ಎರ್ಮಾಳು : ಸ್ವಾತಂತ್ರ್ಯ ಹೋರಾಟಗಾರರ ಮನೆಯ ನಾಮಫಲಕ ಅನಾವರಣ
Posted On:
16-08-2024 10:53PM
ಎರ್ಮಾಳು : ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರ ಎರ್ಮಾಳು ರಾಮಪ್ಪ ಜಿ. ಸಾಲ್ಯಾನ್‌ರವರ ಮನೆಯಲ್ಲಿ ವಿವಿಧ ಸಂಘಟನೆಗಳ ಆಯೋಜನೆಯಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ ಗುರುವಾರ ಜರಗಿತು.
ಪತ್ರಕರ್ತ ಚೇತನ್ ಶೆಟ್ಟಿ ರಾಷ್ಟ್ರಧ್ವಜಕ್ಕೆ ಪುಷ್ಪಾಚ೯ನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾನಪದ ವಿದ್ವಾಂಸ ಡಾ. ವೈ .ಎನ್ . ಶೆಟ್ಟಿ ನಾಮಫಲಕ ಅನಾವರಣ ಮಾಡಿದರು.
ಸ್ವರಾಜ್ಯ 75, ಪೂಣ೯ ಪ್ರಜ್ಞ ಪದವಿ ಪೂವ೯ ಕಾಲೇಜು ಅದಮಾರು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹಸ್ತ ಚಿತ್ರ ಫೌಂಡೇಶನ್ ವಕ್ವಾಡಿ, ಜನಸೇವಾ ಟ್ರಸ್ಟ್ ಮೂಡು ಗಿಳಿಯಾರು, ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕ, ಎರ್ಮಾಳು ಬಡಾ ಮೊಗವೀರ ಸಭಾ ಸಂಘಟನೆಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯರ ಕೊಡುಗೆಯೊಂದಿಗೆ ಎಮಾ೯ಳು ರಾಮಪ್ಪ ಜಿ ಸಾಲ್ಯಾನ್ ರವರ ಸ್ವಾತಂತ್ರ್ಯಹೋರಾಟದ ವಿಚಾರದ ಕುರಿತು ಕು. ಕವಿತಾ ಆಚಾಯ೯ ಮುದೂರು ಉಪನ್ಯಾಸಗೈದರು.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ, ಅದಮಾರು ಕಾಲೇಜು ಪ್ರಾಂಶುಪಾಲರಾದ ಸಂಜೀವ ನಾಯ್ಕ, ಉಪನ್ಯಾಸಕ ಡಾ. ಜಯಶಂಕರ ಕಂಗಣ್ಣಾರು, ಮೊಗವೀರ ಮುಖಂಡ ಲಕ್ಷ್ಮಣ ಸುವಣ೯, ಶಾರದಾ ಎರ್ಮಾಳು, ಸ್ವರಾಜ್ಯ 75 ಸಂಚಾಲಕ ಪ್ರದೀಪ್ ಕುಮಾರ್ ಬಸ್ರೂರು ಮಾತನಾಡಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್ ವಹಿಸಿದ್ದರು.
ಕಾಯ೯ಕ್ರಮದಲ್ಲಿ ವಿಧ್ಯಾಥಿ೯ಗಳು, ಹೋರಾಟಗಾರ ಎರ್ಮಾಳು ರಾಮಪ್ಪ ಜಿ. ಸಾಲ್ಯಾನ್ ಕುಟುಂಬಸ್ಥರು, ಉಪನ್ಯಾಸಕ ದೇವಿಪ್ರಸಾದ್ ಬೆಳ್ಳಿಬೆಟ್ಟು, ಕೇಶವ ಮೊಯಿಲಿ, ಶಿಕ್ಷಕ ಬಾಬುರಾಯ ಆಚಾರ್ಯ, ಬಡಾ ಗ್ರಾಮ ಪಂಚಾಯತ್ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಮನೀಷ್ ಸ್ವಾಗತಿಸಿದರು. ಕು. ಪ್ರೀಶ ನಿರೂಪಿಸಿದರು. ಕು. ಹಷಿ೯ತಾ ವಂದಿಸಿದರು.