ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಹಾಜಿ ಕೆ. ಉಮ್ಮರಬ್ಬ ಚಂದ್ರನಗರ ಇವರಿಗೆ ನುಡಿ ನಮನ

Posted On: 19-09-2024 10:36PM

ಕಾಪು : ಚಂದ್ರನಗರ ಕಳತ್ತೂರಿನಲ್ಲಿ ಸುಮಾರು 35 ವರ್ಷಗಳಿಂದ ಜನರಲ್ ಸ್ಟೋರ್ ನಡೆಸುತ್ತಿದ್ದ ಸರಳ ಸಜ್ಜನ ವ್ಯಕ್ತಿ ಸಾಮಾಜಿಕ ಧಾರ್ಮಿಕ ಮುಖಂಡ ಬಟರ್ ಫ್ಲೈ ಗೆಸ್ಟ್ ಹೌಸ್ ನ ನಿರ್ದೇಶಕ ಹಾಜಿ ಕೆ. ಉಮ್ಮರಬ್ಬ ಇತ್ತೀಚಿಗೆ ನಿಧನರಾಗಿದ್ದು, ಆವರ ನುಡಿ ನಮನ ಕಾರ್ಯಕ್ರಮವು ಕಳತ್ತೂರು ಚಂದ್ರನಗರದ ಲೋಕೇಶ್ ಭಟ್ ಹಾಗೂ ದಿನೇಶ್ ಆಚಾರ್ಯ ಐಶ್ವರ್ಯ ಇವರ ನೇತೃತ್ವದಲ್ಲಿ ನುಡಿನಮನ ಕಾರ್ಯಕ್ರಮವು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಇವರ ಅಧ್ಯಕ್ಷತೆಯಲ್ಲಿ ಕುಶಲ ಶೇಖರ್ ಶೆಟ್ಟಿ ಇಂಟರ್ ನ್ಯಾಷನಲ್ ಅಡಿಟೋರಿಯಮ್ ನಲ್ಲಿ ನಡೆಯಿತು.

ವಿನಯ ಕುಮಾರ್ ಸೊರಕೆ ಮಾತನಾಡಿ ಹಾಜಿ ಉಮ್ಮರಬ್ಬನವರ ಜೀವನ ಪ್ರತಿಯೊಬ್ಬರನ್ನು ಆತ್ಮೀಯತೆಯಿಂದ ಕಂಡು ಸಮಾಜದಲ್ಲಿ ಶಾಂತಿ ನೆಮ್ಮದಿಗೆ ಅವರು ಇನ್ನೊಂದು ಹೆಸರು ತಪ್ಪಾಗಲಾರದು. ಅವರ ಸಮಾಜ ಸೇವೆಯನ್ನು ಗುರುತಿಸಿ ಗುಣಗಾನ ಮಾಡಿದರು. ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ನಾವು ಒಂದೇ ಊರಿನವರಾಗಿ ಬಾಲ್ಯದ ಒಡನಾಟದ ಬಗ್ಗೆ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ, ಬದ್ರಿಯಾ ಜುಮ್ಮಾ ಮಸೀದಿ ಮಜೂರು ಮಲ್ಲಾರು ಧರ್ಮ ಗುರುಗಳಾದ ಅಬ್ದುಲ್ ರಶೀದ್ ಸಖಾಪಿ, ಕೊಟ್ಟಾರಿ ಕಟ್ಟೆ ಅಶ್ವಥ ಕಟ್ಟೆ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್ ಕಳತ್ತೂರು, ಜನ ಸೇವಾ ಜನ ಸಂಪರ್ಕ ವೇದಿಕೆ ಕಾಪು ಅಧ್ಯಕ್ಷರಾದ ದಿವಾಕರ್ ಬಿ ಶೆಟ್ಟಿ, ಜೀವ ವಿಮಾ ಪ್ರತಿನಿಧಿ ದಿವಾಕರ್ ಡಿ ಶೆಟ್ಟಿ, ಬಳಕೆದಾರರ ವೇದಿಕೆ ಗೌರವ ಅಧ್ಯಕ್ಷರಾದ ಹಾಜಿ ಕೆ.ಅಬೂಬಕ್ಕರ್ ಪರ್ಕಳ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾದ ಶರ್ಪುದ್ದಿನ್ ಶೇಖ್, ಅಯ್ಯಣ್ಣ ಹಿರಿಯ ಪ್ರಾರ್ಥಮಿಕ ಶಾಲೆ ಸಂಚಾಲಕರಾದ ಪ್ರವೀಣ್ ಕುಮಾರ್ ಗುರ್ಮೆ, ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯ ಸ್ಲಾನಿ ಲೆಸ್ ಕೊರ್ದಾ, ಅನಿವಾಸಿ ಭಾರತಿಯ ಉದ್ಯಮಿ ರಜಬ್ ಪರ್ಕಳ, ಉಮಾತ್ಮ ಇದಿನಬ್ಬ ಫ್ಯಾಮಿಲಿ ಮಜೂರು ನಿರ್ದೇಶಕರಾದ ಬಾವು ಚಂದ್ರನಗರ, ಹಾಜಿ ಉಮ್ಮರಬ್ಬನವರ ಪುತ್ರ ಸಮಾಜ ಸೇವಕ ಡಾ. ಮೊಹಮ್ಮದ್ ಫಾರೂಕ್ ಚಂದ್ರನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಭಿನಂದನಾ ಸಮಿತಿ ಸದಸ್ಯರಾದ ರಾಜೇಶ್ ಮೂಲ್ಯ, ಕೃಷ್ಣ ಕುಲಾಲ್ ಕುತ್ಯಾರು, ಜಾನ್ಸನ್ ಕರ್ಕಡ, ಶಶಿಕಾಂತ್ ಆಚಾರ್ಯ,ಅಲ್ವಿನ್ ಕುತ್ಯಾರು, ಗ್ಲಾಡಿಸ್ ಅಲ್ಮೆಡ ಕಳತ್ತೂರು ಸಭೆಯ್ಲಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕರಾದ ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು.