ಹೆಜಮಾಡಿ : ಅಮಾಸೆ ಕರಿಯದಲ್ಲಿ ಸಮುದ್ರ ಪೂಜೆ
Posted On:
19-08-2024 09:22PM
ಹೆಜಮಾಡಿ : ಏಳೂರು ಮೊಗವೀರ ಮಹಾಸಭಾ ವತಿಯಿಂದ ಹೆಜಮಾಡಿ ಮೊಗವೀರ ಸಭಾದ ಆಯೋಜನೆಯಲ್ಲಿ ಸೋಮವಾರ ಹೆಜಮಾಡಿಯ ಅಮಾಸೆ ಕರಿಯದಲ್ಲಿ ಸಮುದ್ರಕ್ಕೆ ಪೂಜೆ ಸಲ್ಲಿಸಿ ಹಾಲು, ಸೀಯಾಳ, ತೆಂಗಿನಕಾಯಿಯನ್ನು ಸಮರ್ಪಣೆ ಮಾಡಲಾಯಿತು.
ಏಳು ಗ್ರಾಮಗಳ ಮೊಗವೀರ ಸಭಾದ ವತಿಯಿಂದ ಹೆಜಮಾಡಿಯ ವೀರ ಮಾರುತಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಭಜನೆಯ ಮೂಲಕ ಹೂವು, ಹಣ್ಣು, ಹಾಲನ್ನು ಹೆಜಮಾಡಿಯ ಅಮಾಸೆ ಕರಿಯ ಸಮುದ್ರ ಕಿನಾರೆಗೆ ತರಲಾಯಿತು.
ಸಮುದ್ರ ಕಿನಾರೆಯಲ್ಲಿ ಸಾಮೂಹಿಕ ಪ್ರಾರ್ಥನೆ, ಪೂಜೆ ಸಲ್ಲಿಸಿದ ಬಳಿಕ ಸಮುದ್ರಕ್ಕೆ ಹೂ, ಹಣ್ಣು, ತೆಂಗಿನಕಾಯಿ ಹಾಗೂ ಹಾಲನ್ನು ಸಮರ್ಪಿಸಲಾಯಿತು.
ಈ ಸಂದರ್ಭ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಏಳೂರು ಮೊಗವೀರ ಮಹಾಸಭಾದ ಅಧ್ಯಕ್ಷ ದಿವಾಕರ ಹೆಜಮಾಡಿ, ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ, ಮಾಜಿ ಅಧ್ಯಕ್ಷರು ಗಳಾದ ಸದಾಶಿವ ಕೋಟ್ಯಾನ್, ವಿಜಯ ಕೋಟ್ಯಾನ್, ಎಚ್ ರವಿ ಕುಂದರ್, ಏಳು ಗ್ರಾಮಗಳ ಗುರಿಕಾರರು, ಅಧ್ಯಕ್ಷರು, ಸಮಿತಿ ಸದಸ್ಯರು, ಮಹಿಳಾ ಮಂಡಳಿಗಳ ಸದಸ್ಯೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.