ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜನತೆಯ ಸಂಕಷ್ಟಗಳಿಗೆ ಹಾಗೂ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತೇನೆ : ಐವನ್ ಡಿಸೋಜ

Posted On: 16-07-2024 09:31AM

ಹೆಜಮಾಡಿ : ಅವಿನಾಭಾವ ಸಂಬಂಧವಿರುವ ಕಾಪು ಕ್ಷೇತ್ರದ ಹೆಜಮಾಡಿ ಭಾಗದಲ್ಲಿ ಅಭಿನಂದನೆ ಸ್ವೀಕರಿಸುವುದು ನನ್ನ ಭಾಗ್ಯ. ಈ ಭಾಗದ ಜನತೆಯ ಸಂಕಷ್ಟಗಳಿಗೆ ಹಾಗೂ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತೇನೆ. ನಿಮ್ಮ ಪ್ರೀತಿಗೆ ಅಭಾರಿಯಾಗಿದ್ದೇನೆ. ನಾನು ಹಾಗು ಪತ್ನಿ ಡಾ. ಕವಿತಾರವರು ಸದಾ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತೇವೆ ಎಂದು ಐವನ್ ಡಿಸೋಜಾರವರು ಹೇಳಿದರು. ಅವರು ಹೆಜಮಾಡಿ ಬಿಲ್ಲವ ಸಂಘದಲ್ಲಿ ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಗೌರವವನ್ನು ಸ್ವೀಕರಿಸಿ ಮಾತನಾಡಿದರು.

ವಿವಿಧ ಸಂಘಸಂಸ್ಥೆಗಳ ಗೌರವ : ಹೆಜಮಾಡಿ ಅಟೋ ರಿಕ್ಷಾ ಯೂನಿಯನ್, ಹೆಜಮಾಡಿ ಬಸ್ತಿಪಡ್ಪು ಶ್ರೀ ದೃೆವರಾಜ ಕೋರ್ದಬ್ಬು ಸಮಿತಿ, ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್, ನಡಿಕುದ್ರು ಜಾರಂದಾಯ ಸೇವಾ ಸಮಿತಿ, ಹೆಜಮಾಡಿ ಹಾಲು ಉತ್ಪಾದಕರ ಘಟಕ, ಹೆಜಮಾಡಿ ಮೊಗವೀರ ಮಹಾಸಭಾ, ಹೆಜಮಾಡಿ ಬಂದರು ಅಭಿವೃದ್ಧಿ ಸಮಿತ, ಆಲಡೆ ಶ್ರೀ ಅಬ್ಬಗ ದಾರಗ ಸೇವಾ ಸಮಿತಿ ಹಾಗೂ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯವರು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರನ್ನು ಸನ್ಮಾನಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಪು ಕ್ಷೇತ್ರದಲ್ಲಿ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಐವನ್ ಡಿ ಸೋಜಾರವರು ತನ್ನ ಬದ್ಧತೆ ಹಾಗೂ ಪ್ರಾಮಾಣಿಕ, ನಿಷ್ಠೆಯ ಸೇವೆಯಿಂದ ದ್ವಿತೀಯ ಬಾರಿಗೆ ವಿಧಾನ ಪರಿಷತ್ ಗೆ ಆಯ್ಕೆಗೊಂಡಿರುವುದು ಅಭಿನಂದನೀಯ ಹಾಗೂ ಹೆಮ್ಮೆಯ ವಿಷಯವಾಗಿದೆ. ಕಾಪು ಕ್ಷೇತ್ರ ಅಭಿವೃದ್ಧಿಯನ್ನು ಹೊಂದಲು ಐವನ್ ಡಿಸೋಜ ರವರ ಕೂಡುಗೆ ಅಪಾರ ಎಂದರು. ಹೆಜಮಾಡಿಯ ನಾರಾಯಣಗುರು ‌ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ನಿರ್ಮಿಸಲು ಅನುದಾನ, ಅಟೋ ರಿಕ್ಷಾ ಪಾರ್ಕ್ ಗೆ ತಗಡು ಚಪ್ಪರ ಹಾಗೂ ಇಂಟರ್ ಲಾಕ್ ಅಳವಡಿಸಲು ಅನುದಾನ ಒದಗಿಸುವಂತೆ ರಿಕ್ಷಾ ಯೂನಿಯನ್ ನವರು ಮತ್ತು ಹೆಜಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೃೆದ್ಯರನ್ನು ನೇಮಿಸುವಂತೆ ಹಾಗೂ ಜೌಷಧಿ ಹಾಗು ವೃೆದ್ಯೆಕೀಯ ಸಲಕರಣೆಗಳನ್ನು ಒದಗಿಸುವಂತೆ ಹೆಜಮಾಡಿ ಗ್ರಾ.ಪಂ ಸದಸ್ಯೆ ನಿರ್ಮಲಾ ರವರು ಮನವಿಯನ್ನು ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಗುಲಾಂ ಮೊಹಮ್ಮದ್ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಳಪು ಗ್ರಾ.ಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ , ಮಾಜಿ.ತಾ.ಪಂ.ಸದಸ್ಯ ನವೀನಚಂದ್ರ ಜೆ ಶೆಟ್ಟಿ . ಕನ್ನಂಗಾರ್ ಮಸೀದಿ ಧರ್ಮ ಗುರು ಅಶ್ರಫ್ ಸಖಾಫಿ, ಗ್ರಾ.ಪಂ ಅಧ್ಯಕ್ಷೆ ರೇಷ್ಮಾ ಮೆಂಡನ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಸುವರ್ಣ, ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜ್ಮಾಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ರಾಲ್ಫಿ ಡಿ ಕೋಸ್ತಾ , ಉಡುಪಿ ಜಿಲ್ಲಾ ಮೀನುಗಾರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ದಲಿತ ಮುಖಂಡ ರಾಜು ಹೆಜ್ಮಾಡಿ , ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ , ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ , ಕೆ.ಪಿ.ಸಿ.ಸಿ ಕೋ-ಅರ್ಡೀನೇಟರ್ ಅಬ್ದುಲ್ ಅಜೀಜ್ ಹೆಜ್ಮಾಡಿ, ಮಾಜಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಲಿಡಿಯೋ ಪೋರ್ಟಾಡೂ , ಉಪಸ್ಥಿತರಿದ್ದರು. ಕೇಶವ್ ಸಾಲ್ಯಾನ್ ಸ್ವಾಗತಿಸಿದರು. ಶೇಖರ್ ಹೆಜ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ನಂಬಿಯಾರ್ ಕಂಚಿನಡ್ಕ ನಿರೂಪಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು.