ಪಡುಕುತ್ಯಾರು : ಆನೆಗುಂದಿ ಶ್ರೀಗಳವರ ಜನ್ಮ ವರ್ಧಂತ್ಯುತ್ಸವ ; ವಿವಿಧ ಧಾರ್ಮಿಕ ಕಾರ್ಯಕ್ರಮ
Posted On:
02-08-2024 09:14AM
ಪಡುಕುತ್ಯಾರು : ಬದುಕಿನಲ್ಲಿ ಸಂತಸ ಕಾಣಲು ಹುಟ್ಟು ಸಾವಿನ ನಡುವಿನ ನಮ್ಮ ಜೀವನದ ಅವಧಿಯಲ್ಲಿ ಭಗವಂತನ ಅನುಗ್ರಹದೊಂದಿಗೆ ಸನ್ನಡತೆ, ಸತ್ಕಾರ್ಯ,ಉತ್ತಮ ನುಡಿಯ ಮೂಲಕ ಬದುಕಿನಲ್ಲಿ ಸ್ವರ್ಗವನ್ನು ಕಾಣಲು ಸಾಧ್ಯ. ನಮ್ಮಿಂದ ಇನ್ನೊಬ್ಬರ ಬದುಕಿನಲ್ಲಿ ಸಂತಸ ಮೂಡಿದರೆ ಅದುವೇ ಬದುಕಿನ ಅತ್ಯಂತ ಸುಂದರ ಸಂತಸದ ಕ್ಷಣಗಳು ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಹೇಳಿದರು.
ಅವರು ಪಡುಕುತ್ಯಾರಿನಲ್ಲಿ ಗುರುವಾರ ನಡೆದ ತಮ್ಮ 20ನೇ ಚಾತುರ್ಮಾಸ್ಯದ ಅಂಗವಾಗಿ ಜನ್ಮವರ್ಧಂತ್ಯುತ್ಸವ ಧರ್ಮ ಸಂಸತ್‌ನಲ್ಲಿ ಆಶೀರ್ವಚನ ನೀಡಿದರು.
ಜ್ಞಾನದ ಹರಿವು ಹರಿದಷ್ಟು ಸಮಾಜದ ಜನರಲ್ಲಿ ಅರಿವಿನ ಜಾಗೃತಿ ಹೆಚ್ಚುತ್ತದೆ. ಶಾಸ್ತ್ರರಹಿತವಾದ ಶಿಲ್ಪವು ಕೇವಲ ಕೂಲಿ ಕೆಲಸವಾಗುತ್ತದೆ ಶಾಸ್ತ್ರಸಹಿತವಾದ ಅಧ್ಯಯನದ ಮೂಲಕ ಮಾತ್ರವೇ ಅದು ಶಿಲ್ಪವಾಗುತ್ತದೆ ಅದರ ನಿರ್ಮಾತೃ ಶಿಲ್ಪಿ ಎನಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪಡುಕುತ್ಯಾರಿನ ಮಹಾಸಂಸಂಸ್ಥಾನದಲ್ಲಿ ಶಾಸ್ತ್ರ ಸಹಿತವಾದ ಶಿಲ್ಪ ಕಲೆಯ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಪಂಚ ಶಿಲ್ಪದ, ವಾಸ್ತು ಶಿಲ್ಪವನ್ನು ಕಲಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ನುಡಿದರು.
ವಿಶೇಷ ಉಪನ್ಯಾಸ ನೀಡಿದ ಮಹಾಸಂಸ್ಥಾನ ಆಸ್ಥಾನ ವಿದ್ವಾಂಸ ಪಂಜ ಭಾಸ್ಕರ ಭಟ್ ಅವರು ದೇಶ, ದೇಶದ ಭವಿಷ್ಯ, ಜನತೆ ಮತ್ತು ಸಮಾಜದ ಹಿತಕ್ಕಾಗಿ ನಿರಂತರ ಕ್ರಿಯಾಶೀಲ ಚಟುವಟಿಕೆ ನಿರತರಾಗಿರುವ ಕಾಳಹಸ್ತೇಂದ್ರ ಶ್ರೀಗಳು ಸಮಾಜದ ಅಭ್ಯದಯಕ್ಕಾಗಿ ನಡೆಸುತ್ತಿರುವ ಸೇವಾ ಕಾರ್ಯಗಳು ಸರ್ವರಿಗೂ ಅನುಕರಣೀಯವಾಗುವಂತದ್ದಾಗಿದೆ. ಅಂತಹ ಯತಿಗಳನ್ನು ಗೌವಿಸಬೇಕಾಗಿರುವುದು ನಮ್ಮ ಕರ್ತವ್ಯ ಅವರ ವರ್ದಂತಿಯು ನಮ್ಮ ವರ್ದಂತಿಯಂತೆ ಆಚರಿಸಬೇಕು ವಿಶ್ವಕರ್ಮ ಸಮಾಜದ ಜನರು ಶಿಲ್ಪ ಮತ್ತು ಬ್ರಾಹ್ಮಣ್ಯ ಎರಡು ಅತ್ಯಂತ ಪ್ರಮುಖವಾದುವು. ಕಾಷ್ಠ ಶಿಲ್ಪ ಸಹಿತವಾಗಿ ತಮ್ಮ ಕುಲಕಸುಬುಗಳನ್ನು ಉಳಿಸಿ, ಬೆಳೆಸಿ ಕೊಂಡು ಬರುವುದರ ಜತೆಗೆ ಸಮಾಜಕ್ಕಾಗಿ, ಸಮಾಜದ ಹಿತಕ್ಕಾಗಿಯೂ ಯೋಚನೆ, ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಶ್ರೀಗಳ ಸಂಕಲ್ಪದ ಸಾಕಾರಕ್ಕೆ ಕೈ ಜೋಡಿಸಬೇಕು ಎಂದರು.
ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ ಮಾತನಾಡಿ, ನದಿಗಳು ಹರಿದು ಸಮುದ್ರವನ್ನು ಸೇರುವಂತೆ ನಾವೆಲ್ಲರೂ ನಡೆಸುವ ಧಾರ್ಮಿಕ ಕ್ರೀಯಾ ಕರ್ಮಗಳು ನಾಂ ರೂಪವನ್ನು ಬಿಟ್ಟು ಗುರು ಅನುಗ್ರಹದಿಂದ ಭಗವಂತನಲ್ಲಿಯೇ ಸೇರುತ್ತದೆ. ಒಂದೇ ಉದ್ದೇಶದಿಂದ, ಒಂದೇ ಮನಸ್ಸಿನಿಂದ ಎಲ್ಲರೂ ಒಂದು ಕಡೆ ಸೇರಿಕೊಂಡು ನಡೆಸುವ ಸಂಸತ್ತು ಆನೆಗುಂದಿಶ್ರೀಗಳವರ ಸಾನಿಧ್ಯದಿಂದ ಧರ್ಮ ಸಂಸತ್ತಾಗಿ ಜಾಗೃತಿಯನ್ನು ಮೂಡಿಸುತ್ತಿದೆ. ಸನ್ಯಾಸ ಎನ್ನುವುದು ಶಿಷ್ಟಾಚಾರ ಪಾಲನೆಯ ಸಂಕೇತವಾಗಿದೆ. ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬಂದು, ಧರ್ಮ ರಕ್ಷಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸನ್ಯಾಸವನ್ನು ಸರ್ವರೂ ಗೌರವಿಸುತ್ತಾರೆ ಎಂದು ಹೇಳಿದರು.
ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ದಿನೇಶ್ ಆಚಾರ್ಯ ಪಡುಬಿದ್ರಿ ಆನೆಗುಂದಿ, ಮುರಹರಿ ಆಚಾರ್ಯ ಉಡುಪಿ ಕಟಪಾಡಿ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಚಂದ್ರಯ್ಯ ಆಚಾರ್ಯ ಕಳಿ ಉಪ್ರಳ್ಳಿ, ಗಜಾನನ ಎನ್ ಆಚಾರ್ಯ ನೀರಕಂಠ ಭಟ್ಕಳ, ಕೆ. ಎಂ. ಗಂಗಾಧರ ಆಚಾರ್ಯ ಕೊಂಡೆವೂರು ಬಂಗ್ರಮಂಜೇಶ್ವರ, ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು ಮಧೂರು, ಸಿ.ಎ ಶ್ರೀಧರ ಆಚಾರ್ಯ ಪನ್ವೇಲ್, ಜಗದೀಶ್ ಆಚಾರ್ಯ ಪಡುಪಣಂಬೂರು, ಶಂಕರ ಬಲವಂತರಾವ್ ಅಥಣಿ, ಪುರೋಹಿತ್ ಜಯಕರ ಆಚಾರ್ಯ ಮೂಡುಬಿದಿರೆ, ಜನಾರ್ಧನ ಆಚಾರ್ಯ ಅರಿಕ್ಕಾಡಿ, ಮೋಹನ್ ಕುಮಾರ್ ಬೆಳ್ಳೂರು, ಗಣೇಶ್ ಆಚಾರ್ಯ ಕೆಮ್ಮಣ್ಣು, ದಿನೇಶ್ ಆಚಾರ್ಯ ಕಿನ್ನಿಗೋಳಿ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ವಿದ್ವಾನ್ ಬ್ರಹ್ಮಶ್ರೀ ಕೇಶವ ಶರ್ಮಾ ಇರುವೈಲು ಉಪಸ್ಥಿತರಿದ್ದರು.
ಐ ಲೋಲಾಕ್ಷ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರ್ ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ವಂದಿಸಿದರು. ಗೀತಾಚಂದ್ರ ಆಚಾರ್ಯ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.
ಶ್ರೀಗಳ ಜನ್ಮವರ್ಧಂತಿ ಅಂಗವಾಗಿ ಶ್ರೀ ಗಣೇಶ ಅಥರ್ವಶಿರ್ಷ ಹೋಮ, ಪೂರ್ಣಮಾನ ನವಗ್ರಹ ಹೋಮ, ಶತರುದ್ರ ಯಾಗ, ಮಹಾಮೃತ್ಯುಂಜಯ ಹೋಮ, ಶ್ರೀ ಧನ್ವಂತರೀ ಹೋಮ, ಶ್ರೀ ಮಹಾ ಸರಸ್ವತೀ ಯಜ್ಞ ವೈದಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಶಿಷ್ಯವೃಂದದವರಿಂದ ಜಗದ್ಗುರುಗಳವರ ತುಲಾಭಾರ ಸೇವೆ ಗುರುಪಾದುಕಾ ಪೂಜೆ ನೆರವೇರಿತು