ಪಡುಬಿದ್ರಿ : ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ರದ್ದುಪಡಿಸಿರುವುದನ್ನು ವಿರೋಧಿಸಿ ಶುಕ್ರವಾರ ಟೋಲ್ ಮುಂಭಾಗ ಹಕ್ಕೊತ್ತಾಯ ಸಭೆ ನಡೆಸಿ ಟೋಲ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಟೋಲ್ ಪ್ರಬಂಧಕ ತಿಮ್ಮಯ್ಯ ಮಾತನಾಡಿ, ಮುಂದಿನ ವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಸ್ತಾನ, ಹೆಜಮಾಡಿ ಟೋಲ್ ಸಮಸ್ಯೆಯ ಇತ್ಯರ್ಥಕ್ಕೆ ಸಭೆಯನ್ನು ಜಿಲ್ಲಾಧಿಕಾರಿ ಕರೆಯಲಿದ್ದಾರೆ. ಅದುವರೆಗೂ ಸ್ಥಳೀಯರಿಗಿದ್ದ ವಿನಾಯಿತಿಯನ್ನು ಯಥಾಸ್ಥಿತಿ ಮುಂದುವರಿಸಲಾಗುವುದು ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಶೇಖರ್ ಹೆಜಮಾಡಿ ಮಾತನಾಡಿ, ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸಬಾರದು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಎದುರಿಸಬೇಕು ಎಂದು ಎಚ್ಚರಿಸಿದರು.
ಹಕ್ಕೊತ್ತಾಯ ಸಭೆಯಲ್ಲಿ ಶೇಖರ್ ಹೆಜ್ಮಾಡಿ,
ಶೇಕಬ್ಬ ಕೋಟೆ, ಸಂತೋಷ್ ಪಡುಬಿದ್ರಿ, ನವೀನಚಂದ್ರ ಜೆ ಶೆಟ್ಟಿ, ವೃೆ ಸುಕುಮಾರ್, ಶಶಿಕಾಂತ್ ಪಡುಬಿದ್ರಿ, ವಿಶ್ವಾಸ್ ಅಮೀನ್, ಗುಲಾಂ ಮೊಹಮ್ಮದ್, ಸುಧಾಕರ್ ಶೆಟ್ಟಿ ಬಿಕ್ರಿಬೆಟ್ಟು, ರಾಲ್ಪಿ ಡಿ ಕೋಸ್ತಾ, ರವಿ ಎಚ್ ಕುಂದರ್, ರೇಷ್ಮಾ ಮೆಂಡನ್, ಶಶಿಕಲಾ ಪೂಜಾರಿ,
ನಿರ್ಮಲ, ಸೃಯದ್ ನಿಝಾಮ್, ಸುಧೀರ್ ಕರ್ಕೇರ, ಉಮಾನಾಥ್ ಪಡುಬಿದ್ರಿ, ದಿನೇಶ್ ಕೋಟ್ಯಾನ್ ಪಲಿಮಾರ್, ಜಿತೇಂದ್ರ ಪುರ್ಟಾಡೋ, ಮಧು ಅಚಾರ್ಯ, ಲೋಕೇಶ್ ಅಮೀನ್, ತಸ್ನೀನ್ ಅರಾ, ಶರ್ಪುದ್ದೀನ್ ಶೇಕ್, ಅಶೋಕ್ ಸಾಲ್ಯಾನ್, ಕೇಶವ್ ಸಾಲ್ಯಾನ್ ಹೆಜಮಾಡಿ, ಸನಾ ಇಬ್ರಾಹಿಮ್, ಹಸನ್ ಕೋಡಿ, ದೀಪಕ್ ಕೋಟ್ಯಾನ್ ಹೆಜಮಾಡಿ, ಎಮ್ .ಎಸ್ ಶಾಫಿ,
ರಮೀಜ್ ಹುಸೇನ್, ರೋಶನ್ ಕಾಂಚನ್, ಪ್ರಾಣೇಶ್ ಹೆಜ್ಮಾಡಿ, ಅಬ್ದುಲ್ ಅಜೀಜ್ ಹೆಜಮಾಡಿ, ಪಾಂಡುರಂಗ ಕೋಟ್ಯಾನ್ ,
ಮೋಹನ್ ಉಪಸ್ಥಿತರಿದ್ದರು.