ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತೆಂಕ ಎರ್ಮಾಳು ಅಟೋ ರಿಕ್ಷಾ ನಿಲ್ದಾಣಕ್ಕೆ ಸಿಮೆಂಟ್ ಬೆಂಚ್‌ಗಳ ಕೊಡುಗೆ

Posted On: 04-08-2024 04:57PM

ಎರ್ಮಾಳು : ತೆಂಕ ಎರ್ಮಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಟೋ ರಿಕ್ಷಾ ನಿಲ್ದಾಣಕ್ಕೆ ಬಹುದಿನಗಳ ಬೇಡಿಯ ಸಿಮೆಂಟ್ ಬೆಂಚ್‌ಗಳನ್ನು ದಾನಿಯೋರ್ವರು ನೀಡಿದ್ದು, ಈ ಸಂದರ್ಭ ಅವರನ್ನು ಎರ್ಮಾಳು ಅಟೋ ಯೂನಿಯನ್ ವತಿಯಿಂದ ಗೌರವಿಸಲಾಯಿತು.

ಪೂಂದಾಡು ಕುಟ್ಟಿ ಪೂಜಾರಿಯವರ ಪುತ್ರ ದಿನೇಶ್ ಪೂಜಾರಿಯವರು ಸುಮಾರು ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ನಾಲ್ಕು ಸಿಮೆಂಟ್ ಬೆಂಚ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಈ ಸಂದರ್ಭ ಎರ್ಮಾಳು ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳ್, ಉಪಾಧ್ಯಕ್ಷ ರಾಜು ಪೂಜಾರಿ, ಕಾರ್ಯದರ್ಶಿ ಭರತ್ ಶೆಟ್ಟಿಗಾರ್, ಕೋಶಾಧಿಕಾರಿ ನದೀಮ್, ತೆಂಕ ಗ್ರಾ.ಪಂ. ಸದಸ್ಯರಾದ ಸಂತೋಷ್, ಮನೋಜ್ ಹಾಗೂ ಅಟೋ ಯೂನಿಯನ್ ಸದಸ್ಯರು ಉಪಸ್ಥಿತರಿದ್ದರು.