ಉಡುಪಿ : ಶರನ್ನವರಾತ್ರಿ ಮಹೋತ್ಸವದ ಪ್ರಥಮ ದಿನ ಉಡುಪಿಯ ಶ್ರೀ ಭಗವಾನ್ ನಿತ್ಯಾನಂದ ಮಂದಿರದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಉಪಸಮಿತಿಯಾದ ಉಡುಪಿ ನಗರಸಭಾ ವ್ಯಾಪ್ತಿಯ ನೂತನ ಕಚೇರಿಯು ಸಮಿತಿಯ ಮಾರ್ಗದರ್ಶಕರು ಮತ್ತು ಉಡುಪಿ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ, ಸಮಿತಿಯ ನೇತೃತ್ವವನ್ನು ವಹಿಸಿರುವ ಸಾಯಿರಾಧಾ ಡೆವಲಪರ್ಸ್ ನ ಆಡಳಿತ ನಿರ್ದೇಶಕ ಮನೋಹರ್ ಎಸ್. ಶೆಟ್ಟಿ ಮತ್ತು ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಉಪಸ್ಥಿತಿಯಲ್ಲಿ ಜರಗಿತು.
9 ಮಹಿಳೆಯರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಾಸ್ತವಿಕವಾಗಿ ದೇವಳದ ಜೀರ್ಣೋದ್ಧಾರ ನಡೆದು ಬಂದ ಹಾದಿ ಮತ್ತು ಬ್ರಹ್ಮಕಲಶೋತ್ಸವದ ಪೂರ್ವತಯಾರಿಯ ಬಗ್ಗೆ ಮಾತನಾಡಿದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ ಇನ್ನುಳಿದ ಕೆಲವೇ ತಿಂಗಳು ನಾವೆಲ್ಲ ಸೇರಿ ಕಾಪುವಿನ ಅಮ್ಮನ ದೇವಳದ ಜೀರ್ಣೋದ್ಧಾರಕ್ಕಾಗಿ ಶ್ರಮಿಸಬೇಕಿದೆ ಎಂದರು.
ಮಾಜಿ ಶಾಸಕ, ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ ನವದುರ್ಗಾ ಲೇಖನ ಯಜ್ಞ ಎಂಬುವುದು ಕಾಪುವಿನ ಅಮ್ಮನ ಕ್ಷೇತ್ರಕ್ಕೆ ಮತ್ತು ಧಾರ್ಮಿಕ ವಿಚಾರಕ್ಕೆ ನಮ್ಮ ಮಕ್ಕಳು, ಮೊಮ್ಮಕ್ಕಳನ್ನು ಸೇರಿಸುವಂತಹ ಪ್ರಕ್ರಿಯೆ. ಪ್ರತೀ ಮನೆಯಲ್ಲೂ ನವದುರ್ಗಾ ಲೇಖನ ಬರೆಯಬೇಕು. ಕಾಪುವಿನ ಅಮ್ಮನ ಹೆಸರನ್ನು ಲಕ್ಷಾಂತರ ಜನರು ಬರೆದಾಗ ನೂತನ ದೇಗುಲದಲ್ಲಿ ಕಾಪುವಿನ ಅಮ್ಮನ ಸಾನಿಧ್ಯ ವೃದ್ಧಿಯಾಗಿ ಭಕ್ತರ ದುಃಖ ದುಮ್ಮಾನಗಳು ಶೀಘ್ರವಾಗಿ ಗುಣಮುಖವಾಗುತ್ತದೆ ಎಂಬ ನಂಬಿಕೆ ಮತ್ತು ಅಮ್ಮನ ಅಭಯ ವಾಕ್ಯದೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಸಮಿತಿಯ ಪ್ರಧಾನ ಸಂಚಾಲಕ ಕೊಡವೂರು ದಿವಾಕರ ಶೆಟ್ಟಿ, ಮುಖ್ಯ ಸಂಚಾಲಕ ಗಿರೀಶ್ ಅಂಚನ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಅಡ್ಯಂತಾಯ, ಪ್ರಧಾನ ಕಾರ್ಯದರ್ಶಿ ಯೋಗೇಶ್ ವಿ ಶೆಟ್ಟಿ, ಕೋಶಾಧಿಕಾರಿ ಕೆ ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ, ಉಡುಪಿ ನಗರಸಭಾ ಸಮಿತಿಯ ಸಂಚಾಲಕರುಗಳಾದ ರಮೇಶ್ ಶೆಟ್ಟಿ ಕಾಪು ಕೊಲ್ಯ, ಮಂಜುನಾಥ್ ಹೆಬ್ಬಾರ್, ಡಿ. ಬಾಲಕೃಷ್ಣ ಶೆಟ್ಟಿ, ಅಶೋಕ್ ನಾಯ್ಕ್, ಸಂತೋಷ್ ಜತ್ತನ್, ವಿಜಯ ಕೊಡವೂರು, ಸುಂದರ ಕಲ್ಮಾಡಿ, ರಮೇಶ್ ಕಾಂಚನ್, ಕೃಷ್ಣ ರಾವ್ ಕೋಡಂಚ, ಟಿ ಜಿ ಹೆಗ್ಡೆ, ಹರೀಶ್ ಶೆಟ್ಟಿ ಅಂಬಲಪಾಡಿ, ಮಂಜುನಾಥ್ ಶೆಟ್ಟಿಗಾರ್, ಚಂದ್ರಶೇಖರ ಸೇರಿಗಾರ್, ಉದಯ ಕುಮಾರ್ ಶೆಟ್ಟಿ, ಮೋಹನ್ ಶೆಟ್ಟಿ, ಈಶ್ವರ್ ಚಿಟ್ಪಾಡಿ, ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾದ ನಿರೂಪಮ ಪ್ರಸಾದ್, ಸಂಚಾಲಕರುಗಳಾದ ಅಮೃತ ಕೃಷ್ಣಮೂರ್ತಿ, ಪೂರ್ಣಿಮಾ ಸುರೇಶ್ , ಪೂರ್ಣಿಮಾ ಶೆಟ್ಟಿ, ಗಿರಿಜಾ ತಲ್ಲೂರು ಶಿವರಾಮ್ ಶೆಟ್ಟಿ, ಕಲ್ಪನಾ, ಆಶಾ ಜಿ ಶೆಟ್ಟಿ, ವೀಣಾ ಶೆಟ್ಟಿ , ಇಂದಿರಾ ಮಲ್ಪೆ, ಲೇಖನ ಯಜ್ಞ ಸಮಿತಿಯ ಸಂಚಾಲಕ ಸುವರ್ಧನ್ ಉಡುಪಿ ಮತ್ತು ಪ್ರಚಾರ ಸಮಿತಿ ಸಂಚಾಲಕ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಮತ್ತಿತರರು ಉಪಸ್ಥಿತರಿದ್ದರು.