ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ತಾಲ್ಲೂಕು ಕಸಾಪ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗಾಗಿ ಕಥೆ ಹಾಗೂ ಕವನ ಸ್ಪರ್ಧೆ

Posted On: 09-10-2024 07:20PM

ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲ್ಲೂಕು ಘಟಕದವತಿಯಿಂದ ನ.೧೬ ರಂದು ಪಲಿಮಾರಿನಲ್ಲಿ ಜರುಗುವ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕಾಪು ತಾಲ್ಲೂಕಿನ ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕವನ ಸ್ಪರ್ಧೆ, ಪದವಿ ಹಾಗೂ ಸಾರ್ವಜನಿಕ ವಿಭಾಗದವರಿಗಾಗಿ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಎರಡೂ ಸ್ಪರ್ಧೆಗಳಲ್ಲಿ ವಿಜೇತರಾದ ತಲಾ ಐದು ಮಂದಿಗೆ ಆಕರ್ಷಕ ಬಹುಮಾನದೊಂದಿಗೆ ಸಮ್ಮೇಳನದಂದು ಗೋಷ್ಠಿಯಲ್ಲಿ ಕಥೆ ಹಾಗೂ ಕವನಗಳನ್ನು ವಾಚನ ಮಾಡುವ ಅವಕಾಶವೂ ಲಭಿಸಲಿದೆ.

ವಿವರಗಳು ಈ ಕೆಳಗಿನಂತಿವೆ. ಕವನ ಸ್ಪರ್ಧೆ : ವಿದ್ಯಾರ್ಥಿಗಳು ಅಂಚೆ ಕಾರ್ಡಿನಲ್ಲಿ ೨೦ ಸಾಲುಗಳಿಗೆ ಮೀರದಂತೆ ಸ್ವರಚಿತ ಕವನವನ್ನು ಬರೆದು ಕಳುಹಿಸಬೇಕು. ಕವನವು ಬೇರೆಲ್ಲೂ ಪ್ರಕಟವಾಗಿರಬಾರದು. ಯಾವುದೇ ಜಾತಿ, ಧರ್ಮ, ಜನಾಂಗದ ಕುರಿತಾಗಿ ದ್ವೇಷ ಬಾವನೆಯನ್ನು ಕೆರಳಿಸುವಂತಿರಬಾರದು. ಶಾಲಾ ಮುಖ್ಯಸ್ಥರ ಶಿಫಾರಸ್ಸು ಪತ್ರದೊಂದಿಗೆ ಕವನವನ್ನು ಕಳುಹಿಸಬೇಕು. ಕಥಾ ಸ್ಪರ್ಧೆ : ಸಣ್ಣಕಥೆಗಳನ್ನು ಅಂಚೆ ಕಛೇರಿಯ ಇನ್ಲ್ಯಾಂಡ್ ಲೆಟರ್ ನಲ್ಲಿ ಬರೆದು ಕಳುಹಿಸಬೇಕು. ಹಾಗೂ ೧೫೦ ಪದಗಳನ್ನು ಮೀರದಂತಿರಬೇಕು. ಕಥೆಗಳು ಸ್ವಂತ ರಚನೆಯಾಗಿರಬೇಕು ಹಾಗೂ ಎಲ್ಲಿಯೂ ಪ್ರಕಟವಾಗಿರಬಾರದು. ಜಾತಿ, ಧರ್ಮ, ಜನಾಂಗಗಳ ಕುರಿತು ದ್ವೇಷ ಬಾವನೆಯನ್ನು ಮೂಡಿಸಬಾರದು. ಪದವಿ ವಿದ್ಯಾರ್ಥಿಗಳಾದರೆ ಪ್ರಾಂಶುಪಾಲರ ಶಿಫಾರಸು ಪತ್ರ ಮತ್ತು ಸಾರ್ವಜನಿಕರಾದರೆ ತಮ್ಮ ಆಧಾರ್ ಪತ್ರದ ನಕಲು ಪ್ರತಿಯನ್ನು ಕಥೆಯೊಂದಿಗೆ ಲಗತ್ತಿಸಬೇಕು.

ಕವನ ಹಾಗೂ ಕಥೆಗಳನ್ನು ದಿನಾಂಕ ೨೫-೧೦-೨೪ ರ ಒಳಗೆ ತಲುಪುವಂತೆ ಕಳುಹಿಸಬೇಕಾದ ವಿಳಾಸ : ಶ್ರೀ ನೀಲಾನಂದ ನಾಯ್ಕ್, ಗೌರವ ಕಾರ್ಯದರ್ಶಿಗಳು(ಕಸಾಪ), ಪ್ರಾಂಶುಪಾಲರು, ದಂಡತೀರ್ಥ ಪದವಿ ಪೂರ್ವ ಕಾಲೇಜು, ಉಳಿಯಾರಗೋಳಿ, ಕಾಪು ೫೭೪೧೦೬ ಹೆಚ್ಚಿನ ಮಾಹಿತಿಗಾಗಿ ಮೊಬೈಲ್: ೯೮೪೫೯ ೫೪೮೫೩ ಸಂಪರ್ಕಿಸಬಹುದು ಎಂದು ಕಸಾಪ ಕಾಪು ತಾಲೂಕು ಘಟಕದ ಪ್ರಕಟನೆ ತಿಳಿಸಿದೆ.