ಪಡುಬಿದ್ರಿ : ಕೃಷಿಯು ಮಹತ್ವದ ವೃತ್ತಿಯಾಗಿದ್ದು, ಕಾಂಗ್ರೆಸ್ ಸರಕಾರ ಕೃಷಿಗೆ ಒತ್ತು ನೀಡಿ ಕೃಷಿಕರಿಗೆ ಮಹತ್ವ ನೀಡಿದೆ. ಉಳುವವನೇ ಹೊಲೆದೊಡೆಯ ಕಾನೂನು ಕಾಂಗ್ರೆಸ್ ನ ಮಹತ್ವದ ನಡೆಯಾಗಿತ್ತು. ನನ್ನದೆಂಬುದು ಏನಿಲ್ಲ ಎಂದಾಗ ಜನರಿಗೆ ನೆರವಾದದ್ದು ಕಾಂಗ್ರೆಸ್. ಇಂದು ಸರಕಾರ ತೆರಿಗೆಯ ಮೂಲಕ ಬಡವರ ರಕ್ತ ಹೀರುತ್ತಿದೆ. ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಿದಾಗ ಮನೆ ಬೆಳಗಲು ಸಾಧ್ಯ ಅದನ್ನು ಪ್ರಸ್ತುತ ರಾಜ್ಯ ಸರಕಾರ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಗ್ರಾಮೀಣ ಕಾಂಗ್ರೆಸ್ ಸಮಿತಿ, ಮಹಿಳಾ ಮತ್ತು ಯುವ ಕಾಂಗ್ರೆಸ್ ಪಡುಬಿದ್ರಿ ಇವರ ಆಶ್ರಯದಲ್ಲಿ ಪಡುಬಿದ್ರಿ ಸುಜಾತ ಆಡಿಟೋರಿಯಂ ಸಭಾಂಗಣದಲ್ಲಿ ಕಾಂಗ್ರೆಸ್ ಹಿರಿಯ ಮುತ್ಸದ್ಧಿ ದಿ| ವೈ.ಹಿರಿಯಣ್ಣ ಪಡುಬಿದ್ರಿ ಸಭಾ ವೇದಿಕೆಯಲ್ಲಿ ಜರಗಿದ ಆಟಿದ ತಮ್ಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಪದ ಚಿಂತಕ ವಾಮನ ಕೋಟ್ಯಾನ್ ನಡಿಕುದ್ರು ಮಾತನಾಡಿ ಹಿರಿಯರ ನೆನಪು ನಮ್ಮಲ್ಲಿರಬೇಕು. ಬಡತನದಲ್ಲೂ ಆಟಿಯ ಕಾಲದಲ್ಲಿ ಧಣಿಗಳನ್ನು ತೃಪ್ತಿಗೊಳಿಸಿ ಕೂಡು ಕುಟುಂಬದ ಹಸಿವನ್ನು ನುಂಗಿ ಬದುಕಿದ ಸಾರ್ಥಕತೆಯ ಸಮಯವಿದು.
ರಾಸಾಯನಿಕಯುಕ್ತ ಆಹಾರದಿಂದ ನಮ್ಮ ಜೀವನ ಮಟ್ಟ ಕುಸಿಯುತ್ತಿದೆ. ಆಟಿಯ ಖಾದ್ಯಗಳ ಸೇವನೆಯಿಂದ ನಮ್ಮ ರೋಗ ರುಜಿನ ನಿರ್ಮೂಲನೆ ಸಾಧ್ಯ ಎಂದರು.
ಸಾಧಕರಿಗೆ ಸನ್ಮಾನ : ಭಾರತೀಯ ಸೇನೆಯ ಗಡಿಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೊಯುದ್ದೀನ್ ಪಡುಬಿದ್ರಿ, ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪತ್ರಕರ್ತ ಹರೀಶ್ ಹೆಜಮಾಡಿ, ಚಲನಚಿತ್ರ, ರಂಗಭೂಮಿ ಕಲಾವಿದ ಶಶಿಧರ್ ಗುಜರನ್, ಸಾಮಾಜಿಕ ಕ್ಷೇತ್ರದಲ್ಲಿ ದಿನೇಶ್ ಕಂಚಿನಡ್ಕ, ಪೌರಕಾರ್ಮಿಕರಾದ ಪ್ರಸಾದ್ ಕಂಚಿನಡ್ಕ, ಶಶಿಕುಮಾರ್ ಬೆಳಪು ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕಾಂಗ್ರೆಸ್ ಹಿರಿಯ ಮುತ್ಸದ್ಧಿ ದಿ| ವೈ.ಹಿರಿಯಣ್ಣರವರ ಪುತ್ರರಾದ ವೈ ಸುಧೀರ್, ವೈ ಸುಕುಮಾರ್ ರನ್ನು ಗೌರವಿಸಲಾಯಿತು.
ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ ಶೆಟ್ಟಿ ಮಾತನಾಡಿದರು.
ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಎಂ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ (ಉತ್ತರ) ಸಂತೋಷ್ ಕುಮಾರ್ ಪಕ್ಕಾಲು, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಎಂ ಪೂಜಾರಿ, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ ಶೆಟ್ಟಿ, ಕೆಎಂಎಫ್ ಮಂಗಳೂರು ನಿರ್ದೇಶಕ ದಿವಾಕರ ಶೆಟ್ಟಿ, ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ ಸುಕುಮಾರ್, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಪ್ರಧಾನ ಕಾರ್ಯದರ್ಶಿ ನವೀನ್ ಎನ್ ಶೆಟ್ಟಿ, ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಶೀನ ಪೂಜಾರಿ, ಸಮಾಜ ಸೇವಕಿ ಆಶಾ ಸಂದೀಪ್, ಮೀನುಗಾರರ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ ಅಮೀನ್, ಕಾಪು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವಿಭಾಗ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳು, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೇನ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಇಂಟೆಕ್ ಅಧ್ಯಕ್ಷ ಗಣೇಶ್ ಕೋಟ್ಯಾನ್, ದಲಿತ ಮುಖಂಡ ಶೇಖರ ಹೆಜಮಾಡಿ, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷೆ ತಸ್ರೀನ್ ಅರ, ಪಡುಬಿದ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಚರಿತ ಲಕ್ಷ್ಮಣ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ಎಸ್ ಆಚಾರ್ಯ, ಅಶೋಕ್ ಸಾಲ್ಯಾನ್, ಜ್ಯೋತಿ ಮೆನನ್, ನಿಯಾಝ್, ಸುಧಾಕರ್, ಕೀರ್ತಿ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಜೇಶ್ ಶೇರಿಗಾರ್ ನಿರೂಪಿಸಿ, ವಂದಿಸಿದರು.
ಪ್ರತಿಷ್ಠಿತ ಡ್ಯಾಝ್ಲ್ ಸ್ಟುಡಿಯೋ ನೃತ್ಯ ತಂಡದಿಂದ ನೃತ್ಯೋತ್ಸವ ವೈಭವ ಜೊತೆಗೆ ಆಟಿದ ತಮ್ಮನ ಸಾಮೂಹಿಕ ಭೋಜನ ನಡೆಯಿತು.