ಹೆಜಮಾಡಿ : ನಾನು ಭಾರತೀಯ ಎಂಬ ಹೆಮ್ಮೆಯ ಭಾವನೆ ಬೆಳೆಸಿಕೂಳ್ಳುವುದರೊಂದಿಗೆ ದೇಶ ರಕ್ಷಣೆಯ ಕರ್ತವ್ಯವನ್ನು ಪ್ರತಿಯೊಬ್ಬರೂ ಹೊತ್ತು ಕೊಳ್ಳಬೇಕು. ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿ ಯಲ್ಲಿ ಯುವಕರ ಪಾತ್ರ ಬಹಳ ಮುಖ್ಯ. ಏಕೆಂದರೆ ಯಾವುದೇ ರಾಷ್ಟ್ರದ ಅಭಿವೃದ್ಧಿ ಭವಿಷ್ಯದ ಪೀಳಿಗೆ ಯಲ್ಲಿದೆ. ಯುವಕರಿಗೆ ಜಗತ್ತನ್ನು ಬದಲಿಸುವ ಶಕ್ತಿ ಇದೆ. ನಾವೆಲ್ಲರೂ ದೇಶದ ಸತ್ಪ್ರಜೆಯಾಗಿ ಬಾಳ ಬೇಕು ಎಂದು ಭಾರತೀಯ ವಾಯುಪಡೆ ಸೇನೆಯ ನಿವೃತ್ತ ಕಾರ್ಪೋರಲ್ ಪುರುಷೋತ್ತಮ್ ಗುರಿಕಾರ ಹೆಜಮಾಡಿ ಇವರು 78ನೇ ಸ್ವಾತಂತ್ರೋತ್ಸವದ ದ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ನಡೆದ ಕ್ರೀಡಾ ಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದುರ್ಗಾ ಫ್ರೆಂಡ್ಸ್ ನ ಅಧ್ಯಕ್ಷರಾದ ಅನಿಲ್ ಎಚ್ ಕುಂದರ್, ಮಾಜಿ ಅಧ್ಯಕ್ಷರು ಪ್ರಭಾಕರ್ ಕರ್ಕೇರ, ಸಂಚಾಲಕರಾದ ಎಚ್ ರವಿ ಕುಂದರ್, ಗೌರವ ಸಲಹೆಗಾರ ದೇವದಾಸ್ ಸಾಲ್ಯಾನ್, ಉಪಾಧ್ಯಕ್ಷರಾದ ಹಿತೇಶ್ ಮೆಂಡನ್, ಹೆಜಮಾಡಿ ಗ್ರಾ.ಪಂ.ಸದಸ್ಯೆ ನಿರ್ಮಲಾ ಕೆ, ಖಡ್ಗೇಶ್ವರಿ ಭಜನಾ ಮಂದಿರದ ಅಧ್ಯಕ್ಷರಾದ ಗಣೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಕೃಷ್ಣ ಪೂಜಾರಿ, ಹೆಜಮಾಡಿ ದೇವಾಡಿಗರ ಸಂಘದ ಅಧ್ಯಕ್ಷರಾದ ಹರೀಶ್ ದೇವಾಡಿಗ, ಪಡುಬಿದ್ರಿ ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ ಉಪಸ್ಥಿತರಿದ್ದರು.
ದುರ್ಗಾ ಫ್ರೆಂಡ್ಸ್ ನ ಕಾರ್ಯದರ್ಶಿ ಕೀರ್ತನ್ ಎಸ್ ಸಾಲ್ಯಾನ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.