ಪಡುಬಿದ್ರಿ : ಪ್ರೀತಿ , ವಾತ್ಸಲ್ಯದ ಬದುಕು ಕಟ್ಟಿ ಕೊಟ್ಟ ತಂದೆ ತಾಯಿಯನ್ನು ಅನಾಥ ಅಶ್ರಮಕ್ಕೆ ದೂಡುವ ಇಂದಿನ ಜನತೆಯ ಮನಸ್ಥಿತಿ ಖೇದಕರವಾಗಿದೆ. ಜೀವನದ ಪಾಠವನ್ನು ಕಲಿಸಿದ ಹಿರಿಯರು ತನ್ನ ಬದುಕಿನ ಕೊನೆ ಕಾಲದಲ್ಲಿ ಅನಾಥ ಅಶ್ರಮದಲ್ಲಿ ಬದುಕುವಂತಾದುದು ತುಂಬಾ ಬೇಸರದ ಸಂಗತಿ. ಬಾಲ್ಯದಲ್ಲಿಯೇ ಮಾನವೀಯತೆ ಮತ್ತು ಮನುಷ್ಯತ್ವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆಯ ಬದುಕನ್ನು ಕಾಣುತ್ತದೆ ಎಂದು ಪಡುಬಿದ್ರಿಯ ಬಾಲಪ್ಪ ಗುರಿಕಾರ ನಟರಾಜ್ ಪಿ.ಎಸ್ ಹೇಳಿದರು.
ಅವರು ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಹೊಸ ಬೆಳಕು ಸೇವಾ ಟ್ರಸ್ಟ್ ವತಿಯಿಂದ ನಡೆಸುವಂತಹ 187 ಜನ ಅನಾಥ ಹಿರಿಯರಿರುವ ಹೊಸ ಬೆಳಕು ಆಶ್ರಮಕ್ಕೆ ಭೇಟಿ ನೀಡಿ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿ, ಬೆಡ್ ಶಿಟ್ , ದಿಂಬು ಹಾಗು ವೀಲ್ ಚಯರ್ ಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಮುರುಡಿ ಗುರಿಕಾರ ಜಗದೀಶ್ ರಾವ್, ನಾರಾಯಣ್ ರಾವ್ ಮುದರಂಗಡಿ, ಮಲ್ಪೆ ಶಿಫ್ ಯಾರ್ಡ ಇಂಜಿನಿಯರ್ ಶಶಿಕಾಂತ್ ಕೋಟ್ಯಾನ್, ಓಂಕಾರ್ ಕಾಸ್ಟೂಮ್ ಪಾಲುದಾರ ಅರುಣ್ ಕುಮಾರ್, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಪೂರ್ವಾಧ್ಯಕ್ಷರಾದ ಗೀತಾ ಅರುಣ್, ಸಂತೋಷ್ ಪಡುಬಿದ್ರಿ, ನಿಕಟ ಪೂರ್ವ ಕಾರ್ಯದರ್ಶಿ ಪವನ್ ಸಾಲ್ಯಾನ್ , ದೀಕ್ಷಿತ್ ಅಮೀನ್, ಜಯ ಕುಂದರ್, ನಾಗಮ್ಮ ಹಿರಿಯಡ್ಕ, ಹೊಸ ಬೆಳಕು ಸಂಸ್ಥೆಯ ಮೇಲ್ವಿಚಾರಕಿ ತನುಲಾ ಉಪಸ್ಥಿತರಿದ್ದರು.