ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ : ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ - 200ನೇ‌ ಸ್ವಯಂಪ್ರೇರಿತ ‌ರಕ್ತದಾನ ಶಿಬಿರ

Posted On: 10-04-2024 09:32AM

ಉಡುಪಿ : ಖ್ಯಾತ ರಕ್ತದಾನ ಸಂಸ್ಥೆ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಮತ್ತು ರಕ್ತ ಕೇಂದ್ರ ಕೆಎಂಸಿ ಮಣಿಪಾಲ‌ ಇದರ‌‌ ಸಹಕಾರದಲ್ಲಿ ರಕ್ತ ಕೇಂದ್ರ‌ ಕೆಎಂಸಿ ಮಣಿಪಾಲದಲ್ಲಿ ನಡೆದ 200ನೇ‌ ಸ್ವಯಂಪ್ರೇರಿತ ‌ರಕ್ತದಾನ ಶಿಬಿರವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಎಚ್ ಅಶೋಕ್ ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿದ ಅವರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಕೇವಲ‌‌ 4 ವರ್ಷದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ 200ನೇ ರಕ್ತದಾನ ಶಿಬಿರ ಆಯೋಜಿಸಿ ಉಡುಪಿ ಜಿಲ್ಲೆಯ ಹಿರಿಮೆ‌ ಹೆಚ್ಚಿಸಿದೆ. ಪ್ರತಿ ವರ್ಷವು ಉಡುಪಿ ಜಿಲ್ಲೆಯಲ್ಲಿ ಎಪ್ರಿಲ್,‌ ಮೇ ತಿಂಗಳಲ್ಲಿ ಕೃತಕ‌ ರಕ್ತದ ‌ಕೊರತೆ ತಲೆದೋರುತ್ತಿದ್ದು, ಇದರ ಶಾಶ್ವತ ಪರಿಹಾರಕ್ಕೆ ಏಪ್ರಿಲ್, ಮೇ‌ ತಿಂಗಳಲ್ಲಿ ಕಾಲೇಜ್ ಗಳಲ್ಲಿ ಹೆಚ್ಚು ಹೆಚ್ಚು ರಕ್ತದಾನ ಶಿಬಿರ ನಡೆಯುವಂತೆ ಪ್ರೇರೇಪಿಸಿದರೆ ಈ ಕೃತಕ ರಕ್ತದ ಅಭಾವದಿಂದ ಹೊರಬರಲು ಸಾಧ್ಯ ಎಂದರು.

ಡಾ. ಶಮಿ ಶಾಸ್ತ್ರೀ ಸಭೆಯ ಅಧ್ಯಕ್ಷತೆ ವಹಿಸಿದರು.

ಡಾ. ಟೋಮ್ ದೇವಸ್ಯ ಹೃದ್ರೋಗ ತಜ್ಞರು ಕೆಎಂಸಿ ‌ಮಣಿಪಾಲ, ಡಾ. ವಿಜಯ ಕುಮಾರ್,‌ ಮಕ್ಕಳ ಶಸ್ತ್ರಚಿಕಿತ್ಸೆ ತಜ್ಞ ವೈದ್ಯರು ಕೆಎಂಸಿ ಮಣಿಪಾಲ, ಡಾ. ದೇವಿಪ್ರಸಾದ್ ಹೆಜಮಾಡಿ ಪ್ರೊ. ಕೆಎಂಸಿ ಮಂಗಳೂರು, ಡಾ.ಆದರ್ಶ್ ಹೆಬ್ಬಾರ್, ವೈದ್ಯಕೀಯ ನಿರ್ದೇಶಕರು ಆದರ್ಶ ಆಸ್ಪತ್ರೆ ಕುಂದಾಪುರ, ರಕ್ತದ ಆಪತ್ಬಾಂದವ‌ ಸತೀಶ್ ಸಾಲ್ಯಾನ್ ಮಣಿಪಾಲ್,‌ ಅಧ್ಯಕ್ಷರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಡಾ. ಹರಿಣಾಕ್ಷಿ ಕರ್ಕೇರಾ ಅಧ್ಯಕ್ಷರು, ಜೆಸಿಐ ಉಡುಪಿ ಸಿಟಿ, ದೇವದಾಸ್ ಪಾಟ್ಕರ್, ರಾಘವೇಂದ್ರ ಪ್ರಭು ಕರ್ವಾಲು, ಶರತ್ ಕಾಂಚನ್ ಆನಗಳ್ಳಿ, ಉದಯ ನಾಯ್ಕ್ ಉಪಸ್ಥಿತರಿದ್ದರು.

ಡಾ. ಬಾಲಕೃಷ್ಣ ಮದ್ದೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ ದಿನೇಶ್ ಹೆಗ್ಡೆ ಆತ್ರಾಡಿ ಧನ್ಯವಾದ ಅರ್ಪಿಸಿದರು. ಈ ಯಶಸ್ವಿ ರಕ್ತದಾನ ಶಿಬಿರಕ್ಕೆ ರೋಟರಿ ಪರ್ಕಳ, ಜಿಸಿಐ ಉಡುಪಿ ಸಿಟಿ ಹಾಗೂ ಎನ್ ಎಸ್ ಎಸ್ ಘಟಕ ಎಂಐಟಿ ಮಣಿಪಾಲ ಸಹಕಾರ‌ ನೀಡಿದ್ದು, ಒಟ್ಟು 56 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.