ಉದ್ಯಾವರ : ನಾರಾಯಣ ಗುರುಗಳ ತತ್ವ ಸಂದೇಶ ಸಾರುವ ಬ್ರಹ್ಮಶ್ರೀ ನಾರಾಯಣಗುರು ಧ್ವಜಸ್ತಂಭದ ಧ್ವಜಾರೋಹಣ ಕಾರ್ಯಕ್ರಮವನ್ನು ರಾಷ್ಟ್ರೀಯ ಬಿಲ್ಲವ ಮಹಿಳಾ ಮಹಾಮಂಡಲದ ಅಧ್ಯಕ್ಷರಾದ ಗೀತಾಂಜಲಿ ಸುವರ್ಣ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಶ್ರೀ ನಾರಾಯಣ ಗುರುಗಳ ಆದರ್ಶ, ಸರ್ವ ಧರ್ಮಗಳ ಬಗ್ಗೆ ಅವರ ಕಾಳಜಿ, ಕೆಳ ವರ್ಗದ ಜನರ ಬಗ್ಗೆ ಅವರಿಗಿದ್ದ ದೂರಗಾಮಿ ಆಲೋಚನೆಗಳಿಂದ ಇಂದು ನಮ್ಮಂತ ಹಿಂದುಳಿದ ವರ್ಗ ಗೌರವದಿಂದ ಬಾಳುವಂತೆ ಮಾಡಿದೆ ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಾಮನ ಬಂಗೇರ ಮಾತನಾಡಿ, ಶ್ರೀ ನಾರಾಯಣಗುರು ಯುವ ವೇದಿಕೆಯಿಂದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಸಮಾಜಮುಖಿ ಕೆಲಸ ನಾರಾಯಣ ಗುರುಗಳ ಆಶಯಕ್ಕೆ ಪೂರಕವಾಗಿದೆ ಮತ್ತು ಇದರಿಂದ ನಾರಾಯಣ ಗುರುಗಳ ಸಂದೇಶವನ್ನು ನಾವು ಅನುಸರಿಸಿದಂತೆ ಆಗುತ್ತದೆ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ನಾರಾಯಣಗುರು ಯುವ ವೇದಿಕೆ ಗೌರವಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಗಿರೀಶ್ ಕುಮಾರ್ ಉದ್ಯಾವರ, ರಾಘು ಸನಿಲ್, ರಿಯಝ್ ಪಳ್ಳಿ, ದಿವಾಕರ್ ಬೊಳ್ಜೆ, ಸಚಿನ್ ಬೊಳ್ಜೆ, ಸಾಯಿನಾಥ್ ಉದ್ಯಾವರ, ಹರೀಶ್ ಪೂಜಾರಿ ಏಣಗುಡ್ಡೆ, ಸತೀಶ್ ಪೂಜಾರಿ ಬೀರಪ್ಪಾಡಿ, ರೊಯ್ಸ್ ಫೆರ್ನಾಂಡಿಸ್, ಸುಹೈಲ್ ಅಬ್ಬಾಸ್, ದಿನೇಶ್ ಪೂಜರಿ, ಸುಪ್ರೀತ್ ಸುವರ್ಣ, ಕಿಶೋರ್ ಕುಮಾರ್, ಗುಣಕರ್ ಸನಿಲ್, ಪ್ರಕಾಶ್ ಬಂಗೇರ, ಜಯ ಪೂಜಾರಿ, ಹರೀಶ್, ಕೇಶವ ಸನಿಲ್ ಮುಂತಾದವರು ಉಪಸ್ಥಿತರಿದ್ದರು.