ಹೆಜಮಾಡಿ ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ - ವಿದ್ಯಾರ್ಥಿವೇತನ ವಿತರಣೆ ; ವಿವಿಧ ಸಂಘಗಳ ಉದ್ಘಾಟನೆ
Posted On:
12-07-2024 10:16AM
ಹೆಜಮಾಡಿ : ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹೆಜಮಾಡಿ ಇಲ್ಲಿ ಜುಲೈ 11ರಂದು ಮಣಿಪಾಲ ಟೆಕ್ನಾಲಜಿ ಸಂಸ್ಥೆಯ ವತಿಯಿಂದ ರೊನಾಲ್ಡ್ ಡಿಸೋಜಾ ಎಚ್ಆರ್ ಮ್ಯಾನೇಜರ್ ಇವರು 2023 -24 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶದ ದಾಖಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು.
ಈ ಸಂದರ್ಭ ಅವರು ಮಾತನಾಡಿ, ಪ್ರತಿ ವರ್ಷವೂ ಸಂಸ್ಥೆಯು ನೂರು ಶೇಕಡ ಫಲಿತಾಂಶ ದಾಖಲಿಸುವಂತಾಗಲಿ ಎಂದು ಹಾರೈಸಿದರು.
ಪ್ರಸ್ತುತ 10ನೇ ತರಗತಿ ವಿದ್ಯಾರ್ಥಿಗಳನ್ನು ಉತ್ತಮ ಫಲಿತಾಂಶ ದಾಖಲಿಸುವಂತೆ ಪ್ರೋತ್ಸಾಹಿಸಿದರು. ಶಾಲೆಯ ವಿವಿಧ ಸಂಘಗಳನ್ನು ಉದ್ಘಾಟನೆ ಮಾಡಿದರು.
ಸಂಸ್ಥೆಯ ಹಿರಿಯ ಶಿಕ್ಷಕಿ ಸಂಪಾವತಿ ಮಾತಮಾಡಿ, ಮಣಿಪಾಲ ಟೆಕ್ನಾಲಜಿ ಸಂಸ್ಥೆ ಈ 3 ವರ್ಷಗಳಿಂದ ಸಂಸ್ಥೆಗೆ ನೀಡಿದ ಇನ್ಸಿನರೇಟರ್, ಕಂಪ್ಯೂಟರ್, ಪ್ರಿಂಟರ್, ಪ್ರೊಜೆಕ್ಟರ್ , ವಾಟರ್ ಪ್ಯೂರಿಫೈಯರ್ ಈ ಮೊದಲಾದ ಕೊಡುಗೆಗಳನ್ನು ಸ್ವರಿಸುತ್ತಾ ಮಣಿಪಾಲ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಶಾಲಾ ಸಂಸತ್ ನ ಉಸ್ತುವಾರಿ ಶಿಕ್ಷಕಿ ಅನಿತಾ ವಿವಿಧ ಸಂಘಗಳ ಕಾರ್ಯವನ್ನು ತಿಳಿಸಿದರು.
ಹಿರಿಯ ಶಿಕ್ಷಕಿ ಸಂಪಾವತಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕರಾದ ದೀಪಾ ಉಡುಪ ಕಾರ್ಯಕ್ರಮ ನಿರೂಪಿಸಿದರು. ಸರೋಜಾ ಆಚಾರಿ ವಂದಿಸಿದರು. SDMC ಸದಸ್ಯರು, ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.