ನಿಟ್ಟೆ ಬಿಲ್ಲವ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ; ಸನ್ಮಾನ
Posted On:
17-03-2024 04:50PM
ಕಾರ್ಕಳ : ಬಿಲ್ಲವ ಸಂಘ (ರಿ.) ನಿಟ್ಟೆ ಇದರ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನಿಟ್ಟೆಯ ಅವಳಿ ಸಾಧಕರಾದ ಆಯುಷ್ ಅರುಣ್ ಕೆ. ಹಾಗೂ ಅನುಷ್ ಅರುಣ್ ಕೆ.ರವರನ್ನು ಸನ್ಮಾನಿಸಲಾಯಿತು.
ಆನುಷ್ ಅರುಣ್ ಕೆ 9ನೇ ತರಗತಿಯಲ್ಲಿ 97.4% ಪಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದು, ವಿವೊ ಇಗ್ನೈಟ್ ಟೆಕ್ನಲಾಜಿ ಮತ್ತು ಇನ್ನೊವೇಟ್ ಅವಾರ್ಡ್ ಇಂಡಿಯಾದ ಟಾಪ್ 10ರಲ್ಲಿ ಆಯ್ಕೆಯಾಗಿದ್ದಾರೆ.
ಶೊರೀನ್ ರಿಯೋ ಕರಾಟೆ ಅಸೋಷಿಯೇಷನ್ ಆಶ್ರಯದಲ್ಲಿ ಮೂಡುಬಿದಿರೆಯಲ್ಲಿ ನಡೆದ ಕರಾಟೆ ಕಾರ್ನಿವಲ್ ನಲ್ಲಿ 1000ಮೀಟರ್ ಡಿಸ್ಟೆನ್ಸ್ ಸೆಡ್ ಕಿಕ್ ಇನ್ ಶಾರ್ಟಸ್ಟ್ ಡ್ಯುರೇಷನ್ ವಿಭಾಗದಲ್ಲಿ ನೊಬೆಲ್ ವಿಶ್ವದಾಖಲೆ ಮಾಡಿದ್ದಾರೆ.ಕರಾಟೆಯಲ್ಲಿ ಫರ್ಸ್ಟ್ ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದಿದ್ದು ಶೊರೀನ್ ರಿಯೋ ಕರಾಟೆ ಅಸೋಸಿಯೇಷನ್ ನಲ್ಲಿ ರೆಫೆರೀ ತರಭೇತಿ ಪಡೆದು ಕರಾಟೆ ರೇಫರೀ ಆಂಡ್ ಜಡ್ಜ್ ಫಾರ್ ಕುಮಿಟೆ ಯಾಗಿ ಉತ್ತೀರ್ಣರಾಗಿದ್ದಾರೆ.
2023 ರಲ್ಲಿ ಉಡುಪಿಯಲ್ಲಿ ನಡೆದ ರಾಶ್ರಿತ ಮಟ್ಟದ ಹೈಫೈವ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಎರಡು ಚಿನ್ನದ ಪದಕ,2022ರಲ್ಲಿ ನಡೆದ COMPETE 3.0 ಕರಾಟೆ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ, 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಟೆಕ್ವಾಂಡೊ ವೆಸ್ಟರ್ಸ್ ಕಪ್ ನ್ಯಾಷನಲ್ ಲೆವೆಲ್ ನಲ್ಲಿ ಎರಡು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.
ಮೂಡುಬಿದಿರೆಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯಲ್ಲಿ ದ್ವಿತೀಯ ಸ್ಥಾನ,2022-23ರಲ್ಲಿ ರೈನ್ ಬೊ ಕಪ್ ನಲ್ಲಿ ಕಂಚಿನ ಪದಕ,ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಟೆಕ್ವಾಂಡೊದಲ್ಲಿ ಚಿನ್ನದ ಪದಕ,ಮಂಗಳೂರಿನಲ್ಲಿ ನಡೆದ ತುಳುನಾಡು ಕಪ್ ನಲ್ಲಿ ಒಂದು ಚಿನ್ನದ ಪದಕ ಹಾಗೂ ಒಂದು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಆಯುಷ್ ಅರುಣ್ ಕೆ. 9ನೇ ತರಗತಿಯಲ್ಲಿ 89% ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದು ಶೊರೀನ್ ರಿಯೋ ಕರಾಟೆ ಅಸೋಷಿಯೇಷನ್ ಆಶ್ರಯದಲ್ಲಿ ಮೂಡುಬಿದಿರೆಯಲ್ಲಿ ನಡೆದ ಕರಾಟೆ ಕಾರ್ನಿವಲ್ ನಲ್ಲಿ ಒಂದು ನಿಮಿಷದಲ್ಲಿ 213ಕಿಕ್ಸ್ ಮಾಡಿ ನೊಬೆಲ್ ವಿಶ್ವದಾಖಲೆ ಮಾಡಿದ್ದಾರೆ.ಕರಾಟೆಯಲ್ಲಿ ಫರ್ಸ್ಟ್ ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ಶೊರೀನ್ ರಿಯೋ ಕರಾಟೆ ಅಸೋಸಿಯೇಷನ್ ನಲ್ಲಿ ರೆಫೆರೀ ತರಬೇತಿ ಪಡೆದು 'ಕರಾಟೆ ಅಂಡ್ ಜಡ್ಜ್ ಫಾರ್ ಕುಮಿಟೆ' ಯಾಗಿ ಉತ್ತೀರ್ಣರಾಗಿದ್ದಾರೆ.
2023ರಲ್ಲಿ ಉಡುಪಿಯಲ್ಲಿ ನಡೆದ ರಾಷ್ಟ್ರೀಯಮಟ್ಟದ ಹೈಫೈವ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಒಂದು ಬೆಳ್ಳಿಯ ಪದಕ ಒಂದು ಕಂಚಿನ ಪದಕ, 2022ರಲ್ಲಿ ನಡೆದ ಕರಾಟೆ COMPETE-3.0 ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ, 2022 ರಲ್ಲಿ ಬೆಂಗಳೂರಿನಲ್ಲಿ ನಡೆದ ಟೆಕ್ವಾಂಡೊ ವೆಸ್ಟಾರ್ಟ್ಸ್ ಕಪ್ ನ್ಯಾಷನಲ್ ಲೆವೆಲ್ ನಲ್ಲಿ ಎರಡು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಮೂಡುಬಿದಿರೆಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯಲ್ಲಿ ಪ್ರಥಮ ಸ್ಥಾನ, 2022 -23 ರೈನ್ ಬೊ ಕಪ್ ನಲ್ಲಿ ಕಂಚಿನ ಪದಕ, ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಟೆಕ್ವಾಂಡೊದಲ್ಲಿ ಚಿನ್ನದ ಪದಕ, ಮಂಗಳೂರಿನಲ್ಲಿ ನಡೆದ ತುಳುನಾಡು ಕಪ್ ನಲ್ಲಿ ಒಂದು ಬೆಳ್ಳಿಯ ಪದಕ ಹಾಗೂ ಒಂದು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಉಪನ್ಯಾಸಕ ಕೇಶವ ಬಂಗೇರ ಗೇರುಕಟ್ಟೆ, ಅಸಿಸ್ಟೆಂಟ್ ಕಮಿಷನರ್ ಆಫ್ ಜಿಎಸ್ಟಿ ಮುಂಬೈ ಪ್ರಕಾಶ್ ಪೂಜಾರಿ, ಅಶೋಕ್ ಸಾಲಿಯಾನ್ ರಿತ್ವಿ ನಿವಾಸ ಪರಪ್ಪಾಡಿ ನಿಟ್ಟೆ ಉದ್ಯಮಿ ಮುಂಬೈ, ಚೇತನ್ ಕೋಟ್ಯಾನ್ ಉದ್ಯಮಿ ಅತ್ತೂರು, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ನಿಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ಪ್ರವೀಣ್ ಸಾಲ್ಯಾನ್ ನಿಟ್ಟೆ, ಮಹಾಬಲ ಸುವರ್ಣ, ಉದಯ್ ಕುಮಾರ್, ಸುಷ್ಮಾ ವಿನಯ ಕುಮಾರ್, ಸುರೇಶ್ ಪೂಜಾರಿ,ಶ್ರೀಮತಿ ರೇಖಾ, ಲತೇಶ್ ಸಂದೀಪ್ ಉಪಸ್ಥಿತರಿದ್ದರು.