ಪಡುಬಿದ್ರಿ : ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ನೆರವೇರಿಸಿದರು.
ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕರುಣಾಕರ್ ಎಮ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕೆ ಪಿಸಿ ಸಿ ಸಂಯೋಜಕರಾದ ನವೀನ್ ಚಂದ್ರ ಜೆ ಶೆಟ್ಟಿ, ವೈ ಸುಕುಮಾರ್, ನವೀನ್ ಎನ್ ಶೆಟ್ಟಿ, ಅಬ್ದುಲ್ ರೆಹಮಾನ್, ರಮೀಜ್ ಹುಸೇನ್, ನಿಯಾಝ್, ಕೀರ್ತಿ ಕುಮಾರ್, ದಿನೇಶ್ ಕಂಚಿನಡ್ಕ, ಸಂಜೀವಿ ಪೂಜಾರಿ, ಲಿಯಾತತ್, ಮುನ್ನ, ಜ್ಯೋತಿ ಮೆನನ್, ವೈ ಸುಧೀರ್ ಕುಮಾರ್, ಸುಚರಿತ,, ಸುನಂದಾ
ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಧಾಕರ್ ಕೆ ನಿರೂಪಿಸಿ, ವಂದಿಸಿದರು.