ಕಾಪು : ಸಮಾಜ ಸೇವೆಯನ್ನು ಪರಿಗಣಿಸಿ ಕಾಪುವಿನ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರಿಗೆ ಭಾನುವಾರ ಚೆನ್ನೈ ನ ಭಾರತೀಯ ವಿದ್ಯಾ ಕೇಂದ್ರ ಭವನದಲ್ಲಿ ಪೀಪಲ್ ಫೋರಂ ಆಫ್ ಇಂಡಿಯಾ ಭಾರತ್ ಸೇವಕ್ ಸಮಾಜ್ ಸಂಘಟಿಸಿದ ಕಾರ್ಯಕ್ರಮದಲ್ಲಿ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯ ಚೆನ್ನೈ ಘಟಕದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ ಸ್ಥಾಪಕರು ಹಾಗೂ ಕುಲಪತಿಗಳಾದ ಡಾ. ಪಿ. ಮ್ಯಾನುವಲ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ ಉಪಕುಲಪತಿಗಳು ಹಾಗೂ ತಮಿಳುನಾಡಿನ ನಿವೃತ್ತ ನ್ಯಾಯಾಧೀಶರಾದ ಡಾ. ಕೆ ವೆಂಕಟೇಶನ್, ತಮಿಳುನಾಡಿನ ನಿವೃತ್ತ ಸ್ಪೆಷಲ್ ಕಮಿಷನರ್ ಹಾಗೂ ಪ್ರಿನ್ಸಿಪಲ್ ಸೆಕ್ರೆಟರಿ ಕೆ ಸಂಪತ್ ಕುಮಾರ್, ವರ್ಲ್ಡ್ ಫೀಸ್ ಇನ್ಸ್ಟಿಟ್ಯೂಟ್ ಯುನೈಟೆಡ್ ನೇಶನ್ ಸ್ಥಾಪಕ ಡಾ. ಪರ್ವಿಂದರ್ ಸಿಂಗ್, ಅಪೋಲೋ ಪ್ಯಾರ ಮೆಡಿಕಲ್ ಮತ್ತು ನರ್ಸಿಂಗ್ ಕೌನ್ಸಿಲ್ ನಿರ್ದೇಶಕಿ ಪ್ರೊ. ಡಾ. ಎಂ. ರಜಿನಿ, ಚೆನ್ನೈನ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಡಾ. ಕೆ. ರಾಜಾರಾಮ್, ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಡಾ. ವಿಪಿನ್ ಗೌರ್, ಜಿಎಚ್‌ಪಿಯು ತಮಿಳುನಾಡು ಮತ್ತು ಪಾಂಡಿಚೆರಿ ಉಪ ನಿರ್ದೇಶಕ ಡಾ.ಕೆ.ವಲರ್ಮತಿ, ಪುದುಚೇರಿ ನಿವೃತ್ತ ಎಸ್ಪಿ ಡಾ. ಎನ್. ರಾಮಚಂದ್ರನ್, ಜಿಎಚ್ಪಿಯು ಎಸ್ ಎಸ್ ಮೀಡಿಯಾ ಅಂಡ್ ಪ್ರೊಡಕ್ಷನ್ ಕೊಲ್ಕತ್ತಾ ರಿಜನ್ ಉಪ ನಿರ್ದೇಶಕ ಸುಭಾಸಿಶ್ ಸಹ, ಜಿಎಚ್‌ಪಿಯು ಕರ್ನಾಟಕ ಉಪ ನಿರ್ದೇಶಕ ಡಾ. ಎಂ. ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.