ಕಾಪು : ಬೆಳಪು ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಪಣಿಯೂರು ಬೆಳಪುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕುರಿತು ಸಭೆ ಮಂಗಳವಾರ ಎಸ್ ಎನ್ ಕ್ರಯೋಜೆನಿಕ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಜರಗಿತು.
ಬೆಳಪು ಕೈಗಾರಿಕಾ ಪ್ರದೇಶದಲ್ಲಿ ಸುಮಾರು 54 ಕೈಗಾರಿಕಾ ಕೇಂದ್ರಗಳು ಪ್ರಾರಂಭಗೊಳ್ಳಲಿದ್ದು ಈಗಾಗಲೇ ಹಲವಾರು ಸಣ್ಣ ಕೈಗಾರಿಕೆಗಳು ಪ್ರಾರಂಭವಾಗಿದ್ದು ಅದಕ್ಕೆ ಪಣಿಯುರಿನಿಂದ ಬೆಳಪುವಿಗೆ ಬರುವ ಸಂಪರ್ಕ ರಸ್ತೆ ತೀರಾ ಹದೆಗಟ್ಟಿದ್ದು ಇದರ ಅಗಲೀಕರಣಗೊಳಿಸಲು ಅಭಿವೃದ್ಧಿಪಡಿಸಲು ಸುಮಾರು 6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಯನ್ನು KIADB ಯವರು ಸಿದ್ಧಪಡಿಸಿದ್ದು ಸುಮಾರು 2.70 ಎಕರೆ ಜಾಗ ರೈತರಿಂದ ಭೂಸ್ವಾಧೀನ ಪಡಿಸಿಕೊಂಡಿದ್ದು ಗ್ರಾಮಸ್ಥರಿಗೆ ಪರಿಹಾರ ನೀಡದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೆಳಪು ದೇವಿ ಪ್ರಸಾದ್ ಶೆಟ್ಟಿ ಅವರು ತಕ್ಷಣ ಪರಿಹಾರವನ್ನು ರೈತರಿಗೆ ನೀಡಿ ಎಲ್ಲಾ ಸಣ್ಣ ಕೈಗಾರಿಕೆಗಳು ತೀರಾ ನಷ್ಟದಲ್ಲಿ ಇರುವುದರಿಂದ ರಸ್ತೆ ಅಭಿವೃದ್ಧಿಪಡಿಸಿ 6 ಕೋಟಿ ಹೊರೆಯನ್ನ ಕೈಗಾರಿಕಾ ಮಾಲಕರಿಗೆ ಹಾಕುವುದು ಸೂಕ್ತವಲ್ಲ ಇದನ್ನು ಸರಕಾರ, ಸಂಸದರು, ಶಾಸಕರ ಗಮನಕ್ಕೆ ತಂದು ರಸ್ತೆ ಅಭಿವೃದ್ಧಿಗೊಳಿಸಲು ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು.
ಕೈಗಾರಿಕಾ ಪ್ರದೇಶದಲ್ಲಿ ನಿರ್ವಹಣೆ, ತ್ಯಾಜ್ಯ ಹರಿಯುವ ನೀರಿನ ಚರಂಡಿಗಳು ಸರಿಯಾಗಿ ಇಲ್ಲದ ಕಾರಣ ರೈತರ ಜಮೀನಿಗೆ ನೀರು ನುಗ್ಗಿ ಕೃತಕ ನೆರೆ ಉದ್ಭವವಾಗಿರುತ್ತದೆ ಎಂದು ಕೆಇಡಿಬಿಯ ಅಧಿಕಾರಿಗಳ ಗಮನಕ್ಕೆ ತಂದರು ಅಲ್ಲದೆ ಶಿವಾಲಯದಿಂದ ಜನರಿಗೆ ಬೆಳಪು ವಿಗೆ ಕಾಲುದಾರಿಯಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಕೆಐಎಡಿಬಿ ವಲಯದಲ್ಲಿರುವ ಶಿವಾಲಯದ ಅಭಿವೃದ್ಧಿಗೆ ಕೈಗಾರಿಕಾ ಪ್ರದೇಶದ ಮಾಲಕರು ಕೈಜೋಡಿಸಬೇಕು, ಸ್ಥಳೀಯರಿಗೆ ಉದ್ಯೋಗ ಅವಕಾಶವನ್ನು ನೀಡಬೇಕಾಗಿ ಕಾರ್ಖಾನೆಯ ಮಾಲಕರಲ್ಲಿ ವಿನಂತಿಸಿದ್ದರು. ಅಲ್ಲದೆ ಕೈಗಾರಿಕಾ ಪ್ರದೇಶದ ವಿವಿಧ ಸಮಸ್ಯೆಗಳ ಬಗ್ಗೆ ಹಾಗೂ ಕೈಗಾರಿಕಾ ಸ್ಥಳಗಳ ಕ್ರಯಾಸಾದನವನ್ನ ಮಾಡಿ ಕೈಗಾರಿಕಾ ಮಾಲೀಕರಿಗೆ ನೀಡಬೇಕಾಗಿ ಎಸ್ ಎನ್ ಕ್ರಯೋಯೋಜನಿಕ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ನಟರಾಜ ಹೆಗ್ಡೆ ಕೆ ಐ ಡಿ ಬಿ ಯ ಅಧಿಕಾರಿಗಳ ಗಮನಕ್ಕೆ ತಂದರು.
ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವ ಬಡ ಜನರಿಗೆ ಸರಕಾರದ ತೀರ್ಮಾನದಂತೆ ಗುಡಿ ಕೈಗಾರಿಕಾ ಯೋಜನೆ ಅಡಿಯಲ್ಲಿ ವಾಸಿಸುತ್ತಿದ್ದ ಸ್ಥಳವನ್ನು ಮಂಜೂರು ಮಾಡಿ ಕೊಡಿಸುವಂತೆ , ಅಲ್ಲದೆ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಪಾವತಿಸುವಂತೆ ಡಾ ದೇವಿ ಪ್ರಸಾದ್ ಶೆಟ್ಟಿ ಅವರು ವಿನಂತಿಸಿದರು ಇದಕ್ಕೆ KIADB ಹಾಗೂ ಕೈಗಾರಿಕಾ ಇಲಾಖೆ ಅಧಿಕಾರಿಗಳು ಧ್ವನಿಗೂಡಿಸಿದ್ದರು.
ಆರು ಕೋಟಿ ವೆಚ್ಚದಲ್ಲಿ ಕೈಗಾರಿಕಾ ರಸ್ತೆ ಅಭಿವೃದ್ಧಿಪಡಿಸುವ ಮೊತ್ತವನ್ನು ಕೈಗಾರಿಕಾ ಮಾಲೀಕರಿಗೆ ಹೊರೆಯಾಗದ ರೀತಿಯಲ್ಲಿ ಸರಕಾರ ಬರಿಸುವಂತೆ ಮಾನ್ಯ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿಯವರಲ್ಲಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿಪಡಿಸುವಂತೆ ದೂರವಾಣಿ ಮುಖಾಂತರ ಮಾತನಾಡಿದ ಕಾಪು ಶಾಸಕರು ಅವರು ಅದಕ್ಕೆ ಸಂಸದರು ಒಪ್ಪಿಗೆಯನ್ನು ನೀಡಿದರು. ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆಯವರು ರಸ್ತೆ ಕಾಮಗಾರಿಗೆ ಸ್ಪಂದಿಸುವುದಾಗಿ ಭರವಸೆಯನ್ನು ನೀಡಿದರು.
ಬೆಳಪು ಕೈಗಾರಿಕಾ ಪ್ರದೇಶದ ಕೈಗಾರಿಕಾ ವಲಯದ ಮಾಲಕರು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಸಹಾಯಕ ಆಯುಕ್ತರು,
ವಿಶೇಷ ಭೂಸ್ವಾಧೀನ ಅಧಿಕಾರಿ ರಾಜು,
ಜಂಟಿ ನಿರ್ದೇಶಕರು, ಡಿಐಸಿ ಉಡುಪಿ, ನಾಗರಾಜ್
ಡಿಐಸಿ ಸೀತಾರಾಮ ಶೆಟ್ಟಿ, ಉಡುಪಿ, ಕೆಐಡಿಬಿಯ ಅಧಿಕಾರಿಗಳಾದ ದತ್ತಾತ್ರಿ, ಇಂಜಿನಿಯರ್ ಗಣಪತಿ, ರತ್ನಾಕರ್ ಹಾಗೂ ಕೈಗಾರಿಕಾ ಪ್ರದೇಶದ ಮಾಲಕರುಗಳಾದ ವಸಂತ ಹೆಗ್ಡೆ, ಹರೀಶ್ ನಾಯಕ್ ಕಾಪು, ಸುಧಾಕರ್ ಶೆಟ್ಟಿ, ಮಕರ, ದಿನಕರ್ ಬಾಬು, ಕಿರಣ್ ಹೆಗ್ಡೆ, ಭೂಷಣ್ ರಾವ್, ನಾಗರಾಜ್ ಪ್ರಭು, ಸುರೇಶ್ ಶೆಟ್ಟಿ ಅಯೋಧ್ಯಾ, ದುರ್ಗಾ ನಾಯ್ಕ, ಇನ್ನಿತರರು ಉಪಸ್ಥಿತರಿದ್ದರು.