ಕರಾವಳಿಯಲ್ಲಿ ವಿದ್ಯಾರ್ಥಿಗಳ ದಾರಿ ತಪ್ಪಿಸುವ ವಾತಾವರಣ : ಜಿಲ್ಲಾಧಿಕಾರಿಗೆ ಮನವಿ
Posted On:
06-09-2024 01:25PM
ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ದಾರಿ ತಪ್ಪಿಸುವ ವಾತಾವರಣವನ್ನು ಮಂಗಳೂರು ನಗರದಲ್ಲಿ ನಿರ್ಮಾಣವಾಗುತ್ತಿದೆ ಎಂದು ಸರ್ವಕಾಲೇಜು ವಿದ್ಯಾರ್ಥಿ ಶಕ್ತಿ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಚನ್ ಸಾಲಿಯಾನ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮಂಗಳೂರು ಪಬ್ ಗಳಲ್ಲಿ ಗಾಂಜಾ, ಚರಸ್, ಡ್ರಗ್ಸ್ ಮುಂತಾದ ಮಾದಕ ವಸ್ತುಗಳನ್ನು ಬಳಸುವ ಬಗ್ಗೆ, ಕೆಲವು ಪ್ರಕರಣಗಳಲ್ಲಿ ಬಂಧಿತ ಆರೋಪಿತರ ಹೇಳಿಕೆಗಳಿಂದ ತಿಳಿದುಬಂದಿದೆ. ರಾತ್ರಿ ಸಮಯದಲ್ಲಿ ನಿಯಮ ಮೀರಿ ಮ್ಯೂಸಿಕ್ ಡಿಜೆ ಅಳವಡಿಸಿಕೊಂಡು ಕಾರ್ಯಚರಿಸುತ್ತಿರುವ ಪಬ್ಗಳ ಸಂಖ್ಯೆ ಗಣನೀಯ ಪಬ್‌ಗಳ ವಿರುದ್ಧ ಧ್ವನಿ ಎತ್ತಿದರೆ ಅಂತ ಸಂಘಟನೆಗಳಿಗೆ ಬೆದರಿಕೆ ಕರೆ ಕೂಡ ಬರುತ್ತಿರುವುದರಿಂದ ಯಾರೂ ಕೂಡ ಈ ಬಗ್ಗೆ ದೂರು ನೀಡಲು ಮುಂದಾಗುತ್ತಿಲ್ಲ. ಕದ್ರಿ ಠಾಣಾ ವ್ಯಾಪ್ತಿಯಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೂ ಕಾರ್ಯಚರಿಸುತ್ತಿರುವ ಪಬ್ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಿಲ್ಲ.
ಜೋಡಿಗಳಿಗೆ ಮಾತ್ರ ಪ್ರವೇಶ ಎಂಬ ನಿಯಮ ರೂಪಿಸಿ ಪಬ್ ಗೆ ಪ್ರವೇಶಿಸುವರು ಆನೈತಿಕ ಚಟುವಟಿಕೆ ನಡೆಸಲು ಪರೋಕ್ಷವಾಗಿ ಸಹಕಾರಿಯಾಗಿದ್ದು ಮಂಗಳೂರು ನಗರ, ಪರಿಸರದಲ್ಲಿ ವಸತಿ ಗೃಹಗಳಲ್ಲಿ, ಪ್ರತ್ಯೇಕ ಇರುವ ಮನೆಗಳಲ್ಲಿ, ಪ್ಲಾಟ್‌ಗಳಲ್ಲಿ, ಕೆಲವು ಜನಪ್ರತಿನಿಧಿಗಳ ಬೆಂಬಲದಿಂದ ಆಮಾಯಕ ವಿದ್ಯಾರ್ಥಿನಿಯರನ್ನು, ಯುವತಿಯರನ್ನು, ಮಹಿಳೆಯರನ್ನು ಬಳಸಿಕೊಂಡು ಹೈಟೆಕ್ ಅನೈತಿಕ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ಮಾದಕ ವಸ್ತುಗಳ ಮಾರಾಟ ಚಾಲ ಬಹಿರಂಗವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇಂತಹ ಅಕ್ರಮ ಚಟುವಟಿಕೆ ಮೇಲೆ ಕಠಿಣ ಕ್ರಮ ಕೈಗೊಂಡು, ಸುಮೊಟೋ ಕೇಸ್ ದಾಖಲಿಸಬೇಕು. ಎಲ್ಲಾ ವಿದ್ಯಾರ್ಥಿಗಳು ರಾತ್ರಿ 11 ಗಂಟೆ ಒಳಗೆ ತಮ್ಮ ತಮ್ಮ ಹಾಸ್ಟೆಲ್ ಪಿ ಜಿ ಸೇರಿಕೊಳ್ಳುವಂತೆ ನಿಯಮ ರೂಪಿಸುವ ಮೂಲಕ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಬಹುದಾಗಿದೆ. ಅದೇ ರೀತಿ ಮಂಗಳೂರು ನಗರದಲ್ಲಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆ ವಿರುದ್ಧ ತಾವು, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.