ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಕಾಂಗ್ರೆಸ್ ಪಕ್ಷದ ವತಿಯಿಂದ ಕಂಚಿನಡ್ಕದಲ್ಲಿ ಬೃಹತ್ ಪ್ರತಿಭಟನೆ

Posted On: 21-08-2024 05:31PM

ಪಡುಬಿದ್ರಿ : ಪಡುಬಿದ್ರಿ - ಕಾರ್ಕಳ ರಸ್ತೆಯಲ್ಲಿ ಕಂಚಿನಡ್ಕ ಪ್ರದೇಶದಲ್ಲಿ ರಾಜ್ಯ ಸರಕಾರ ನಿರ್ಮಾಣ ಮಾಡಲು ಉದ್ದೇಶಿಸಿದ ಸುಂಕ ವಸೂಲಾತಿ ಕೇಂದ್ರದ ವಿರುದ್ಧ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಕಂಚಿನಡ್ಕದಲ್ಲಿ ಬೃಹತ್ ಪ್ರತಿಭಟನಾ ಸಭೆ ಜರಗಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪಡುಬಿದ್ರಿ-ಕಾರ್ಕಳ ರಸ್ತೆಯ ಟೋಲ್ ಗೇಟ್ ಬಿಜೆಪಿ ಸರಕಾರ ಇರುವಾಗ ರೂಪಿತವಾದ ಯೋಜನೆಯಾಗಿದೆ. ಬೆಳ್ಮಣ್ ಭಾಗದಲ್ಲಿಯ ಪ್ರತಿಭಟನೆ ನಂತರ ಕಂಚಿನಡ್ಕ ಪ್ರದೇಶದಲ್ಲಿ ಟೋಲ್ ಗೇಟ್ ಸ್ಥಾಪನೆಗೆ ಬಿಜೆಪಿ ಸರಕಾರವೇ ಕಾರಣವಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷದ ಯಾವ ಪಾತ್ರವೂ ಇಲ್ಲ. ಮೊದಲೇ ಟೋಲ್ ಆಗಬೇಕೆನ್ನುವ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣ ಮಾಡಿ, ಇದೀಗ ಟೋಲ್ ಗೇಟ್ ನಿರ್ಮಾಣಕ್ಕೂ ಮುಂದಾಗಿರುವುದು ಬಿಜೆಪಿ.

ಎನ್ಟಿಪಿಸಿ, ಕೊಜೆಂಟ್ರಿಕ್ಸ್ ಗಳನ್ನು ಪ್ರತಿಭಟನೆಯ ಮೂಲಕ ಒದ್ದೋಡಿಸಿ ಈ ಭಾಗದಲ್ಲಿ ಅನೇಕ ಪ್ರತಿಭಟನೆಗಳಾಗಿದೆ. ಯಾವುದೇ ಕಾರಣಕ್ಕೂ ಕಂಚಿನಡ್ಕದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ. ಉಡುಪಿ ಉಸ್ತುವಾರಿ ಸಚಿವರ ಜೊತೆಗೂಡಿ ನಮ್ಮ ನಿಯೋಗವು ಆಗಸ್ಟ್ 22ರಂದು ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿಯವರನ್ನು ಭೇಟಿ ಮಾಡಲಿದ್ದೇವೆ ಎಂದರು.

ಉಡುಪಿ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್‌ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಶೇಖರ ಹೆಜ್ಮಾಡಿ, ಡಾ. ದೇವೀಪ್ರಸಾದ್‌ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಉಡುಪಿ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್‌ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಶೇಖರ ಹೆಜ್ಮಾಡಿ, ಡಾ. ದೇವೀಪ್ರಸಾದ್‌ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭ ನವೀನ್ ಚಂದ್ರ ಸುವರ್ಣ, ಸಂತೋಷ್‌ ಕುಲಾಲ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್‌, ವೈ ಸುಕುಮಾರ್‌, ಕರುಣಾಕರ ಪೂಜಾರಿ ಪಡುಬಿದ್ರಿ, ನವೀನ್ ಚಂದ್ರ ಜೆ. ಶೆಟ್ಟಿ, ನವೀನ್‌ ಎನ್‌ ಶೆಟ್ಟಿ, ಹರೀಶ್ ಕಿಣಿ ಅಲೆವೂರು, ಶಿವಾಜಿ ಸುವರ್ಣ, ಶರ್ಪುದ್ದೀನ್ ಶೇಖ್, ರಮೀಜ್ ಹುಸೇನ್ ಪಡುಬಿದ್ರಿ, ನಿಯಾಜ್‌ ಹುಸೈನ್‌ ಮುದರಂಗಡಿ, ದೀಪಕ್‌ ಎರ್ಮಾಳು, ಗುಲಾಂ ಅಹ್ಮದ್‌, ಆಶಾ ಕಟಪಾಡಿ, ಸುಲೋಚನಾ ಬಂಗೇರಾ, ತಸ್ನೀನ್ ಅರಾ, ಜ್ಯೋತಿ ಮೆನನ್‌, ಮೊದಲಾದವರು ಉಪಸ್ಥಿತರಿದ್ದರು.