ಪಡುಬಿದ್ರಿ : ಇಲ್ಲಿನ ಮುಂಡಾಲ ಯುವ ವೇದಿಕೆಯ ಸಹಯೋಗದೊಂದಿಗೆ ಪಡುಬಿದ್ರಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವೇದಿಕೆಯ ಅಧ್ಯಕ್ಷ ಶಿವಪ್ಪ ಸಾಲ್ಯಾನ್ ರವರು ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.
ಸ್ವಾತಂತ್ರ್ಯೊತ್ಸವದ ಬಗ್ಗೆ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಬಸವರಾಜ್ ಮತ್ತು ವೇದಿಕೆಯ ಪರವಾಗಿ ಸಂತೋಷ್ ನಂಬಿಯಾರ್ ಶುಭಾಶಯಗಳನ್ನು ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ಸುರೇಶ್ ಪಡುಬಿದ್ರಿ, ಪ್ರಸನ್ನ ಪಡುಬಿದ್ರಿ, ಮಂಜುನಾಥ್ ಎರ್ಮಾಳ್, ಪ್ರವೀಣ್ ಎರ್ಮಾಳ್, ಶ್ರೀಧರ್ ಪಲಿಮಾರ್, ನಿತಿನ್ ಬೊಗ್ಗರಿಲಚ್ಚಿಲ್, ಬಾಲಕೃಷ್ಣ, ಸೊಮಯ್ಯ ಎರ್ಮಾಳು, ಪ್ರಶಾಂತ್ ಪಾದೆಬೆಟ್ಟು, ರಾಜೇಂದ್ರ ಎರ್ಮಾಳು, ಮಹಿಳಾ ಅಧ್ಯಕ್ಷೆ ಸವಿತಾ, ಭಾರತಿ, ಶಾಲಿನಿ, ಸುನೀತಾ, ದೀಪಾ ನಿತಿನ್ ಮೊದಲಾದವರು ಉಪಸ್ಥಿತರಿದ್ದರು.