ಕಾಪು : ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಯೋಧ್ಯೆ ಶ್ರೀ ರಾಮ ದೇವರ ಪ್ರಾಣಪ್ರತಿಷ್ಠೆ ಮತ್ತು 48 ದಿನಗಳ ಮಂಡಲೋತ್ಸವವನ್ನು ಮುಗಿಸಿ ಭಾನುವಾರ ಇಳಕಲ್ಲ್ ಶಿಲೆಯಿಂದ ಶಿಲಾಮಯವಾಗಿ ನಿರ್ಮಾಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಮಾರಿಯಮ್ಮನ ಸನ್ನಿಧಾನಕ್ಕೆ ಆಗಮಿಸಿ ಶ್ರೀದೇವಿಯ ದರುಶನ ಪಡೆದರು.
ಈ ಸಂದರ್ಭ ಮಾರಿಯಮ್ಮನ ಸನ್ನಿದಾನದಲ್ಲಿ ನವ ದೀಪಗಳನ್ನು ಬೆಳಗಿಸಿ ನಂತರ ದೇವಳದ ನವದುರ್ಗಾ ಮಂಟಪದಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಉಡುಪಿಗೆ ತೆರಳುತ್ತಿರುವ ಸಂದರ್ಭ ಕಾಪು ಮಾರಿಯಮ್ಮನ ದರುಶನ
ಮಾಡಿದೆವು, ಜೀರ್ಣೋದ್ಧಾರ ಕೆಲಸಗಳು ಕಾಲಕ್ಕೆ ಅನುಗುಣವಾಗಿ ಆ ಮಹಾತಾಯಿ ಮತ್ತು ಪ್ರಭು ಶ್ರೀ ರಾಮಚಂದ್ರ ಹಾಗೂ ಉಡುಪಿ ಶ್ರೀ ಕೃಷ್ಣನ ದಯೆಯಿಂದ ನಿರ್ವಿಘ್ನವಾಗಿ ಮತ್ತು ಸಾಂಗವಾಗಿ ನೆರವೇರಬೇಕು, ತಾಯಿಯ ಅನುಗ್ರಹ ಲೋಕದ ಸಮಸ್ತ ಜನರ ಮೇಲಿರಲಿ ಎಂದು ಹೇಳಿದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿ, ಕಾರ್ಯಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯ, ಗೌರವಾದ್ಯಕ್ಷರಾದ ಲಾಲಾಜಿ ಆರ್. ಮೆಂಡನ್, ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯಾ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಮುಂಬೈ ಸಮಿತಿಯ ಉಪಾಧ್ಯಕ್ಷರಾದ ಕೃಷ್ಣ ಶೆಟ್ಟಿ "ಕೃಷ್ಣ ಪ್ಯಾಲೇಸ್", ಕಟ್ಟಡ ಸಮಿತಿಯ ಪ್ರಧಾನ ಸಂಚಾಲಕರಾದ ಭಗವಾನ್ ದಾಸ್ ಶೆಟ್ಟಿಗಾರ್, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರಮೇಶ್ ಶೆಟ್ಟಿ ಕಾಪು ಕೊಲ್ಯ, ದಾನಿಗಳಾದ ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಸಂಚಾಲಕರುಗಳಾದ ಚಂದ್ರಶೇಖರ್ ಅಮೀನ್, ಜಗದೀಶ್ ಬಂಗೇರ, ರವೀಂದ್ರ ಎಮ್, ಬಾಬು ಮಲ್ಲಾರ್, ಕಾಪು ಜಿ. ಎಸ್. ಬಿ ಸಮಾಜ ಭಾಂದವರು, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರಾದ ಶಿಲ್ಪಾ ಜಿ. ಸುವರ್ಣ,ಪ್ರಚಾರ ಸಮಿತಿಯ ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾದ ಸಾವಿತ್ರಿ ಗಣೇಶ್, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ವಿದ್ಯಾಧರ ಪುರಾಣಿಕ್, ಮನೋಹರ್ ರಾವ್ ಕಲ್ಯಾ, ಲಕ್ಷ್ಮೀಶ ತಂತ್ರಿ, ರವಿ ಭಟ್ ಮಂದಾರ, ಲಕ್ಷ್ಮೀ ನಾರಾಯಣ ತಂತ್ರಿ, ಸಿದ್ದಿಧಾತ್ರಿ ತಂಡದ ಸಂಚಾಲಕರುಗಳಾದ ಶ್ರೀಧರ ಕಾಂಚನ್, ಸುಲೋಚನ ಕೆ. ಸುವರ್ಣ, ಜಗದೀಶ್ ಮೆಂಡನ್, ಮಮತಾ ಕುಶ ಸಾಲ್ಯಾನ್, ಕಲಾವತಿ ಪುತ್ರನ್,ಗೀತಾರಾಜ್, ಉಷಾ ಕೆ. ಪುತ್ರನ್,ದಿವಾಕರ ಶೆಟ್ಟಿ ಮಲ್ಲಾರ್, ದೇವಳದ ಪ್ರಬಂಧಕರಾದ ಗೋವರ್ಧನ್ ಸೇರಿಗಾರ್, ಸಿಬ್ಬಂದಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.