರದೇಶಕ್ಕೆ ಪ್ರವೇಶಿಸುವ ಮುಖ್ಯ ರಸ್ತೆಯಾಗಿದ್ದು ಈ ಸಮಸ್ಯೆಯನ್ನು ಮನಗಂಡು ಸ್ಥಳೀಯರಾದ ಜಯರಾಮ್ ಆಚಾರ್ಯ ಇವರು ರಾಷ್ಟ್ರೀಯ ಹೆದ್ದಾರಿ, ಜಿಲ್ಲಾಧಿಕಾರಿ, ತಹಶೀಲ್ದಾರ್, ಕಾಪು ಪುರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿದರೂ ಕೂಡಾ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಅಂಡರ್ ಪಾಸ್ ಮೂಲಕ ಬಹಳಷ್ಟು ವಾಹನಗಳು ಮತ್ತು ಜನರು ಚಲಿಸುತ್ತಾರೆ.
ಬೆಳಕಿಲ್ಲದೆ ಅಕ್ಕಪಕ್ಕದಲ್ಲಿ ನಿಂತಿರುವ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ.
ಮಾರ್ಚ್ 26 ಮತ್ತು 27 ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಪೂಜೆಯನ್ನು ಆಚರಿಸಲಾಗುತ್ತದೆ ಆದ್ದರಿಂದ ಇಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ ಎಂಬುದನ್ನು ಗಮನಿಸಿ ಬೆಳಕಿನ ವ್ಯವಸ್ಥೆ ಮಾಡಬೇಕೆಂದು ನಮ್ಮ ಕಾಪು ವಾಹಿನಿಯ ಮೂಲಕ ಆಗ್ರಹಿಸಿದ್ದಾರೆ.