ಮೇ 2,3,4 : ಡಿಕೆಎಸ್ಸಿ, ಮರ್ಕಝ್ ಮೂಳೂರು ಇದರ ಸನದು ದಾನ ಸಮ್ಮೇಳನ
Posted On:
01-05-2024 04:35PM
ಕಾಪು : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ ಅಧೀನ ಸಂಸ್ಥೆಯಾದ ಮರ್ಕಝ್ ತ ಅ್ ಲೀಮಿಲ್ ಇಹ್ಸಾನಿನ ಭಾಗವಾದ ಅಲ್ ಇಹ್ಸಾನ್ ದ ಅವಾ ಕಾಲೇಜಿನಲ್ಲಿ ಧಾರ್ಮಿಕ, ಲೌಕಿಕ ಪದವಿ ಪೂರೈಸಿದ ಯುವ ವಿದ್ವಾಂಸರ ಘಟಿಕೋತ್ಸವ ಮಹಾಸಮ್ಮೇಳನವು ಮೂಳೂರು ಮರ್ಕಝ್ ಕ್ಯಾಂಪಸ್ಸಿನಲ್ಲಿ ಮೇ. 2,3 ಹಾಗೂ 4 ನಡೆಯಲಿದೆ ಎಂದು ಆಲ್ ಇಹ್ಸಾನ್ ಎಜುಕೇಶನ್ ಸೆಂಟರ್, ಮೂಳೂರು ಇದರ ಮ್ಯಾನೇಜರ್ ಅಲ್ ಹಾಜಿ ಮುಸ್ತಫಾ ಸ ಅದಿ ಹೇಳಿದರು.
ಅವರು ಬುಧವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೇ 2ರಂದು ಧ್ವಜಾರೋಹಣ, ಉದ್ಘಾಟನಾ ಸಮ್ಮೇಳನವು ಜರಗಲಿದೆ. ಮೇ 3ರಂದು ಖತಮುಲ್ ಕುರಾನ್ ಮಜ್ಲಿಸ್, ಗ್ರ್ಯಾಂಡ್ ಅಲ್ಯುಮಿನಿ ನಡೆಯಲಿದೆ. ಮೇ.4ರಂದು ಮಹಿಳಾ ಪದವಿ ಪ್ರದಾನ ಕಾರ್ಯಕ್ರಮ ಹಾಗು ಝಹರತುಲ್ ಕುರಾನ್ ಕಾನ್ವಕೇಶನ್ ನಡೆಯಲಿದೆ. ಅದೇ ದಿನ ಸಂಜೆ ಸನದುದಾನ ಹಾಗೂ ಸಮಾರೋಪ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ಜರಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಕೆಎಸ್ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಆಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್, ಸ್ವಾಗತ ಸಮಿತಿ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನೇಜಾರು, ಸ್ವಾಗತ ಸಮಿತಿ ಕಾರ್ಯದರ್ಶಿ ಎಸ್ ಕೆ ಇಕ್ಬಾಲ್ ಶಂಶುದ್ದೀನ್ ಕಟಪಾಡಿ, ಪ್ರಚಾರ ಸಮಿತಿ ಅಧ್ಯಕ್ಷರಾದ ಕೆ ಎ ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್ಟ, ಸ್ವಾಗತ ಸಮಿತಿ ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ ಉಪಸ್ಥಿತರಿದ್ದರು.