ಹೆಜಮಾಡಿ : ಕಣ್ಣಂಗಾರು ಜುಮಾ ಮಸೀದಿಯ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಹಮೀದ್ ಆಯ್ಕೆ
Posted On:
27-08-2024 06:41PM
ಹೆಜಮಾಡಿ : ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ವಕ್ಫ್ ಆಡಳಿತಕ್ಕೆ ಒಳಪಟ್ಟಿದ್ದ ಕಣ್ಣಂಗಾರು ಜಮಾತಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಹಾಜಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಜುಮಾ ಮಸೀದಿಯ ಆಡಳಿತ ಅಧಿಕಾರಿ ಕೆ.ಎಂ.ಕೆ. ಮಂಜನಾಡಿ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿತ ಸಭೆಯಲ್ಲಿ ಮುಂದಿನ ಮೂರು ವರ್ಷಗಳಿಗೆ ಈ ಆಯ್ಕೆ ನಡೆದಿದೆ.
ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಮಿಲಾಫ್, ಪ್ರಧಾನ ಕಾರ್ಯದರ್ಶಿ ಶೇಖ್ ಅಬ್ದುಲ್ಲಾ ಹಾಜಿ ಮಿನಾ, ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ, ಜತೆಕಾರ್ಯದರ್ಶಿ ಕೆ. ಅಬ್ದುಲ್ ಮಜೀದ್ ಮೆಹರಾಜ್ ಆಯ್ಕೆಯಾದರು.
ಸದಸ್ಯರಿಗಾಗಿ ನಡೆದ ಚುನಾವಣೆಗೆ 14 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂಪಡೆಯುವ ದಿನ ಕೋಟೆ ಶೇಖಬ್ಬ ಹಾಜಿ, ಮುಹಮ್ಮದ್ ಕಬೀರ್ ಮತ್ತು ಶಾಹುಲ್ ಹಮೀದ್ ನಾಮಪತ್ರ ಹಿಂಪಡೆದಿದ್ದರು. ಇದರಿಂದ ನಾಮಪತ್ರ ಸಲ್ಲಿಸಿದ್ದ ಅಬ್ದುಲ್ ರಹಿಮಾನ್ ಭಾವ, ಶೇಖ್ ಅಬ್ದುಲ್ಲಾ, ಅಬ್ದುಲ್ ಹಮೀದ್, ಕೆ. ಅಬ್ದುಲ್ ಮಜೀದ್, ಇಬ್ರಾಹಿಂ ಖಲೀಲ್, ಮುಹಮ್ಮದ್ ಕಬೀರ್, ಮುಹಮ್ಮದ್ ಸಿರಾಜ್, ಮೊಹಮ್ಮದ್ ಶರೀಫ್, ಅಬ್ದುಲ್ ಖಾದಿರಿ, ಅಬ್ದುಲ್ ಹಮೀದ್, ಮೊಹಮ್ಮದ್ ಇರ್ಷಾದ್ ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಚುನಾವಣಾ ಅಧಿಕಾರಿ ಕೆ.ಎಂ.ಕೆ. ಮಂಜನಾಡಿ ಘೋಷಿಸಿದ್ದರು.
ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ಮುತ್ತಲಿ, ಉಪಾಧ್ಯಕ್ಷ ಎಂ.ಎಸ್. ಅಬ್ದುಲ್ ರಝಾಕ್ ಹಾಜಿ, ಎಂ.ಪಿ.ಮೊಯಿದಿನಬ್ಬ, ಸದಸ್ಯರಾದ ಹಮೀದ್ ಮೂಳೂರು, ಮನ್ಸೂರ್, ಅಸೀಫ್ ಕಟಪಾಡಿ, ಅಬ್ದುಲ್ ರಹಿಮಾನ್, ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ನಾಝಿಯ ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಸಲಹಾ ಸಮಿತಿ ಸದಸ್ಯರಾದ ಹನೀಫ್, ಶಫಿ ಹಾಜಿ, ಸೈಯ್ಯದ್, ಆಸೀಫ್ ಉಪಸ್ಥಿತರಿದ್ದರು. ಮಸೀದಿ ಮುರ‍್ರಿಸ್ ಅಶ್ರಫ್ ಸಖಾಫಿ ದುವಾ ನೆರವೇರಿಸಿದರು.