ಹೆಜಮಾಡಿ, ಪಡುಬಿದ್ರಿ, ಎರ್ಮಾಳಿನಲ್ಲಿ ಈದ್ ಮಿಲಾದ್ ಸಂಭ್ರಮ
Posted On:
16-09-2024 07:33PM
ಪಡುಬಿದ್ರಿ : ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯು ಕಾಪು ತಾಲ್ಲೂಕಿನ ಪಡುಬಿದ್ರಿ, ಹೆಜಮಾಡಿ, ಎರ್ಮಾಳಿನಲ್ಲಿ ಸೋಮವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಹೆಜಮಾಡಿಯಲ್ಲಿ ಕನ್ನಂಗಾರ್ ಜಮಾಅತ್ನಿಂದ ಕನ್ನಂಗಾರ್ ಜುಮ್ಮಾ ಮಸೀದಿಯಿಂದ ಹೊರಟ ಜಾಥಾವು ಹೆಜಮಾಡಿ ಪೇಟೆ, ಗುಂಡಿ, ಎನ್.ಎಸ್ ರೋಡ್, ಬೀಡಿನ ಗುಡ್ಡೆ ಮೂಲಕ ರಾಷ್ಟ್ರೀಯ ಹೆದ್ದಾರಿಯಾಗಿ ಕನ್ನಂಗಾರ್ ಜುಮ್ಮಾ ಮಸೀದಿಗೆ ಪ್ರವೇಶಿಸಿತು. ಜಾಥಾದಲ್ಲಿ ಮದ್ರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ ನಡೆಯಿತು.
ಪಡುಬಿದ್ರಿ ಜುಮ್ಮಾ ಮಸೀದಿ ವತಿಯಿಂದ ನಡೆದ ಮೀಲಾದ್ ರ್ಯಾಲಿಗೆ ಕಂಚಿನಡ್ಕ ಜುಮ್ಮಾ ಮಸೀದಿಯಲ್ಲಿ ಚಾಲನೆ ನೀಡಲಾಯಿತು.
ಕಂಚಿನಡ್ಕ ಮಸೀದಿಯಿಂದ ಹೊರಟ ರ್ಯಾಲಿಯು ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ಮೂಲಕ ರಾಷ್ಟ್ರೀಯ ಹೆದ್ದಾರಿ ಪಡುಬಿದ್ರಿ ತಲುಪಿ ಮಾರ್ಕೆಟ್ ರಸ್ತೆಯಾಗಿ ಪಡುಬಿದ್ರಿ ಮಸೀದಿ ಪ್ರವೇಶಿಸಿತು. ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ಸ್ಕೌಟ್ ಗಮನಸೆಳೆಯಿತು.
ಎರ್ಮಾಳು ಜುಮಾ ಮಸೀದಿ ವತಿಯಿಂದ ನಡೆದ ಮೀಲಾದ್ ರ್ಯಾಲಿಯು ಬಡಾ ಎರ್ಮಾಳು ಮಸೀದಿಯಿಂದ ಹೊರಟು ಎರ್ಮಾಳು ಜುಮ್ಮಾ ಮಸೀದಿಗೆ ತಲುಪಿತು.