ಕಾಪು : ಇಳಕಲ್ಲಿನ ಶಿಲೆಯ ಕಲಾಕುಸುರಿಯಿಂದ ಅತ್ಯದ್ಭುತವಾಗಿ ಮೂಡಿ ಬರುತ್ತಿರುವ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಏಪ್ರಿಲ್ 9 ರಂದು ಬ್ರಹ್ಮಕಳಶೋತ್ಸವಕ್ಕೆ ಚಾಲನೆಯನ್ನು ನೀಡಿ, ಬೀಜ ವಪನ ಅಂದರೆ ನವಧಾನ್ಯಗಳನ್ನು ಬಿತ್ತಲಾಗಿದ್ದು ಅದರ ಅಂಗವಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಂಗಳವಾರದಂದು ಗೋ ನಿವಾಸ ಕಾರ್ಯವು ನಡೆಯಿತು.
ಗೋನಿವಾಸದಲ್ಲಿ ಗೋವುಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ, ಹಾರವನ್ನು ಹಾಕಿ ತಂತ್ರಿಗಳು ಗೋಪೂಜೆಯನ್ನು ನೆರವೇರಿಸಿದರು.
ಶ್ರೀ ಕೃಷ್ಣನ ಕೊಳಲಿನ ನಾದದೊಂದಿಗೆ 9 ಗೋವುಗಳು ಮತ್ತು ಕರುಗಳು ಪ್ರದಕ್ಷಿಣಾ ಪಥದಲ್ಲಿ ಸಾಗಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಗರ್ಭಗುಡಿಯ ಹೊರಭಾಗದಲ್ಲಿ ಅವುಗಳಿಗೆ ಬೈಹುಲ್ಲು, ಹಿಂಡಿ ನೀಡಿ ನಂತರ ಒಂಬತ್ತು ಜನ ಮಹಿಳೆಯರು ಆರತಿಯನ್ನು ಬೆಳಗಿದರು, ನಂತರ ಮಾರಿಯಮ್ಮನ ಗರ್ಭಗುಡಿ ಮತ್ತು ಉಚ್ಚಂಗಿ ಗುಡಿಯಲ್ಲಿ ಬೆಳೆದಿದ್ದ ಧಾನ್ಯಗಳನ್ನು ಗೋವುಗಳಿಗೆ ಮೇಯಲು ಬಿಡಲಾಯಿತು. ಗೋವುಗಳು ಒಂದು ದಿನ ಗರ್ಭಗುಡಿಯಲ್ಲೇ ವಾಸ್ತವ್ಯವಿರಲಿದ್ದು, ಅವುಗಳಿಗೆ ಬೇಕಾದ ಮೇವನ್ನು ನೀಡಲು ವ್ಯವಸ್ಥೆಯನ್ನು ಮಾಡಲಾಗಿದೆ, ನಂತರ ಗೋವುಗಳ ಹಾಲನ್ನು ಕರೆದು ಭಕ್ತಾದಿಗಳಿಗೆ ನೀಡಲಾಗುತ್ತದೆ.
ಅದೇ ರೀತಿಯಾಗಿ ಸಂಜೆ ಸಮಿತಿಯ ಸದಸ್ಯರಿಂದ ಕುಣಿತ ಭಜನೆ, ಭಜನಾ ಕಾರ್ಯಕ್ರಮ ಜರಗಲಿದೆ.
ಕಾಪು ಶಾಸಕ, ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಗೌರವಾಧ್ಯಕ್ಷ ಅನಿಲ್ ಬಲ್ಲಾಳ್ ಕಾಪು ಬೀಡು, ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಮತ್ತು ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್ ಕೆ., ಜ್ಯೋತಿಷ್ಯ ವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ ಮಡುಂಬು, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಉದ್ಯಮಿ ಸದಾನಂದ ಶೆಟ್ಟಿ ಪುಣೆ, ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಉಮಾಕೃಷ್ಣ ಶೆಟ್ಟಿ ಮುಂಬ, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಮನೋಹರ್ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ್ ಸುಂದರ್ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಪುಣೆ ಸಮಿತಿ ಉಪಾಧ್ಯಕ್ಷ ಮಾಧವ ಶೆಟ್ಟಿ ಪಾದೂರು ಹೊಸಮನೆ, ದಿನೇಶ್ ಶೆಟ್ಟಿ ಕಳತ್ತೂರು, ಉದಯ್ ಶೆಟ್ಟಿ ಕಳತ್ತೂರು, ವಸಾಯಿ ಡಹಾಣು ವಲಯದ ಮುಖ್ಯ ಸಂಚಾಲಕ ರಮೇಶ್ ವಿ. ಶೆಟ್ಟಿ ಮುಂಬಯಿ, ಮೀರಾ ಬಾಯಂದರ್ ವಲಯದ ಮುಖ್ಯ ಸಂಚಾಲಕ ಕಿಶೋರ್ ಶೆಟ್ಟಿ ಕುತ್ಯಾರು, ವಾರ್ಡ್ ಸಮಿತಿ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ, ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಮತ್ತಿತರರು ಉಪಸ್ಥಿತರಿದ್ದರು.