ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಚ್ಚಿಲ ರೋಟರಿ ಕ್ಲಬ್ ಪದಗ್ರಹಣ

Posted On: 21-07-2024 03:01PM

ಉಚ್ಚಿಲ : ಸಾಮಾಜಿಕ ವ್ಯವಸ್ಥೆಯಲ್ಲಿ ನಾವು ಮಾಡುವ ಸೇವೆ ದೊಡ್ಡದಾಗಬೇಕಂತಿಲ್ಲ ಸಣ್ಣದಾದರೂ ಸೇವೆಯೇ ಆಗಿದೆ. ನಾಯಕತ್ವದ ಜೊತೆಗೆ ಜವಾಬ್ದಾರಿಯ ಬಗೆಗೂ ತಿಳಿಯುವ ಕಾರ್ಯ ರೋಟರಿ ಸಂಸ್ಥೆಯಲ್ಲಿದೆ. ಹೆಚ್ಚಿನ ಸದಸ್ಯರು ಸೇರ್ಪಡೆಯಾಗುವ ಮೂಲಕ ಸಂಸ್ಥೆಯನ್ನು ಬಲಪಡಿಸಬೇಕು ಎಂದು ಝೋನ್ V ಆರ್.ಐ. ಜಿಲ್ಲೆ 3182 ಮಾಜಿ ಅಸಿಸ್ಟೆಂಟ್ ಗವರ್ನರ್ ರೋ. ಪಿಎಚ್ಎಫ್ ಸೂರ್ಯಕಾಂತ್ ಶೆಟ್ಟಿ ಹೇಳಿದರು‌. ಅವರು ಉಚ್ಚಿಲದಲ್ಲಿ ಜರಗಿದ ಉಚ್ಚಿಲ ರೋಟರಿ ಸಂಸ್ಥೆಯ 2024 -25ನೇ ಸಾಲಿನ ಪದಗ್ರಹಣ ಅಧಿಕಾರಿಯಾಗಿ ಪದಗ್ರಹಣ ನೆರವೇರಿಸಿ ಮಾತನಾಡಿದರು.

ನೂತನ ಅಧ್ಯಕ್ಷರಾದ ಹಿಬದುಲ್ಲ ರಫೀಕ್ ಅಹಮ್ಮದ್ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಕುಂಡಂತಾಯ ಮತ್ತು ತಂಡದ ಪದಗ್ರಗಣ ನೆರವೇರಿತು.

ಗೌರವ/ಸನ್ಮಾನ : ಉಚ್ಚಿಲ ವ್ಯಾಪ್ತಿಯ ಶಾಲೆಗಳ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸಮಥ್೯ ಆರ್ ಜೋಶಿ, ಶಹನ ಪಾತಿಮ, ಅಬ್ಶೀನ್ ಆಯೇಷ, ಶ್ರಿಷನ್ ಶೆಟ್ಟಿ, ಗಾಯತ್ರಿ ಪೈ, ಸಂಸ್ಥೆಗೆ ಸೇರ್ಪಡೆಗೊಂಡ ನೂತನ ಸದಸ್ಯರಾದ ನಗ್ಮ, ಶಿಮಾಝ್, ಚಂದ್ರಹಾಸ ಆಚಾರ್ಯರನ್ನು ಗೌರವಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಶ್ರೀಮತಿ ಪಿ ಎಸ್ ಪುತ್ರಾಯರನ್ನು, ಮಾಜಿ ಸಹಾಯಕ ಗವರ್ನರ್ ಪಿ ಎಚ್ ಎಫ್ ಶೈಲೇಂದ್ರ ರಾವ್ ಕೆ., ಝೋನಲ್ ಲೆಫ್ಟಿನೆಂಟ್ ಚಂದ್ರ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾದ ಶೇಖಬ್ಬ, ಅಚ್ಯುತ ಶೆಣೈ, ನೂತನ ಅಧ್ಯಕ್ಷ, ಕಾರ್ಯದರ್ಶಿಯಾದ ಹಿಬದುಲ್ಲ ರಫೀಕ್ ಅಹಮ್ಮದ್ ಹಾಗೂ ಸತೀಶ್ ಕುಂಡಂತಾಯರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರೋಟರಿ ಸಹಾಯಕ ಗವರ್ನರ್ ಅನಿಲ್ ಡೇಸಾ, ಮಾಜಿ ಸಹಾಯಕ ಗವರ್ನರ್ ಪಿ ಎಚ್ ಎಫ್ ಶೈಲೇಂದ್ರ ರಾವ್ ಕೆ., ಝೋನಲ್ ಲೆಫ್ಟಿನೆಂಟ್ ಮೆಲ್ವಿನ್ ಡಿಸೋಜ, ಝೋನಲ್ ಲೆಫ್ಟಿನೆಂಟ್ ಚಂದ್ರ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾದ ಶೇಖಬ್ಬ, ನಿಕಟಪೂರ್ವ ಕಾರ್ಯದರ್ಶಿ ಅಚ್ಯುತ ಶೆಣೈ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಶೇಖಬ್ಬ ಸ್ವಾಗತಿಸಿದರು. ಅಚ್ಯುತ ಶೆಣೈ ವರದಿ ವಾಚಿಸಿದರು. ಸತೀಶ್ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸತೀಶ್ ಕುಂಡಂತಾಯ ವಂದಿಸಿದರು.