ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ವಿಶ್ವ ತಾಯಂದಿರ ದಿನ : ಕಾಪು ಶ್ರೀ ಮಾರಿಯಮ್ಮನ ಸ್ವರ್ಣ ಗದ್ದುಗೆಯ ಕಚೇರಿ ಉದ್ಘಾಟನೆ

Posted On: 12-05-2024 03:01PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿಯಲ್ಲಿ ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿಯನ್ನು ನವ ದೀಪಗಳನ್ನು ಬೆಳಗಿಸುವ ಮೂಲಕ ಆದಿತ್ಯವಾರ ಉದ್ಘಾಟಿಸಲಾಯಿತು.

ಈ ಸಂದರ್ಭ ಮುಂಬೈನ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್ ಇದರ ಆಡಳಿತ ನಿರ್ದೇಶಕರು, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಅಧ್ಯಕ್ಷರಾದ ರವಿ ಸುಂದರ್ ಶೆಟ್ಟಿ ಮಾತನಾಡಿ ಕಾಪು ಮಾರಿಗುಡಿಯಲ್ಲಿ ಗದ್ದುಗೆ ಪೂಜೆ ವಿಶೇಷವಾಗಿದ್ದು ಅದರಂತೆ ಸ್ವರ್ಣ ಗದ್ದುಗೆಗೆ ಪ್ರಾಮುಖ್ಯತೆ ನೀಡಲಾಗಿದೆ. ಭಕ್ತಾದಿಗಳು ಈ ಕಾರ್ಯಕ್ಕೆ ಕೈಜೋಡಿಸಬೇಕೆಂದು ವಿನಂತಿಸಿದರು. ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಪ್ರಧಾನ ಕಾರ್ಯಾಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ ಕಾಪು ಶ್ರೀ ಹೊಸ ಮಾರಿಗುಡಿ ದೇವಳದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಮಾರಿಯಮ್ಮನ ಗದ್ದುಗೆಯನ್ನು ಸ್ವರ್ಣದಿಂದಲೇ ಮಾಡಬೇಕೆನ್ನುವುದು ದೇವಳದ ಅಭಿವೃದ್ಧಿ ಸಮಿತಿಯ ಆಶಯ. ಈಗಾಗಲೇ ಗದ್ದುಗೆ ನಿರ್ಮಾಣಕ್ಕಾಗಿ ಭಕ್ತರು ಚಿನ್ನವನ್ನು ನೀಡುತ್ತಿದ್ದಾರೆ. ಸ್ವರ್ಣ ಸಮರ್ಪಣೆಯ ಮಾಹಿತಿಯನ್ನು ಭಕ್ತಾದಿಗಳಿಗೆ ತಲುಪಿಸಬೇಕೆನ್ನುವ ದೃಷ್ಟಿಯಿಂದ ಕಚೇರಿಯನ್ನು ಆರಂಭಿಸಲಾಗಿದೆ ಎಂದರು. ಕಾಪು ಶ್ರೀ ಹೊಸ ಮಾರಿಗುಡಿ‌ ದೇವಳದ ಅಭಿವೃದ್ಧಿ ಸಮಿತಿ ‌ಅಧ್ಯಕ್ಷ ಕೆ‌. ವಾಸುದೇವ ಶೆಟ್ಟಿ ಮಾತನಾಡಿ ಇಂದು ವಿಶ್ವ ತಾಯಂದಿರ ದಿನದಂದು ಕಾಪು ಅಮ್ಮನ ಸ್ವರ್ಣ ಗದ್ದುಗೆ ಕಚೇರಿ ಉದ್ಘಾಟನೆ ನಡೆದಿದೆ. ಶೀಘ್ರದಲ್ಲಿ ಅಮ್ಮನ ಸ್ವರ್ಣ ಗದ್ದುಗೆ ಕಾರ್ಯದ ಚಾಲನೆ ಭಕ್ತ ಜನರ ಕೊಡುಗೆಯಿಂದ ಆಗಲಿ ಎಂದು ಶುಭ ಹಾರೈಸಿದರು.

ಸಾಯಿರಾಧ ಗ್ರೂಪ್ಸ್ ಪ್ರಮುಖರಾದ ಮನೋಹರ್ ಎಸ್. ಶೆಟ್ಟಿ ಕುಟುಂಬ ವರ್ಗದ ಪರವಾಗಿ‌ ಸ್ವರ್ಣ ಗದ್ದುಗೆಗೆ ಚಿನ್ನವನ್ನು ಅರ್ಪಿಸಿದರು. ಕಚೇರಿ ಆರಂಭಕ್ಕೂ ಮುನ್ನ ಕಾಪು ಶ್ರೀ ಲಕ್ಷ್ಮಿಜನಾರ್ಧನ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರು ಮತ್ತು ಮುಂಬೈ ಸಮಿತಿಯ ಅಧ್ಯಕ್ಷರಾದ ಸುಧಾಕರ ಹೆಗ್ಡೆ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಹರಿಯಪ್ಪ ಕೋಟ್ಯಾನ್, ಬಿ ಎನ್ ಶಂಕರ್ ಪೂಜಾರಿ, ರತ್ನಾಕರ ಶೆಟ್ಟಿ ನಡಿಕೆರೆ, ಪ್ರಸನ್ನ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ ಕೊತ್ವಾಲಗುತ್ತು, ಕಾರ್ಯದರ್ಶಿ ರವಿ ಭಟ್ ಮಂದಾರ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಮುಂಬೈ ಸಮಿತಿಯ ಗೌರವ ಸಲಹೆಗಾರರಾದ ಸಿಎ ಎನ್. ಬಿ ಶೆಟ್ಟಿ, ಅಭಿವೃದ್ಧಿ ಸಮಿತಿಯ ಪುಣೆ ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲಬೆಟ್ಟು, ಚಂದ್ರಹಾಸ್ ಶೆಟ್ಟಿ ಮುಂಬೈ, ರಂಜನಿ ಸುಧಾಕರ ಹೆಗ್ಡೆ, ಉಪಾಧ್ಯಕ್ಷರುಗಳಾದ ಮಾಧವ ಆರ್ ಪಾಲನ್, ಮನೋಹರ್ ಎಸ್. ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ ಶೆಟ್ಟಿ ಬಾಲಾಜಿ, ಮುಂಬೈ ಸಮಿತಿಯ ವಸಾಯಿ - ಡಹಾನು ವಲಯದ ಮುಖ್ಯ ಸಂಚಾಲಕರಾದ ರಮೇಶ್ ವಿ ಶೆಟ್ಟಿ, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ, ಗ್ರಾಮ ಸಮಿತಿಯ ಪ್ರಧಾನ ಸಂಚಾಲಕರಾದ ಅರುಣ್ ಶೆಟ್ಟಿ ಪಾದೂರು, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರುಗಳಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕಾಪು ಕೊಲ್ಯ, ಸಂಚಾಲಕರುಗಳಾದ ಸಂದೀಪ್ ಶೆಟ್ಟಿ ಶಿರ್ವ ಮುಂಬೈ, ಮೋಹನ್ ವಿ. ಶೆಟ್ಟಿ ಮುಂಬೈ, ಸುನಿಲ್ ಎಸ್.ಪೂಜಾರಿ ಕಾಪು, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್., ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರಾದ ಗೀತಾಂಜಲಿ ಎಮ್.ಸುವರ್ಣ, ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕರಾದ ಬೀನಾ ವಿ.ಶೆಟ್ಟಿ, ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ವಿದ್ಯಾಧರ ಪುರಾಣಿಕ್, ಸಂಚಾಲಕರಾದ ರಾಧಾರಮಣ ಶಾಸ್ತ್ರಿ, ಸಂಚಾಲಕರಾದ ಅನುರಾಧ ಮನೋಹರ್ ಶೆಟ್ಟಿ, ಪ್ರಚಾರ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರಾದ ಸಾವಿತ್ರಿ ಗಣೇಶ್, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ್ ಆಚಾರ್ಯ, ಕೂಷ್ಮಾಂಡಾ ತಂಡದ ಸಂಚಾಲಕರಾದ ಕೆ. ಕೊರಗ ಬೆಳಪು, ಚಂದ್ರಘಂಟಾ ತಂಡದ ಮುಖ್ಯ ಸಂಚಾಲಕರಾದ ಪಿ ಕೆ ಶ್ರೀನಿವಾಸ, ಕಾಲ ರಾತ್ರಿ ತಂಡದ ಮುಖ್ಯ ಸಂಚಾಲಕರಾದ ಶೇಖರ ಆಚಾರ್ಯ, ವಿಜಯಲಕ್ಷ್ಮಿ ಆಚಾರ್ಯ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಹಣೆಯ ಅರ್ಚನಾ ಶೆಟ್ಟಿ, ಸಂದೀಪ್ ಕುಮಾರ್ ಉಪಸ್ಥಿತರಿದ್ದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು, ಕಾಪು ದಿವಾಕರ ಶೆಟ್ಟಿ ವಂದಿಸಿದರು.