ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ನಿರ್ಮಾಣ ಹಂತದಲ್ಲಿರುವ ಶಿಲಾಮಯ ಗರ್ಭಗುಡಿ, ಮಾರಿಗುಡಿಯ ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ ಪೂಜೆ ಸಂಪನ್ನ

Posted On: 25-06-2024 07:17AM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಸಂಪೂರ್ಣ ಇಳಕಲ್ ಕೆಂಪು ಶಿಲೆಯೊಂದಿಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ಗರ್ಭಗುಡಿ ಮತ್ತು ಸಂಪೂರ್ಣ ಮಾರಿಗುಡಿಯ ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ ಪೂಜೆಯು ಸೋಮವಾರ ದೇಗುಲದ ತಂತ್ರಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಹೊಸ ಮಾರಿಗುಡಿ ನಿರ್ಮಾಣ ಕಾಮಗಾರಿಯನ್ನು ವಹಿಸಿಕೊಂಡಿರುವ ಶಿಲ್ಪಿಗಳು ಮಾರಿಗುಡಿಯ ಮಹಾದ್ವಾರ, ನಾಲ್ಕು ಮಹಾಸ್ಥಂಭ, ಮರದ ಕೆತ್ತನೆಯ ಮೇಲ್ಛಾವಣಿಯ ಕರ್ಣ ಮುಚ್ಚಿಗೆ, ಸುತ್ತು ಪೌಳಿಯ ಶಿಲಾಸ್ಥಂಭಗಳ ಸಹಿತವಾಗಿ ನಾಲ್ಕು ಲಕ್ಷ ರೂ. ಗಳಿಂದ ಎರಡು ಕೋಟಿ ರೂಪಾಯಿವರೆಗಿನ ೮೬ ಶಿಲಾಸ್ಥಂಬಗಳನ್ನು ದಾನಿಗಳಿಗೆ ಹಸ್ತಾಂತರಿಸಿದರು.

ದಾನಿಗಳು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಕೆ. ರವಿಕಿರಣ್, ಮುಂಬಯಿ ಗೌರವಾಧ್ಯಕ್ಷ ಎಂ. ಸುಧಾಕರ್ ಹೆಗ್ಡೆ, ಮುಂಬಯಿ ಸಮಿತಿ ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಮನೋಹರ್ ಶೆಟ್ಟಿ ಕಾಪು, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಮಹಾದ್ವಾರದ ದಾನಿ ಕೆ. ಎಂ. ಶೆಟ್ಟಿ ಮುಂಬಯಿ, ಮಹಾಸ್ತಂಭದ ದಾನಿ ಪ್ರಭಾಕರ ಜೆ. ಶೆಟ್ಟಿ ಮಂಡಗದ್ದೆ ಹಾಗೂ ಶಿಲಾಸ್ತಂಭ ಸಮರ್ಪಿಸಿದ ದಾನಿಗಳು, ಅವರ ಕುಟುಂಬಸ್ಥರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂದು ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆ : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಗೆ ನೂತನ ಸ್ವರ್ಣ ಗದ್ದುಗೆ ನಿರ್ಮಾಣಗೊಳ್ಳಲಿದ್ದು ಗದ್ದುಗೆಗೆ ಸ್ವರ್ಣ ಸಮರ್ಪಣೆಗೆ ಜೂ. ೨೫ರಂದು ಬೆಳಿಗ್ಗೆ ೯.೦೯ ಕ್ಕೆ ಸ್ವರ್ಣ ಗೌರಿ ಪೂಜೆಯ ಮೂಲಕವಾಗಿ ಚಾಲನೆ ನೀಡಲಾಗುವುದು. ಭಕ್ತರಿಗೆ ೯ ಗ್ರಾಂ, ೧೮ ಗ್ರಾಂ, ೯೯ ಗ್ರಾಂ, ೨೪೩ ಗ್ರಾಂ, ೪೫೦ ಗ್ರಾಂ, ೯೯೯ ಗ್ರಾಂ ಸ್ವರ್ಣ ಸಮರ್ಪಣೆಗೆ ಅವಕಾಶವಿದ್ದು ಸ್ವರ್ಣ ಸಮರ್ಪಣಾ ಸಮಾರಂಭ ಮತ್ತು ಮಾರಿಯಮ್ಮ ದೇವಿಯ ಸನ್ನಿಧಾನದಲ್ಲೂ ಸ್ವರ್ಣ ಸಮರ್ಪಿಸಬಹುದಾಗಿದೆ. ಸ್ವರ್ಣ ಗದ್ದುಗೆ ಸಮರ್ಪಣೆಗೆ ಹೊಸ ಚಿನ್ನದೊಂದಿಗೆ ಭಕ್ತರು ತಾವು ಉಪಯೋಗಿಸಿದ, ಬಳಸಿದ ಚಿನ್ನಗಳನ್ನೂ ಹರಕೆಯ ರೂಪದಲ್ಲಿ ಸಮರ್ಪಿಸಲು ಅವಕಾಶವಿದೆ ಎಂದು ಸ್ವರ್ಣ ಸಮರ್ಪಣಾ ಸಮಿತಿ ಮತ್ತು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಪ್ರಕಟಣೆಯು ತಿಳಿಸಿದೆ.