ಇನ್ನಂಜೆ : ಯುವಕ ಮಂಡಲದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವು ಇನ್ನಂಜೆಯಲ್ಲಿ ಜರಗಿತು.
ಯುವಕ ಮಂಡಲದ ನಿರ್ಗಮನ ಅಧ್ಯಕ್ಷ ದಿವೇಶ್ ಶೆಟ್ಟಿಯವರು ನಿಯೋಜಿತ ಅಧ್ಯಕ್ಷ ಮಧುಸೂಧನ್ ಆಚಾರ್ಯರವರಿಗೆ, ನಿರ್ಗಮನ ಕಾರ್ಯದರ್ಶಿ ಹರೀಶ್ ಪೂಜಾರಿಯವರು ನಿಯೋಜಿತ ಕಾರ್ಯದರ್ಶಿಯಾದ ಪವನ್ ಕುಮಾರ್ ರವರಿಗೆ ಅಧಿಕಾರ ಹಸ್ತಾಂತರಿಸಿದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ನವೀನ್ ಶೆಟ್ಟಿˌ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಪ್ರೈಮರಿ ದೈಹಿಕ ಶಿಕ್ಷಣ ಶಿಕ್ಷಕರಾದ ರವಿ, ಪಂಚಾಯತ್ ಸದಸ್ಯರುಗಳು, ನೂತನವಾಗಿ ಆಯ್ಕೆಯಾದ ಯುವಕ ಮಂಡಲದ 18 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.