ಪಡುಬಿದ್ರಿ : ಕಡಲ ಕೊರೆತದಿಂದಾಗಿ ರಸ್ತೆಯ ಸಂಪರ್ಕವನ್ನು ಕಳೆದುಕೊಂಡಿದ್ದ ಬ್ಲೂ ಫ್ಲಾಗ್ ಬೀಚ್ ಗೆ ಹೋಗುವ ಮಾರ್ಗದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು ಆಗಸ್ಟ್ 5, ಸೋಮವಾರದಿಂದ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಲಾಗಿದೆ.
ಕಾಪು ಕ್ಷೇತ್ರದ ಶಾಸಕರು ಹಾಗೂ ಬಂದರು, ಮೀನುಗಾರಿಕಾ ಸಚಿವರ ಆದೇಶದಂತೆ ಕೇವಲ ಐದು ದಿನದ ಅವಧಿಯಲ್ಲಿ ರಸ್ತೆ ದುರಸ್ತಿ ಕಾರ್ಯವು ಪೂರ್ಣಗೊಂಡಿದೆ ಎಂದು ಬ್ಲೂ ಫ್ಲಾಗ್ ಬೀಚ್ ಮ್ಯಾನೇಜರ್ ವಿಜಯ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.