ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕೋತ್ಸವ 2024 ಸಂಪನ್ನ

Posted On: 14-09-2024 09:29PM

ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಸಂಸ್ಥೆಯ ಇನ್ನೋವೇಶನ್ ಘಟಕ, ಐಎಸ್‌ಟಿಇ ಘಟಕ ಮತ್ತು ಐಇಇಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ನಡೆಸಿದ ರಾಷ್ಟ್ರ ಮಟ್ಟದ 36 ಗಂಟೆಗಳ ಹ್ಯಾಕೋತ್ಸವ 2024 ಇದರ ಸಮಾರೋಪ ಸಮಾರಂಭವು ಕಾಲೇಜಿನ ಆವರಣದಲ್ಲಿ ನಡೆಯಿತು.

ಪ್ರೈಮ್ ಸೋಪಿಕ್ ಟೆಕ್ನಾಲಜೀಸ್, ಮಂಗಳೂರು ಇದರ ಸಹ ಸಂಸ್ಥಾಪಕರು ಮತ್ತು ಹಿರಿಯ ತಾಂತ್ರಿಕ ಅಧಿಕಾರಿ ದುರ್ಗಾ ಪ್ರಸಾದ್ ಶೆಟ್ಟಿ ಮಾತನಾಡಿ, ಇಂತಹ ಹ್ಯಾಕಥಾನ್‌ನಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಪಡೆಯಬಹುದಾದ ತಾಂತ್ರಿಕ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಪ್ರಾಚೀನ ಕಾಲದಲ್ಲಿದ್ದ ತಾಂತ್ರಿಕ ಪ್ರಗತಿಯ ಬಗ್ಗೆ ತಿಳಿಸಿದರು. ಸಂಸ್ಥೆಯು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್‌ರವರು ಮಾತನಾಡಿ, ನಕಲಿ ಕರೆ ಪತ್ತೆ, ವಂಚನೆಯಂತಹ ಸಾಮಾಜಿಕ ಸಮಸ್ಯೆಯನ್ನು ಬಗೆಹರಿಸಲು ಇಂತಹ ಕಾರ್ಯಕ್ರಮಗಳು ಪ್ರಮುಖ ವೇದಿಕೆಯಾಗಿದೆ ಎಂದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹ್ಯಾಕೋತ್ಸವದಲ್ಲಿ ನೆಹರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಕೊಯಂಬತ್ತೂರ್ ಇಲ್ಲಿನ ವಿದ್ಯಾರ್ಥಿಗಳ "ಸ್ಟೇಲ್ ಅಪ್" ತಂಡವು ಪ್ರಥಮ ಸ್ಥಾನ ಪಡೆದು ಟ್ರೋಫಿಯೊಂದಿಗೆ 40 ಸಾವಿರ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿತು. ವಿಶ್ವಕರ್ಮ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಪುಣೆ, ವಿದ್ಯಾರ್ಥಿಗಳ "ಟೀಮ್ 7'' ತಂಡವು ದ್ವಿತೀಯ ಸ್ಥಾನ ಪಡೆದು 25 ಸಾವಿರ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿತು, ಎಂಐಟಿ ಮಣಿಪಾಲದ ವಿದ್ಯಾರ್ಥಿಗಳ "ಆಕ್ಟೇವಿಯನ್' ತಂಡ ಮತ್ತು ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ "ಎಲ್ಸನ್ - ಸರ್ಕ್ಸ್" ತಂಡವು 12ಸಾವಿರ ನಗದು ಬಹುಮಾನದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಎನ್‌ಎಂಐಇಟಿ, ಪುಣೆ, ವಿದ್ಯಾರ್ಥಿಗಳ "ಟೀಮ್ ಯುಗ" ತಂಡವು 10 ಸಾವಿರ ನಗದು ಬಹುಮಾನದೊಂದಿಗೆ ಅತ್ಯುತ್ತಮ ಯೋಜನೆ ಪ್ರಶಸ್ತಿಯನ್ನು ಪಡೆದುಕೊಂಡಿತು.