ಕುಂದಾಪುರ : ಸರಕಾರಿ ಜಮೀನನ್ನು ಕೃಷಿ ಭೂಮಿ ಎಂದು ಅಕ್ರಮವಾಗಿ ಮಹಿಳೆಯೋರ್ವರಿಗೆ ಮಂಜೂರಾತಿ ; ದೂರು ದಾಖಲು
Posted On:
19-09-2024 08:47PM
ಕುಂದಾಪುರ : ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಲೆಕ್ಕಿಗ, ರಾಜಸ್ವ ನಿರೀಕ್ಷರು ಮತ್ತು ತಹಸೀಲ್ದಾರ್ ಸರಕಾರಿ ಜಮೀನನ್ನು ಕೃಷಿ ಭೂಮಿ ಎಂದು ಪರಿಶೀಲಿಸಿ ಅಕ್ರಮವಾಗಿ ಮಹಿಳೆಯೋರ್ವರಿಗೆ ಮಂಜೂರಾತಿ ಮಾಡಿದ ಕುರಿತು ಪತ್ರಕರ್ತ ಕಿರಣ್ ಪೂಜಾರಿ ಜಿಲ್ಲಾಧಿಕಾರಿ ಸಹಿತ ಸಂಬಂಧಿತ ಇಲಾಖೆಗಳಿಗೆ ದೂರನ್ನು ನೀಡಿದ್ದಾರೆ.
ಸಾರ್ವಜನಿಕರ ಕರೆ ಮತ್ತು ದೂರಿನ್ವಯ ಪ್ರಸ್ತುತ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಲೆಕ್ಕಿಗ, ರಾಜಸ್ವ ನಿರೀಕ್ಷರು ಮತ್ತು ತಹಸೀಲ್ದಾರ್ ಸರಕಾರಿ ಜಮೀನನ್ನು ಕೃಷಿ ಭೂಮಿ ಎಂದು ಪರಿಶೀಲಿಸಿ ಅಕ್ರಮವಾಗಿ ಗುಲಾಬಿ ಶೇಡ್ತಿ ಅವರಿಗೆ ಮಂಜೂರಾತಿ ಮಾಡಿ ಕಾನೂನೂ ಬಾಹಿರವಾಗಿ ಮಂಜೂರಾತಿ ಮಾಡಿರುವ ಕುರಿತು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಂಜೂರಾತಿ ಆದೇಶ ಮಾಡಿದ್ದು, ಲೋಪ ದೋಷದಿಂದ ಕೂಡಿದೆ. ಆದೇಶ ನಂಬ್ರ ಎಡಿಎಸ್.ಎನ್ ಸಿ ಆರ್. ಡಿ ಆರ್.01/2020-21 ರ ಆದೇಶ ನೀಡಿದ ಆದೇಶವನ್ನು ಪುನರ್ ಪರಿಶೀಲಿಸಿ RRT/CR/596/2023-24 ಫೈಲ್ ನಲ್ಲಿ ಇರುವ ಎಲ್ಲಾ ಕಡತವನ್ನು ಪರಿಶೀಲಿಸಬೇಕು. ಒಂದು ವೇಳೆ ಅಕ್ರಮ ನಡೆದ್ದದ್ದು ಹೌದು ಎಂದು ಕಂಡು ಬಂದರೆ ಈ ಅಕ್ರಮದಲ್ಲಿ ಭಾಗಿಯಾದ ಎಲ್ಲಾ ಸರಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಉಲ್ಲೇಖಿಸಿದ್ದಾರೆ.