ಕಾಪು : ಸಯ್ಯದ್ ಫಝಲ್ ಕೊಯಮ್ಮ ತಂಗಲ್ ಅಲ್ ಬುಕಾರಿ ಕೂರತ್ ತಂಗಲ್ ರವರ ಕುರ್ರತುಸ್ಸಾದತ್ ಬದುಕು ಮತ್ತು ಬೋಧನೆಗಳ ಇಣುಕು ನೋಟ ಎಂಬ ಪುಸ್ತಕ ಬಿಡುಗಡೆಯನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಾಮ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ಕುರಾ ತಂಗಲ್ ರವರ ಆತ್ಮೀಯರಾದ ಹೆಜಮಾಡಿ ಗುಲಾಮ್ ಮೊಹಮ್ಮದ್ ರವರಿಗೆ ಪ್ರಥಮ ಪುಸ್ತಕ ನೀಡುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ, ಕರ್ನಾಟಕ ವಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸಹದಿ, ಅಸ್ಸಯ್ಯಿದ್ ಅಬ್ದುರಹ್ಮನ್ ಮಸ್ ಊದ್ ತಂಗಲ್ ಕೂರತ್ ಮತ್ತಿತರರು ಉಪಸ್ಥಿತರಿದ್ದರು.