ಉಚ್ಚಿಲ : ದ.ಕ. ಮೊಗವೀರ ಮಹಾಸಭಾದ ಅಧೀನದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ
ಕರ್ನಾಟಕ ಬ್ಯಾಂಕಿನ ಸಿ.ಎಸ್.ಆರ್ ಅನುದಾನದಿಂದ ಸುಮಾರು 5,20,750 ರೂ. ಮೊತ್ತದ 6 ಆಸನಗಳ ವಿದ್ಯುತ್ ಚಾಲಿತ ವಾಹನವನ್ನು ಗುರುವಾರ ಸಂಜೆ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.
ಮೊಗವೀರ ಮುಂದಾಳು, ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರದ ರುವಾರಿ ನಾಡೋಜ ಡಾ. ಜಿ ಶಂಕರ್‌ರವರಿಗೆ ಕರ್ನಾಟಕ ಬ್ಯಾಂಕಿನ ಉಡುಪಿ ರೀಜನಲ್ ಹೆಡ್ ವಾದಿರಾಜ ಭಟ್‌ರವರು ವಾಹನದ ಕೀಲಿಕೈಯನ್ನು ಹಸ್ತಾಂತರಿಸಿದರು.
ಮೊದಲಿಗೆ ದೇವಳದ ಅರ್ಚಕ ವೇದಮೂರ್ತಿ ವಿಷ್ಣುಮೂರ್ತಿ ಭಟ್‌ರವರು ವಾಹನದ ಪೂಜಾ ವಿಧಿವಿಧಾನ ನೆರವೇರಿಸಿದರು.
ಈ ಸಂದರ್ಭ ನಾಡೋಜ ಡಾ. ಜಿ ಶಂಕರ್ ಮಾತನಾಡಿ, ಉಚ್ಚಿಲ ದಸರಾ ಸಂದರ್ಭ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ವಾಹನವು ಉಪಯೋಗವಾಗಲಿದೆ. ಕರ್ನಾಟಕ ಬ್ಯಾಂಕಿನ ಸಂಬಂಧವು ಮಹಾಲಕ್ಷ್ಮೀ ದೇವಸ್ಥಾನದೊಂದಿಗೆ ಉತ್ತಮವಾಗಿದ್ದು, ಇಂತಹ ಕಾರ್ಯಗಳಿಂದ ಸಂಬಂಧ ಇನ್ನಷ್ಟು ಹೆಚ್ಚಾಗಲಿ ಎಂದರು.
ಕರ್ನಾಟಕ ಬ್ಯಾಂಕಿನ ವಾದಿರಾಜ ಭಟ್ ಮಾತನಾಡಿ, ನಮ್ಮ ಬ್ಯಾಂಕಿನ ಸಿಎಸ್‌ಆರ್ ಯೋಜನೆಯಡಿ ನಾವು 6 ಆಸನಗಳ ವಿದ್ಯುತ್ ಚಾಲಿತ ವಾಹನವನ್ನು ಹಸ್ತಾಂತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರ ನೀಡಲಿದ್ದೇವೆ ಎಂದರು.
ಈ ಸಂದರ್ಭ ನಾಡೋಜ ಡಾ. ಜಿ. ಶಂಕರ್, ಗುಂಡು ಬಿ. ಅಮೀನ್, ವಿನಯ್ ಕರ್ಕೇರ, ಗಿರಿಧರ ಸುವರ್ಣ, ಮೋಹನ್ ಬೇಂಗ್ರೆ, ಶರಣ್ ಮಟ್ಟು, ಸುಧಾಕರ ಕುಂದರ್, ಸುಭಾಶ್ಚಂದ್ರ ಕಾಂಚನ್, ನಾರಾಯಣ ಕರ್ಕೇರ, ಸುಜಿತ್ ಸಾಲ್ಯಾನ್ ಮೂಲ್ಕಿ, ಪುಂಡಲೀಕ ಹೊಸಬೆಟ್ಟು, ರವೀಂದ್ರ ಶ್ರೀಯಾನ್, ನಾರಾಯಣ ಕುಂದರ್ ಕಲ್ಮಾಡಿ, ಮೋಹನ್ ಬಂಗೇರ ಕಾಪು, ವಿಠಲ ಕರ್ಕೇರಾ, ಸುಧಾಕರ ಸುವರ್ಣ ಉಚ್ಚಿಲ, ಸುಗುಣಾ ಕರ್ಕೇರ, ಕರ್ನಾಟಕ ಬ್ಯಾಂಕಿನ ಮಹಾಪ್ರಬಂಧಕ ಮನೋಜ್ ಕೋಟ್ಯಾನ್, ಅಂಬಾಗಿಲು ಶಾಖಾ ಪ್ರಬಂಧಕ ಶಶಿಕಾಂತ್ ಬಂಗೇರ ದೇವಳದ ಮನೇಜರ್ ಸತೀಷ್ ಅಮೀನ್ ಪಡುಕೆರೆ ಮತ್ತಿತರರು ಉಪಸ್ಥಿತರಿದ್ದರು.