ಕಾಪು : ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಕುಲ್ ಬಳಿ ಕಾಲು ಸಂಕ ಇಲ್ಲದೆ ಗ್ರಾಮಸ್ಥರಿಗೆ ಸಮಸ್ಯೆ ಆಗಿದ್ದು, ಈ ಬಗ್ಗೆ ಪಂಚಾಯತ್ ಗೆ ಮನವಿ ನೀಡಿದ್ದು ಈ ಬಗ್ಗೆ ಜನಪ್ರತಿನಿಧಿಗಳು ತುರ್ತು ಗಮನ ಹರಿಸಬೇಕಾಗಿ ಸಮಾಜ ಸೇವಕ ಅಲ್ವಿನ್ ಪ್ರಕಾಶ್ ಡಿಸೋಜ, ಕೇಂಜ ಕುತ್ಯಾರು ಪ್ರಕಟಣೆಯಲ್ಲಿ ತಿಳಿಸಿರುವರು.