ಉಚ್ಚಿಲ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಉಚ್ಚಿಲ ಇದರ ಆಯೋಜನೆಯಲ್ಲಿ 37ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೂರ್ತಿ ಪ್ರತಿಷ್ಠೆಯು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬಳಿಯ ಶ್ರೀಮತಿ ಶಾಲಿನಿ ಡಾ. ಜಿ ಶಂಕರ್ ತೆರೆದ ಸಭಾಂಗಣದ ಶ್ರೀ ಲಕ್ಷ್ಮಿ ಮಂಟಪದಲ್ಲಿ ನೆರವೇರಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.
ಶುಕ್ರವಾರ ಸಂಜೆ ಮೃಣ್ಮಯ ಗಣೇಶನ ಮೂರ್ತಿಯನ್ನು ಮಲ್ಪೆಯಿಂದ ತಂದು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಇರಿಸಲಾಗಿತ್ತು. ಶನಿವಾರ ಬೆಳಿಗ್ಗೆ ವಿಗ್ರಹ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಶುದ್ಧೀಕರಣ, ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ಗಣ ಯಾಗ, ಮಹಾಪೂಜೆ ನೆರವೇರಿತು.
ಪೂಜಾವಿಧಿ ವಿಧಾನಗಳನ್ನು ಮಹಾಲಕ್ಷ್ಮೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ವಿಷ್ಣುಮೂರ್ತಿ ಉಪಾಧ್ಯಾಯ ನೆರವೇರಿಸಿದರು.
ಇಂದಿನಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ.
ಈ ಸಂದರ್ಭ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಉಪಾಧ್ಯಕ್ಷ ಕೃಷ್ಣ ಕುಮಾರ್ ಪೊಲ್ಯ, ಕಾರ್ಯದರ್ಶಿ ರವಿಕಿರಣ್ ಉಚ್ಚಿಲ, ಜೊತೆ ಕಾರ್ಯದರ್ಶಿ ವಿನೋದ್ ಸುವರ್ಣ, ಕೋಶಾಧಿಕಾರಿ ವೇ.ಮೂ. ವಿಷ್ಣುಮೂರ್ತಿ ಉಪಾಧ್ಯಾಯ, ಮನೋಜ್ ಶೆಟ್ಟಿ ಪೊಲ್ಯ, ಮಹೇಶ್ ಉಚ್ಚಿಲ, ಅಶೋಕ್ ಆರ್. ಕರ್ಕೇರಾ, ಅಶೋಕ್ ಆಚಾರ್ಯ, ವಿಜಯ ಆಚಾರ್ಯ ಉಚ್ಚಿಲ, ಸುನಿಲ್ ಶೆಟ್ಟಿ, ಅಕ್ಷಯ್ ದೇಜಾಡಿ, ಗುರುರಾಜ್ ಉಚ್ಚಿಲ, ಮಹೇಶ್ ಶೆಟ್ಟಿ ಪೊಲ್ಯ, ಮಾಧವ ಆಚಾರ್ಯ ಉಚ್ಚಿಲ, ಅಕ್ಷಯ್ ಉಚ್ಚಿಲ, ಪ್ರಮೋದ್ ಆಚಾರ್ಯ, ವಿಶು ಉಚ್ಚಿಲ, ಅನಿಲ್ ಉಚ್ಚಿಲ, ರಾಜೇಶ್ ಶೆಟ್ಟಿ ಎರ್ಮಾಳು, ಆಯುಷ್ ಪೂಜಾರಿ, ಅಶಿತ್ ಪೊಲ್ಯ, ಕಿರಣ್, ಮನ್ವೀತ್, ಹರ್ಷಿತ್ ಆಚಾರ್ಯ, ಸೃಜನ್ ಪೂಜಾರಿ, ಹರ್ಷಿತ್ ಪೂಜಾರಿ, ಸಂಪತ್ ಪೊಲ್ಯ, ಪ್ರಥಮ್ ಉಚ್ಚಿಲ, ಸಾಗರ್ ಪೊಲ್ಯ ಉಪಸ್ಥಿತರಿದ್ದರು.