ಎರ್ಮಾಳು : ವಿದ್ಯಾಭ್ಯಾಸ, ಆರ್ಥಿಕತೆ, ರಾಜಕೀಯದ ಕೊರತೆಯಿದ್ದ ಸಂದರ್ಭದಲ್ಲಿಯೂ
ಮೀನುಗಾರ ಸಮಾಜದ ಹಿರಿಯರ ಚಿಂತನೆಯಿಂದ ಭವಿಷ್ಯದ ಹಿತದೃಷ್ಟಿಯಿಂದ ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಸ್ಥಾಪನೆಯಾಗಿದೆ. ಸೊಸೈಟಿಯ ಬೆಳವಣಿಗೆಗೆ ಗ್ರಾಹಕರು, ಷೇರುದಾರರು, ನಿರ್ದೇಶಕರ ಸಹಕಾರ ಮೂಲ ಕಾರಣ. ಉಚ್ಚಿಲ ಶಾಖೆಯಲ್ಲಿ 4 ಲಕ್ಷ ಲಾಭಾಂಶ ಆಗಿದ್ದು, 4 ಕೋಟಿಯ ವ್ಯವಹಾರವಾಗಿದೆ. ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಸೊಸೈಟಿಯ ಅಧ್ಯಕ್ಷರಾದ ದಿನೇಶ್ ಎರ್ಮಾಳು ಹೇಳಿದರು.
ಅವರು ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಇದರ 2023-24 ನೇ ಸಾಲಿನ 71ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸನ್ಮಾನ /ವಿದ್ಯಾರ್ಥಿ ವೇತನ ವಿತರಣೆ : ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯ ಡಾ| ನಾಗೇಶ್ ರವರಿಗೆ ವೈದ್ಯವಾರಿಧಿ ಚಂದ್ರ ಬಿರುದು, ಖ್ಯಾತ ಈಜು ತಜ್ಞ ಈಶ್ವರ್ ಮಲ್ಪೆ ಅವರಿಗೆ ಶರಧಿ ಚಂದ್ರಮ ಬಿರುದು, ಮೊಗವೀರ ಸಮಾಜದ ಹಿರಿಯರಾದ ಪುರಂದರ ಕೆ ಸಾಲ್ಯಾನ್ ಇವರನ್ನು, ಕರಾಟೆಯಲ್ಲಿ ಸಾಧನೆಗೈದ ಬಾಲಪ್ರತಿಭೆ ಸಾನ್ವಿತ್ ಆರ್ ಮೆಂಡನ್ ರನ್ನು ಸನ್ಮಾನಿಸಲಾಯಿತು. ಅತ್ಯಧಿಕ ಅಂಕ ಗಳಿಸಿದ ಸೊಸೈಟಿಯ ಗ್ರಾಹಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಅಗಲಿದ ಸೊಸೈಟಿಯ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸೊಸೈಟಿಯ ಅಧ್ಯಕ್ಷರಾದ ದಿನೇಶ್ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸೊಸೈಟಿಯ ಉಪಾಧ್ಯಕ್ಷರಾದ ದಿಲೀಪ್ ಕುಮಾರ್, ನಿರ್ದೇಶಕರಾದ ಸುಂದರ್ ಸುವರ್ಣ, ಲೋಕೇಶ್, ಶೋಭ ಅಮೀನ್, ರಾಘವ ಕೋಟ್ಯಾನ್, ಲಕ್ಷ್ಮಣ ಸುವರ್ಣ, ಆಶಾ ಕುಂದರ್, ವಿಠಲ್ ಸುವರ್ಣ, ಶಿವಾಜಿ, ಕಾರ್ಯನಿರ್ವಹಣಾಧಿಕಾರಿ ಅನುಷ, ಸಲಹೆಗಾರರಾದ ಚಂದ್ರಕಾಂತ್, ಎರ್ಮಾಳು ಬಡಾ ಮೊಗವೀರ ಮಹಾಸಭಾದ ಉಪಾಧ್ಯಕ್ಷ ಪುರಂದರ ಕೆ ಸಾಲ್ಯಾನ್, ಮೊಗವೀರ ಸಮಾಜದ ಸಂಘಗಳ ಪ್ರಮುಖರಾದ ಆಶಾ ಪುತ್ರನ್, ಗೀತೇಶ್, ಮೀನಾಕ್ಷಿ ಸಾಲ್ಯಾನ್, ಆರತಿ, ಕುಶಾಲಾಕ್ಷಿ, ಶಾಖಾ ವ್ಯವಸ್ಥಾಪಕಿ ಅಶ್ವಿನಿ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಲಕ್ಷ್ಮಣ್ ಕೆ ಸುವರ್ಣ ಪ್ರಾರ್ಥಿಸಿದರು. ಸೊಸೈಟಿ ಅಧ್ಯಕ್ಷ ದಿನೇಶ್ ಎರ್ಮಾಳು ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ಅನುಷ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.