ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಅ.11 : ರಕ್ಷಣಾಪುರ ಜವನೆರ್ ಕಾಪು ಇವರ ಸಾರಥ್ಯದಲ್ಲಿ ಕಾಪು ಪಿಲಿ ಪರ್ಬ - ಹುಲಿ ವೇಷ ಕುಣಿತ ಸ್ಪರ್ಧೆ

Posted On: 07-10-2024 08:10PM

ಕಾಪು : ರಕ್ಷಣಾಪುರ ಜವನೆರ್ ಕಾಪು ಇವರ ಸಾರಥ್ಯದಲ್ಲಿ ಕಾಪು ಪಿಲಿ ಪರ್ಬ ಹುಲಿ ವೇಷ ಕುಣಿತ ಸ್ಪರ್ಧೆ ಅಕ್ಟೋಬ‌ರ್ 11 ರಂದು ಮಧ್ಯಾಹ್ನ 3.30 ಗಂಟೆಗೆ ಕಾಪುವಿನ ಬಂಟರ ಸಂಘದ ಆವರಣದಲ್ಲಿ ಆಯೋಜಿಲಾಗಿದೆಂದು ರಕ್ಷಣಾಪುರ ಜವನೆರ್ ಕಾಪು ತಂಡದ ಅಧ್ಯಕ್ಷ ನವೀನ್ ಎನ್ ಶೆಟ್ಟಿ ತಿಳಿಸಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದಸರಾ ಹಬ್ಬದ ಪ್ರಯುಕ್ತ ರಾಜಕೀಯ ರಹಿತವಾಗಿ “ಕಾಪು ಪಿಲಿ ಪರ್ಬ -02"ನಡೆಯಲಿದ್ದು ಊರು ಪರವೂರಿನ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಝಿ ಕನ್ನಡ ಡ್ರಾಮ ಜೂನಿಯರ್ಸ್ ಸೀಜನ್ 4 ವಿಜೇತೆ ಸಮೃದ್ಧಿ ಮೊಗವೀರ ತಂಡದವರಿಂದ ಯಕ್ಷ ನೃತ್ಯ ರೂಪಕ, ಕಿನ್ನಿಗೊಳಿ ಕ್ರೀಪ್ಸ್ ಇನ್ ಕ್ರಿವ್ ಸ್ಟುಡಿಯೋ ಡ್ಯಾನ್ಸ್ ತಂಡದಿಂದ ನೃತ್ಯ ವೈಭವ, ಕುಣಿತ ಭಜನೆ ನಡೆಯಲಿದೆ.

ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ತಲಾ ಒಂದು ಲಕ್ಷ, ಎಪ್ಪತೈದು ಸಾವಿರ, ಮೂವತ್ತು ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ವಿಶೇಷ ಕರಿಹುಲಿ, ಅಕ್ಕಿಮುಡಿ ಹಾರಿಸುವುದು, ಅತ್ಯುತ್ತಮ ಹುಲಿ, ವೈಯಕ್ತಿಕ ವೇಷ ಕುಣಿತದಾರ, ಮತ್ತು ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುವುದು. ವಿಶೇಷ ಆಕರ್ಷಣೆಯಾಗಿ ಕೋಸ್ಟಲ್‌ವುಡ್‌ನ ಸಿನಿ ತಾರೆಯರು, ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಉಚಿತ ಪ್ರವೇಶ ನೀಡಿದ್ದು ಸುಮಾರು ಹತ್ತಕ್ಕೂ ಅಧಿಕ ಹುಲಿ ವೇಷ ತಂಡ ಭಾಗವಹಿಸುವ ನಿರೀಕ್ಷೆ ಇಡಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭ ರಕ್ಷಣಾಪುರ ಜವನೆರ್ ಕಾಪು ತಂಡದ ಪ್ರಮುಖರಾದ ಗಣೇಶ್ ಕೋಟ್ಯಾನ್, ಕಾರ್ತಿಕ್ ಅಮೀನ್, ರಮೀಜ್ ಹುಸೇನ್, ದೀಪಕ್ ಕುಮಾರ್ ಎರ್ಮಾಳು, ಶಾಂತಲತಾ ಶೆಟ್ಟಿ, ಆಶಾ ಅಂಚನ್, ಅಶ್ವಿನಿ ನವೀನ್, ಅಖಿಲೇಶ್ ಕೋಟ್ಯಾನ್, ದೇವರಾಜ್ ಕೋಟ್ಯಾನ್, ಸುಧೀರ್ ಕರ್ಕೇರ ಉಪಸ್ಥಿತರಿದ್ದರು.